ಬೈಟುಕಾಫಿ

ಇಂಗ್ಲೆಂಡ್‌ನಲ್ಲಿ ವಿಜಯ ಪತಾಕೆ!

Published On :

'ನೀನಾಗಿ ಹುಡುಕಿಕೊಂಡು ಹೋಗಬೇಡ, ಅದಾಗಿ ಬಂದದ್ದನ್ನು ಬಿಡಬೇಡ; ಭಗವಂತ ಏನನ್ನು ಕಳಿಸಿಕೊಡುತ್ತಾನೆಯೋ ಅದಕ್ಕಾಗಿ ಕಾಯುತ್ತಿರು- ಇದೇ ನನ್ನ ಧ್ಯೇಯ ಮಂತ್ರ'.
ಸ್ವಾಮಿ ವಿವೇಕಾನಂದರು ಮೂರು ತಿಂಗಳುಗಳ ಕಾಲ ಇಂಗ್ಲೆಂಡ್‌ನಲ್ಲಿದ್ದರು. ಅಲ್ಲಿ ಅನೇಕ ಉಪನ್ಯಾಸಗಳನ್ನು, ತರಗತಿಗಳನ್ನು ನೀಡಿದರು.
ಇಂಗ್ಲಿಷರು ನೀಡಿದ ಹೃತ್ಪೂರ್ವಕ ಸ್ವಾಗತ, ಸಭ್ಯತೆ, ಆತ್ಮೀಯತೆ ಸ್ವಾಮೀಜಿಯನ್ನು ಬೆರಗುಗೊಳಿಸಿದವು. ಸ್ವಾಮೀಜಿ ಲಂಡನ್ನಿನ ಪ್ರಿನ್ಸಸ್ ಹಾಲ್‌ನಲ್ಲಿ ಮಾಡಿದ ಉಪನ್ಯಾಸಗಳು ಇಂಗ್ಲಿಷರ ಮನಸೂರೆಗೊಂಡವು. ಅವರ ಅಪೇಕ್ಷೆಯಂತೆಬಹುಬೇಗನೆ ವೇದಾಂತ ತರಗತಿಗಳನ್ನು ಆರಂಭಿಸಿದರು. ಲಂಡನ್‌ನಲ್ಲಿ ಸ್ವಾಮೀಜಿ ತರಗತಿಗಳಿಗೆ ಬಂದ ಮಿಸ್ ಮಾರ್ಗರೆಟ್ ನೊಬೆಲ್‌ಳು ಅವರ ಆಧ್ಯಾತ್ಮಿಕ ಸಂಸ್ಕೃತಿಯ ವಿಸ್ತಾರವನ್ನು ಕಂಡು ಬೆರಗಾದಳು. ಅವರಿಗಿದ್ದ ನಿಖರ-ನಿಶ್ಚಿತ-ವಿಫುಲ ಜ್ಞಾನ ಅವಳನ್ನು ದಿಗ್ಭ್ರಮೆಗೊಳಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿಕ ಹೊಂದಿದ್ದ ಇವಳು ವಿದ್ಯಾಸಂಸ್ಥೆಯೊಂದರ ಸಂಸ್ಥಾಪಕ ಮುಖ್ಯಸ್ಥಳಾಗಿದ್ದಳು. ಸ್ವಾಮೀಜಿಯ ಅನೇಕ ವಿಚಾರಗಳನ್ನು ಪ್ರಶ್ನಿಸುವ ಮೂಲಕ ಸ್ವೀಕರಿಸುತ್ತಿದ್ದಳು. ದಿನದಿನಕ್ಕೆ ಸ್ವಾಮೀಜಿಯ ತೀವ್ರ ಪ್ರಭಾವಕ್ಕೆ ಒಳಗಾದ ನೊಬೆಲ್‌ಳು ನಂತರ ಸ್ವಾಮೀಜಿಯ ಶಿಷ್ಯೆಯಾದಳು. ಇವಳೇ ಮುಂದೆ ಸಿಸ್ಟರ್ ನಿವೇದಿತಾ ಎಂದು ಖ್ಯಾತಳಾದಳು. ಇವಳು ಬರೆದ 'ನಾ ಕಂಡಂತೆ ನನ್ನ ಗುರುದೇವ' ಪುಸ್ತಕ ಗುರುಸ್ಥಾನದಲ್ಲಿರುವವರು ಓದಲೇಬೇಕಾದ ಪುಸ್ತಕ! ಶಿಷ್ಯರನ್ನು ನಿರ್ಮಾಣ ಮಾಡುವಾಗ ಗುರು ವಹಿಸಬೇಕಾದ ಪಾತ್ರವನ್ನು ಇದರಲ್ಲಿ ಮಾದರಿಯಾಗಿ ಗ್ರಹಿಸಬಹುದಾಗಿದೆ.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.