ಅದೃಷ್ಟ ಹುಡುಕಿ ಬರುವುದಿಲ್ಲ!
ಜೀವನದಲ್ಲಿ ಏಳುಬೀಳು ಸಹಜ. ಅದಕ್ಕೆಲ್ಲ ವಾಸ್ತುವಿನ ದೋಷವೆಂದು ಹೆಸರಿಡುವುದು ಸರಿಯಲ್ಲ. ವಾಸ್ತುವನ್ನು ನಂಬಿ ಕೈ ಕಟ್ಟಿ ಕುಳಿತರೆ ಅದೃಷ್ಟ ಹುಡುಕಿಕೊಂಡು ಬರುವುದಿಲ್ಲ. ವಾಸ್ತುವನ್ನು ನಂಬಿ ಕಟ್ಟಿದ ಕಟ್ಟಡ ಕೆಡವಿ ಖರ್ಚಿಗೆ ದಾರಿ ಹುಡುಕುವುದು ಸರಿಯಲ್ಲ. ನಮಗೆ ಬದುಕಲು ಬೇಕಾಗಿರುವುದು ಜೀವನದಲ್ಲಿ ಉತ್ಸಾಹ, ತಿಳಿವಳಿಕೆಯ ನಡವಳಿಕೆ. ಜೀವನದಲ್ಲಿ ಬಂಡಿ ಎಳೆಯಲು ಸಾರಥಿ ಬಲವಾಗಿರಬೇಕು, ಜೊತೆಗೆ ಚಕ್ರವು ಸರಿಯಾಗಿರಬೇಕು. 'ಕೈ ಕೆಸರಾದರೆ ಬಾಯಿ ಮೊಸರು' ಎನ್ನುವ ಹಾಗೆ ನಮ್ಮ ಪರಿಶ್ರಮದ ಜೀವನ ಸುಖ ಜೀವನಕ್ಕೆ ದಾರಿ. ಹಾಗಾಗಿ ನಮ್ಮ ಹಣೆ ಬರಹವನ್ನು ನಾವೇ ಬರೆಯೋಣ, ದುಡಿಯುವ ಕೈಗಳಿಗೆ ಕೆಲಸ ಕೊಡೋಣ. ಕಷ್ಟ ಸುಖಗಳಿಗೆ ಹೊಂದಿಕೊಂಡು ತಪ್ಪುಗಳನ್ನು ತಿದ್ದುಕೊಂಡು ಸುಖ ಜೀವನ ನಡೆಸೋಣ.
- ಎಂ.ಎಸ್. ಉಷಾ ಪ್ರಕಾಶ್, ಮೈಸೂರು
ವಾಸ್ತುಗಾಗಿ ಪೋಲು ಸಲ್ಲದು!
ವಾಸ್ತು ಬೇಕೇ ಬೇಡವೆ ಇನ್ನುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ. ಇತಿಹಾಸದಲ್ಲಿ ವಾಸ್ತುವಿನ ಬಗ್ಗೆ ನಿರೂಪಿತ ಉಲ್ಲೇಖಗಳನ್ನು ಕಾಣಬಹುದು. ಇಂದು ವಾಸ್ತುವಿಲ್ಲದೆ ಜೀವನ ಕಷ್ಟವೆನ್ನುವಷ್ಟರ ಮಟ್ಟಿಗೆ ಬಂದು ತಲುಪಿದ್ದೇವೆ. ಇಂದು ವಾಸ್ತುವೆನ್ನುವುದು ಮಾನಸಿಕ ಭಾವನೆಯಾಗಿದೆ. ಕೆಲವರು ವಾಸ್ತು ಕುರಿತು ಅಬ್ಬರದ ಪ್ರಚಾರ ಮಾಡಿ ವಾಸ್ತು ಅನಿವಾರ್ಯ ಎಂಬಂತೆ ಪ್ರಚೋದಿಸಿಸುತ್ತಿದ್ದಾರೆ. ಇಂದು ಕೆಲವರು ತಮ್ಮ ಮನೆ ಅಥವಾ ಕಟ್ಟಡಗಳನ್ನು ಕಟ್ಟುವಾಗ ಅದೆಷ್ಟೋ ಹಣವನ್ನು ವಾಸ್ತುಗಾಗಿಯೇ ಪೋಲು ಮಾಡುತ್ತಿದ್ದಾರೆ. ವಿಪರ್ಯಸ ಎಂದರೆ ಸಮಾಜದ ಎಲ್ಲಾ ವರ್ಗದ ಜನರು ತಮ್ಮ ಹಣವನ್ನು ಇದಕ್ಕೆ ವೆಚ್ಚ ಮಾಡುತ್ತಿದ್ದಾರೆ. ಕಟ್ಟಿದ ಕಟ್ಟಡವನ್ನು ವಾಸ್ತುಗಾಗಿ ಕೆಡವುವುದು ಮಾಮೂಲಾಗಿದೆ. ನಮ್ಮ ಬಳಿ ಹಣವಿದ್ದರೆ ವಾಸ್ತು ನೋಡಿದರೆ ಸಮಸ್ಯೆ ಇಲ್ಲ. ಬದಲಾಗಿ ಬ್ಯಾಂಕಿನಿಂದ ಸಾಲ ಮಾಡಿ ತೊಂದರೆ ಅನುಭವಿಸುವುದಕ್ಕಿಂತ ಅದರ ಗೋಜಿಗೆ ಹೋಗದಿರುವುದೇ ಉತ್ತಮ.
- ಪ್ರವೀಣ್ ಪೂಜಾರಿ, ಪಣಪಿಲ
ಸ್ವಾರ್ಥಿಗಳ ಬ್ರಹ್ಮಾಸ್ತ್ರ!
ವಾಸ್ತು ಸಮಾಜಕ್ಕೆ ಬೇಕಾಗಿಲ್ಲ. ಅದರ ಅವಶ್ಯಕತೆ ಜನರಿಗೆ ಇಲ್ಲ. ವಾಸ್ತು ಎಂಬುದು ಅವೈಜ್ಞಾನಿಕವಾಗಿದ್ದು ಅದು ಮೂಢನಂಬಿಕೆಗಳ ಭಾಗವೂ ಆಗಿದೆ. ಸ್ವಾರ್ಥಿಗಳು ತಮ್ಮ ಸ್ವಾರ್ಥಕ್ಕಾಗಿ ವಾಸ್ತು ಎಂಬ ಅಸ್ತ್ರವನ್ನು ಜನಸಾಮಾನ್ಯರ ಮೇಲೆ ಪ್ರಯೋಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ವಾಸ್ತು ಜನಸಾಮಾನ್ಯರ ನೆಮ್ಮದಿ ಹಾಳುಮಾಡುತ್ತಿದೆ. ವಿದ್ಯಾವಂತರೂ ಈ ಮೌಢ್ಯಕ್ಕೆ ಬಲಿಯಾಗುತ್ತಿರುವುದು ದುರಂತ. ಕಷ್ಟಪಟ್ಟು ಕಟ್ಟಿರುವ ಮನೆಗಳ ಕೊಠಡಿ, ಬಾಗಿಲು, ಕಿಟಕಿಗಳನ್ನು ವಾಸ್ತುವಿನ ಹೆಸರಿನಲ್ಲಿ ಬದಲಾಯಿಸಿ ಲಕ್ಷಾಂತರ ರುಪಾಯಿ ವ್ಯಯ ಮಾಡಿ ಸಾಲದ ಕೂಪಕ್ಕೆ ಸಿಲುಕುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಕೆಲವೇ ಮಂದಿ ಹುಟ್ಟುಹಾಕಿದ ವಾಸ್ತು ಎಂಬ ಈ ಅಸಾಮಾಜಿಕ ಪದ್ಧತಿಯು ದಿನಗಳೆದಂತೆ ಧಾರ್ಮಿಕ ಸ್ವರೂಪ ಪಡೆದುಕೊಳ್ಳುತ್ತಿರುವುದು ವಿಪರ್ಯಾಸ.
- ಕೆ.ಎನ್. ಅಕ್ರಂ ಪಾಷ, ಚಿಂತಾಮಣಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

