ಬೈಟುಕಾಫಿ

ಸ್ವಾಮೀಜಿ ಮತ್ತು ರಾಕ್ ಫೆಲ್ಲರ್

Published On :

ಧನಬಲ, ಬಾಹುಬಲ, ಅಧಿಕಾರಬಲ ಇವುಗಳನ್ನು ಮೀರಿದ್ದು ಶೀಲಶಕ್ತಿ. ಇದರ ಬಲದಿಂದಲೇ ಸ್ವಾಮಿ ವಿವೇಕಾನಂದರ ಸನಿಹ ಬಂದವರು ತಮಗರಿವಿಲ್ಲದೆ ಅವರ ತೀವ್ರ ಪ್ರಭಾವಕ್ಕೊಳಪಡುತ್ತಿದ್ದರು. ಅವರಲ್ಲಿ ಅಮೆರಿಕದ ಆಗರ್ಭ ಶ್ರೀಮಂತ ರಾಕ್ ಫೆಲ್ಲರ್ ಒಬ್ಬ.
ಒಬ್ಬ ಪರದೇಶಿ ಸನ್ಯಾಸಿಯನ್ನು ಭೇಟಿಯಾಗುವುದು ತನ್ನ ಪ್ರತಿಷ್ಠೆಗೆ ಕುಂದು ಎಂದು ಭಾವಿಸಿದ್ದ ರಾಕ್ ಫೆಲ್ಲರ್ ಒಂದು ದಿನ ಇದ್ದಕ್ಕಿದ್ದಂತೆಯೇ ಸ್ವಾಮೀಜಿ ಉಳಿದಿದ್ದ ಸ್ನೇಹಿತನ ಮನೆಗೆ ಬಂದ. ನೇರವಾಗಿ ಸ್ವಾಮೀಜಿ ವಿಶ್ರಾಂತಿ ಕೋಣೆಗೆ ನುಗ್ಗಿದ. ಸ್ವಾಮೀಜಿ ಆ ಸಮಯದಲ್ಲಿ ಏನನ್ನೋ ಬರೆಯುತ್ತಿದ್ದರು. ಇದರಿಂದ ಫೆಲ್ಲರ್‌ನಿಗೆ ಅವಮಾನವಾದಂತಾಯಿತು. ಬಳಿಕ ಸ್ವಾಮೀಜಿ ಅವನ ಪೂರ್ವವೃತ್ತಾಂತದ ಬಗ್ಗೆ ಪ್ರಸ್ತಾಪಿಸಿದರು. ತನ್ನೊಬ್ಬನಿಗೇ ತಿಳಿದಿದ್ದ ವಿಷಯಗಳು ಇವರಿಗೆ ಹೇಗೆ ತಿಳಿಯಿತು ಎಂದು ಫೆಲ್ಲರ್ ದಂಗಾದ. ಕೊನೆಗೆ ಸ್ವಾಮೀಜಿ ನೇರವಾಗಿ ಹೇಳಿದರು, 'ನೋಡಿ, ಈಗ ನೀವು ಕೂಡಿಹಾಕಿರುವ ಹಣ ನಿಮ್ಮ ಸ್ವಂತದ್ದಲ್ಲ. ಅದು ಜಗತ್ತಿಗೆ ಸೇರಿದ್ದು. ನಿಮ್ಮ ಕರ್ತವ್ಯವೇನಿದ್ದರೂ ಅವರ ಮೂಲಕ ಜಗತ್ತಿಗೆ ಒಳಿತನ್ನು ಮಾಡುವುದಷ್ಟೆ. ಆ ಹಣಕ್ಕೆ ನೀವೊಬ್ಬ ಮೇಲ್ವಿಚಾರಕರಷ್ಟೆ. ಭಗವಂತ ನಿಮಗೆ ಈ ಭಾಗ್ಯವನ್ನು ಕೊಟ್ಟಿರುವುದೇಕೆಂದರೆ, ಜನರಿಗೆ ನೆರವಾಗಲು ನಿಮಗೊಂದು ಅವಕಾಶವಾಗಲೆಂದು ಮಾತ್ರ.'
ಮೊದಲು ಸ್ವಲ್ಪ ಅಸಮಾಧಾನವಾದರೂ ನಂತರ ಸ್ವಾಮೀಜಿಯ ಮಾತಿನ ಅರ್ಥ ಹೃದಯವೇದ್ಯವಾಯಿತು. ನಂತರ ರಾಕ್ ಫೆಲ್ಲರ್ ತನ್ನ ದುಡಿಮೆಯ ಬಹುಪಾಲು ಹಣವನ್ನು ಲೋಕಹಿತ ಕಾರ್ಯಗಳಿಗಾಗಿ ಸದ್ವಿನಿಯೋಗಿಸಿದ.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.