ಜನಭೀತಿಗಿಂತ ದೈವಭಕ್ತಿಗೆ ಶರಣಾಗಿ
ಸ್ವಾಮಿ ವಿವೇಕಾನಂದರು ಮೌಂಟ್ ಅಬುವಿನ ನಿರ್ಜನ ಸ್ಥಳದಲ್ಲಿದ್ದ ಗುಹೆಯೊಂದರಲ್ಲಿ ಉಳಿದುಕೊಂಡು ಆಧ್ಯಾತ್ಮಿಕ ಸಾಧನೆಯಲ್ಲಿ ನಿರತರಾಗಿದ್ದರು. ನಂತರ ಅವರು ವಕೀಲ ಫೈಯಾದ್ ಅಲಿಖಾನ್ನ ಸ್ವಾಗತದ ಮೇರೆಗೆ ಅವರ ಮನೆಯಲ್ಲಿ ಉಳಿದುಕೊಂಡರು. ಈ ಸಂದರ್ಭದಲ್ಲಿ ವಕೀಲನು ಹಲವಾರು ಉನ್ನತ ಅಧಿಕಾರಿಗಳಿಗೆ ಸ್ವಾಮೀಜಿಯನ್ನು ಪರಿಚಯಿಸಿದನು. ಹಾಗೆ ಬರುವವರಲ್ಲಿ ಜಗಮೋಹನ್ಲಾಲ್ ಅತ್ಯಂತ ಸಂಪ್ರದಾಯಸ್ಥ ವೈಷ್ಣವರು. ಹಲವಾರು ಭಾಷೆಗಳಲ್ಲಿ, ಶಾಸ್ತ್ರಗಳಲ್ಲಿ ಪಾಂಡಿತ್ಯವಿದ್ದವರು. ಆದರೆ ಇವರಿಗೆ ಸಾಧು-ಸಂನ್ಯಾಸಿಗಳೆಂದರೆ ಅಷ್ಟಕ್ಕಷ್ಟೆ. ಅವರು ಸ್ವಾಮೀಜಿಯನ್ನು ನೋಡಿ, 'ಓ ಸರಿ ಸರಿ, ನೋಡಿದರೇ ಗೊತ್ತಾಗುತ್ತದೆ. ಕಾವಿಬಟ್ಟೆ ಹಾಕಿಕೊಂಡು ಅಲೆದಾಡುತ್ತ, ರಾತ್ರಿ ಹೊತ್ತು ಬಾಗಿಲು ಮುರಿಯುವ ಪುಂಡರ ಪೈಕಿ ಇವನೂ ಒಬ್ಬ ಅಷ್ಟೆ' ಎಂದರು.
ಜಗಮೋಹನ್ಲಾಲ್ ಅವರು, 'ಸ್ವಾಮೀಜಿ ನೀವೊಬ್ಬರು ಹಿಂದೂ ಸಾಧುಗಳಾಗಿದ್ದು ಮುಸಲ್ಮಾನರ ಮನೆಯಲ್ಲಿ ಇಳಿದುಕೊಂಡಿದ್ದೀರಲ್ಲ! ನೀವು ತೆಗೆದುಕೊಳ್ಳುವ ಆಹಾರ ಮೈಲಿಗೆಯಾಗಲು ಸಾಧ್ಯವಿಲ್ಲವೆ?' ಎಂದರು.
ಈ ಪ್ರಶ್ನೆಗೆ ಸ್ವಾಮೀಜಿ 'ಏನು ನಿಮ್ಮ ಮಾತಿನ ಅರ್ಥ? ನಾನೊಬ್ಬ ಸಂನ್ಯಾಸಿ! ನಿಮ್ಮ ಸಾಮಾಜಿಕ ಕಟ್ಟುಕಟ್ಟಳೆಗಳನ್ನೂ, ಕಂದಾಚಾರಗಳನ್ನೂ ಮೀರಿ ನಿಂತವನು. ಒಬ್ಬ ಜಾಡಮಾಲಿಯ ಜತೆಗೂ ಊಟಮಾಡಬಲ್ಲೆ. ಇದನ್ನು ದೇವರೂ ಒಪ್ಪುತ್ತಾನೆ. ಶಾಸ್ತ್ರಗಳೂ ಸಮ್ಮತಿಸುತ್ತವೆ. ಎಲ್ಲೆಲ್ಲೂ ನಾನು ಬ್ರಹ್ಮನನ್ನೇ ಕಾಣುತ್ತೇನೆ. ಕ್ಷುದ್ರ ಜಂತುವಿನಲ್ಲೂ ನಾನು ಬ್ರಹ್ಮನ ಆವಿರ್ಭಾವವನ್ನು ಕಾಣುತ್ತೇನೆ. ನನಗೆ ಯಾವುದೂ ಮೇಲಲ್ಲ, ಕೀಳೂ ಅಲ್ಲ' ಎಂದು ಗುಡುಗಿದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

