ಬೈಟುಕಾಫಿ

ಹಕ್ಕಿ ಹಾರಿವೆ, ಚಂದ್ರ ಚಲಿಸಿದೆ

ಹಕ್ಕಿ ಹಾರಿವೆ, ಚಂದ್ರ ಚಲಿಸಿದೆ
Published On :

ಹಕ್ಕಿ ಹಾರಿವೆ, ಚಂದ್ರ ಚಲಿಸಿದೆ
ಇಲ್ಲೊಂದು ಪ್ರಕೃತಿವರ್ಣನೆಯಿದೆ. ಓದಿಕೊಳ್ಳಿ.

ವಿಯತಿ ವಿಲೋಲತಿ ಜಲದಃ ಸ್ಖಲತಿ ವಿಧುಶ್ಚಲತಿ ಕೂಜತಿ ಕಪೋತಃ
ನಿಷ್ಪತತಿ ತಾರಕಾತತಿರಾಂದೋಲತಿ ವೀಚಿರಮರವಾಹಿನ್ಯಾಃ


ಇದರ ಅರ್ಥ: ಹಕ್ಕಿಗಳು ಹಾರಾಡುತ್ತವೆ. ಮೋಡಗಳು ಹನಿ ಚೆಲ್ಲುತ್ತವೆ. ಚಂದಿರನು ಚಲಿಸುತ್ತಾನೆ. ಕೋಗಿಲೆಯು ಕುಹೂಕಾರಗೈಯುತ್ತದೆ. ನಕ್ಷತ್ರಗಳು ಎಲ್ಲೆಲ್ಲೂ ಚೆಲ್ಲಾಡಿದಂತೆ ಕಾಣಿಸುತ್ತವೆ. ಗಂಗಾನದಿಯ ಅಲೆಗಳು ಹೊಯ್ದಾಡುತ್ತವೆ.
ಇದರಲ್ಲೇನು ಮಹಾ ಚಮತ್ಕಾರ ಇದೆ ಎಂದು ನೀವು ಕೇಳಬಹುದು. ಮೇಲ್ನೋಟಕ್ಕೆ ಏನೂ ಇಲ್ಲ. ಆದರೆ ಯಾವ ಸಂದರ್ಭದಲ್ಲಿ ಈ ಚಾಟೂಕ್ತಿ ಹೆಣೆಯಲಾಗಿದೆ ಎಂದು ಗೊತ್ತಾದರೆ ಸ್ವಾರಸ್ಯ ಸ್ಫರಿಸುತ್ತದೆ. ಇದು ಪ್ರಣಯಕೇಳಿಯ ಸಂದರ್ಭದಲ್ಲಿ ಹೆಣ್ಣು ಪುರುಷನ ಮೇಲಿರುವ ಭಂಗಿಯ ವರ್ಣನೆ! ಅದಕ್ಕೆ ಪುರುಷಾಯತವೆಂಬ ಸೊಗಸಾದ ಹೆಸರಿದೆ.
ಈಗ ಒಳಾರ್ಥವನ್ನು ಗ್ರಹಿಸೋಣ: ಚಕ್ರವಾಕ ಪಕ್ಷಿಗಳಂತಿರುವ ಕುಚಯುಗಳ ಆಕೆಯ ಚಲನೆಗನುಗುಣವಾಗಿ ಅತ್ತಿತ್ತ ತೊನೆದಾಡುತ್ತದೆ. ಮುಖಚಂದ್ರಮ ಚಲಿಸುತ್ತಾನೆ. ಕೇಶರಾಶಿ ಬಿಚ್ಚಿ ಮೋಡಗಳಂತೆ ಕವಿದು, ಮುಡಿದ ಹೂವಿನ ದಳಗಳು ಮಳೆಯಂತೆ ಸುರಿಯುತ್ತವೆ. ರತಿಕೇಳಿಯ ಉದ್ವೇಗದಲ್ಲಿ ಅವಳ ಕಂಠ ಕೋಗಿಲೆಯಂತೆ ಸೀತ್ಕಾರಗೈಯುತ್ತದೆ. ಕೊರಳಿನಲ್ಲಿರುವ ಮುತ್ತಿನ ಮಾಲೆ ತುಂಡಾಗಿ ನಕ್ಷತ್ರದಂತಿರುವ ಮುತ್ತುಗಳು ಪ್ರಿಯಕರನ ಮೈಯ ಮೇಲೆ ಚೆಲ್ಲಾಡಿವೆ. ನಾಭಿಪ್ರದೇಶದ ಚರ್ಮದ ಮಡಿಕೆಗಳು ಅಮರನದಿ ಗಂಗೆಯ ಅಲೆಗಳಂತೆ ತುಳುಕಾಡಿವೆ!

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.