ಪರಿಸ್ಥಿತಿಗೆ ಎದುರಾಗಿ ನಿಂತರು!
ವಿವೇಕಾನಂದರು ವಿಶ್ವಧರ್ಮ ಸಮ್ಮೇಳನಕ್ಕೆ ಹೊರಡಲು ಗುರುಕೃಪೆ ಹಾಗೂ ಜಗನ್ಮಾತೆಯ ಆಶೀರ್ವಾದ ಪಡೆದರು. ಆದರೂ ಅವರ ಈ ಸತ್ಕಾರ್ಯಕ್ಕೆ ಅನೇಕ ಅಡೆತಡೆಗಳು ಎದುರಾದವು. ಮದ್ರಾಸ್ನ ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷರಾಗಿದ್ದ ಕರ್ನಲ್ ಓಲ್ಕಾಟ್ ಅಮೆರಿಕದವರು. ಭಾರತದ ಬಗ್ಗೆ ಪ್ರೀತಿಯುಳ್ಳವರು. ಹಾಗಾಗಿ ಥಿಯೋಸಾಫಿಕಲ್ನಂಥ ಪ್ರಸಿದ್ಧ ಸಂಸ್ಥೆಯ ಒಂದು ಪರಿಚಯಪತ್ರವಿದ್ದರೆ ತಮಗೆ ಅಮೆರಿಕದಲ್ಲಿ ಸಹಾಯವಾಗಬಹುದೆಂದು ಎಣಿಸಿದ ಸ್ವಾಮೀಜಿ ಓಲ್ಕಾಟ್ರಲ್ಲಿ ವಿಷಯ ಪ್ರಸ್ತಾಪಿಸಿದರು. ಆದರೆ ಓಲ್ಕಾಟ್, 'ನೀವು ನಮ್ಮ ಸಂಸ್ಥೆಗೆ ಸೇರಿಕೊಳ್ಳುವುದಾದರೆ ಕೊಡೋಣ' ಎಂದರು.
'ಇಲ್ಲ, ಅದು ಹೇಗೆ ಸಾಧ್ಯವಾದೀತು? ನಾನು ನಿಮ್ಮ ಎಷ್ಟೋ ತತ್ತ್ವಗಳನ್ನು ಒಪ್ಪುವುದಿಲ್ಲವಲ್ಲ! ಹೀಗಿದ್ದ ಮೇಲೆ ನಾನು ನಿಮ್ಮ ಸಂಘವನ್ನು ಸೇರುವ ಪ್ರಶ್ನೆಯೇ ಇಲ್ಲ' ಎಂದರು ಸ್ವಾಮೀಜಿ. 'ಹಾಗಿದ್ದರೆ ಕ್ಷಮಿಸಿ, ನಿಮಗಾಗಿ ನಾನೇನೂ ಮಾಡಲಾರೆ' ಎಂದರು ಓಲ್ಕಾಟ್. ಈ ಉತ್ತರದಿಂದ ಸ್ವಾಮೀಜಿ ಸ್ವಲ್ಪವೂ ವಿಚಲಿತರಾಗಲಿಲ್ಲ. ಬಿರುಗಾಳಿಗೆ ಎದುರಾಗಿ ಈಜುವ ಗಾಳಿಪಟ ಮಾತ್ರ ಆಕಾಶದೆತ್ತರಕ್ಕೆ ಹಾರುವುದು, ಗಾಳಿ ಬಂದ ಕಡೆ ತೂರುವ ತರಗೆಲೆಗಳು ಎಂದೂ ಗಾಳಿಪಟವಾಗಲಾರವು. ಸೇವೆಯಲ್ಲೂ ಸ್ವಾರ್ಥದ ಲೇಪನವನ್ನು ಕಂಡು ಸ್ವಾಮೀಜಿ ಪರಿಚಯಪತ್ರದ ಅಗತ್ಯತೆಯನ್ನು ಕಿತ್ತೊಗೆದರು. ಅಸಹಾಯಕ ಸ್ಥಿತಿಯಲ್ಲಿದ್ದರೂ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳದೆ ಎದೆಗಾರಿಕೆಯಿಂದ ಸನ್ನಿವೇಶವನ್ನು ಬದಲಿಸುವ ಭಾವಬಲಿಷ್ಠತೆ ಸ್ವಾಮೀಜಿಯವರದು.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

