ಬೈಟುಕಾಫಿ

ಮಾಹಿತಿ ಸಂಗ್ರಹ ಘಟಕ

Published On :

ಪ್ರತಿ ಪೊಲೀಸ್ ಠಾಣೆಯಲ್ಲೂ ದಾಖಲಾಗುವ ದೂರುಗಳ ಬಗ್ಗೆ ಪ್ರತಿನಿತ್ಯ ಸಂಬಂಧಪಟ್ಟ ವಿಭಾಗದ ಉಪ ಪೊಲೀಸ್ ಆಯುಕ್ತ ಹಾಗೂ ಸಹಾಯಕ ಉಪ ಪೊಲೀಸ್ ಆಯುಕ್ತರ ಗಮನಕ್ಕೆ ತರಬೇಕು. ಅದಾದ ನಂತರ ವಾರಕ್ಕೊಮ್ಮೆ ಆಯಾ ಜಿಲ್ಲೆಯ ಅಪರಾಧ ಮಾಹಿತಿ ಸಂಗ್ರಹ ಘಟಕಕ್ಕೆ (ಸಿಸಿಆರ್‌ಬಿ-ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋ) ಪ್ರತಿಯೊಂದು ದೂರಿನ ಬಗ್ಗೆ ಮಾಹಿತಿ ಸಲ್ಲಿಸಬೇಕು.
ಎಲ್ಲ್ಲ ಪೊಲೀಸ್ ಠಾಣೆಗಳಿಂದ ಮಾಹಿತಿ ಕಲೆಹಾಕುವ ಪೊಲೀಸರು ಒಂದು ವಾರದಲ್ಲಿ, ಒಂದು ತಿಂಗಳಿನಲ್ಲಿ... ಹೀಗೆ ಪ್ರತಿ ತಿಂಗಳು ಎಷ್ಟು ಅಪರಾಧ ಪ್ರಕರಣ ದಾಖಲಾಗುತ್ತವೆ.
ಇದರ ಜೊತೆಗೆ ಪ್ರತಿ ಜಿಲ್ಲೆಯ ಸಿಸಿಆರ್‌ಬಿ ಘಟಕದ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಿಂದ ಸಂಗ್ರಹಿಸುವ ಅಪರಾಧ ಪ್ರಕರಣಗಳ ಬಗ್ಗೆ ಎಸ್‌ಸಿಆರ್‌ಬಿ (ರಾಜ್ಯ ಅಪರಾಧ ಸಂಗ್ರಹ ಘಟಕ)ಗೆ ಅಂಕಿಅಂಶಗಳನ್ನು ಸಲ್ಲಿಸಬೇಕು. ಆ ಅಂಕಿಅಂಶಗಳನ್ನು ಗಮನಿಸಲು ಹಾಗೂ  ಯಾವ ರೀತಿಯ ಅಪರಾಧಗಳು ದಾಖಲಾಗುತ್ತವೆ. ಅವುಗಳನ್ನು ತಡೆಗಟ್ಟಲು ಏನು ಮಾಡಬೇಕು ಎಂಬ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಚರ್ಚಿಸುತ್ತಾರೆ. ಅದಕ್ಕಾಗಿ ಐಜಿಪಿ ವರ್ಗದ ಅಧಿಕಾರಿಯನ್ನು ಪ್ರತ್ಯೇಕವಾಗಿ ನೇಮಿಸಲಾಗಿರುತ್ತದೆ.
ಅದಾದ ನಂತರ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಮಾಹಿತಿಯನ್ನು ಸಂಗ್ರಹಿಸುವ ಎಸ್‌ಸಿಆರ್‌ಬಿ ಅಧಿಕಾರಿಗಳು ಅದನ್ನು ಎನ್‌ಸಿಆರ್‌ಬಿಗೆ (ರಾಷ್ಟ್ರೀಯ ಅಪರಾಧ ಸಂಗ್ರಹ ಘಟಕ) ಕಳುಹಿಸಿಕೊಡುತ್ತಾರೆ.
ವರ್ಷದ ಕೊನೆಯಲ್ಲಿ ಎಲ್ಲ್ಲ ರಾಜ್ಯಗಳಿಂದಲೂ ಅಪರಾಧದ ಬಗ್ಗೆ ಮಾಹಿತಿ ಸಂಗ್ರಹಿಸುವ ಎನ್‌ಸಿಆರ್‌ಬಿ ಅಧಿಕಾರಿಗಳು, ಯಾವ ಜಿಲ್ಲೆಯಲ್ಲಿ ಯಾವ ಪ್ರಕರಣಗಳು ಹೆಚ್ಚಾಗಿವೆ. ಕಳೆದ ವರ್ಷಕ್ಕೂ ಪ್ರಸಕ್ತ ವರ್ಷಕ್ಕೂ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಅಧ್ಯಯನ ಮಾಡಿ ಅದನ್ನು ತಮ್ಮ ವೆಬ್‌ಸೈಟ್‌ನಲ್ಲಿ ದಾಖಲಿಸುತ್ತಾರೆ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.