ಬೈಟುಕಾಫಿ

ಗುರುವಾಣಿಯ ಜಯಭೇರಿ!

Published On :

ಹದಿನೇಳು ದಿನಗಳ ಕಾಲ ನಡೆದ ಸರ್ವಧರ್ಮ ಸಮ್ಮೇಳನದ ಸುದೀರ್ಘ ಅಧಿವೇಶನದಲ್ಲಿ ಸ್ವಾಮಿ ವಿವೇಕಾನಂದರು ಅನೇಕ ಔಪಚಾರಿಕ ಹಾಗೂ ಅನೌಪಚಾರಿಕ ಉಪನ್ಯಾಸಗಳನ್ನು ನೀಡಿದರು. ಪ್ರತಿದಿನವೂ ಅಧಿವೇಶನದ ಕೊನೆಯಲ್ಲಿ ಸ್ವಾಮೀಜಿಯವರ ಭಾಷಣವಿರುತ್ತಿತ್ತು. ಸಭಿಕರನ್ನು ಕಡೆಯವರೆಗೂ ಕುಳಿತುಕೊಳ್ಳುವಂತೆ ಮಾಡಲು ಸಭೆಯ ಕೊನೆಯಲ್ಲಿ ಸ್ವಾಮೀಜಿ ಭಾಷಣ ಇಡಲಾಗುತ್ತಿತ್ತು. ಜನ ಚಾತಕಪಕ್ಷಿಗಳಂತೆ ಸ್ವಾಮೀಜಿ ಭಾಷಣಕ್ಕಾಗಿ ಕಾಯುತ್ತಿದ್ದರು. ಅಲ್ಲಿ ನೀಡಿದ ಉಪನ್ಯಾಸಗಳಲ್ಲಿ ಸೆಪ್ಟೆಂಬರ್ 11ಮತ್ತು 19ರ 'ಹಿಂದೂ ಧರ್ಮ' ಭಾಷಣಗಳು ವಿಶ್ವಪ್ರಸಿದ್ಧವಾದವು.
ಸ್ವಾಮೀಜಿ ಚಿಕಾಗೋ ಸಮ್ಮೇಳನದಲ್ಲಿ ಅದ್ಭುತ ಯಶಸ್ಸು ಗಳಿಸಿ ಜನಪ್ರಿಯತೆಯ ಶಿಖರವನ್ನೇರಿರುವ ಸುದ್ದಿ ಭಾರತದಲ್ಲಿ ಇನ್ನೂ ಪ್ರಸಾರವಾಗಿರಲಿಲ್ಲ. ಅದು ವರದಿಯಾಗಿದ್ದು ಎರಡು ತಿಂಗಳ ನಂತರ. ಆ ವರ್ತಮಾನ ಭಾರತೀಯರಲ್ಲಿ ಪುಳಕವನ್ನುಂಟು ಮಾಡಿತು. ನವೆಂಬರ್ 15ರಂದು 'ಇಂಡಿಯನ್ ಮಿರರ್‌' ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಪೂರ್ವ ಹೆಸರು ನರೇಂದ್ರನಾಥ ದತ್ತ, ಅವರು ದಕ್ಷಿಣೇಶ್ವರದ ಪೂಜ್ಯ ಪರಮಹಂಸ ರಾಮಕೃಷ್ಣರ ಶಿಷ್ಯರು' ಎಂಬ ಸುದ್ದಿ ಪ್ರಕಟವಾಯಿತು. ಇದನ್ನು ಓದಿದ ಕೊಲ್ಕತ್ತಾ ಮಠದ ಗುರುಭಾಯಿಗಳು ಅತ್ಯಾನಂದದಿಂದ ಕುಣಿದಾಡಿದರು. ರಾಮಕೃಷ್ಣ ಪರಮಹಂಸರು ದೇಹಬಿಡುವ ಕಾಲದಲ್ಲಿ 'ನರೇಂದ್ರ ವಿವೇಕಾನಂದನಾಗಿ ಜಗತ್ತಿಗೇ ಬೋಧಿಸುತ್ತಾನೆ' ಎಂದು ನುಡಿದ ಭವಿಷ್ಯವಾಣಿ ಇಷ್ಟು ಬೇಗ ಸತ್ಯವಾದುದನ್ನು ಕಂಡು ವಿಸ್ಮಯಾನಂದಭರಿತರಾದರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.