ಬೈಟುಕಾಫಿ

ಬಾಲವಿಲ್ಲದ ಸುಂದರಿ

ಬಾಲವಿಲ್ಲದ ಸುಂದರಿ
Published On :

ಪ್ರತಿಯೊಬ್ಬರ ಸೌಂದರ್ಯದ ಕಲ್ಪನೆಯೂ ವಿಶಿಷ್ಟವಾಗಿರುತ್ತದೆ. ಅದರಲ್ಲೂ, ಮದುವೆಗಾಗಿ ಹೆಣ್ಣು/ಗಂಡು ಹುಡುಕುವಾಗ ಈ ಸೌಂದರ್ಯದ ಕಲ್ಪನೆಯ ಅವಾಂತರಗಳು ತಾರಕ್ಕಕ್ಕೇರುತ್ತವೆ. ಒಬ್ಬನಿಗೆ ಉದ್ದ ಜಡೆಯ ಹುಡುಗಿಯೇ ಬೇಕು. ಅದರಿಂದೇನು ನೇಣು ಹಾಕಿಕೊಳ್ಳುವುದಕ್ಕುಂಟೆ? ಇನ್ನೊಬ್ಬಳಿಗೆ ತನ್ನ ಗಂಡನಾಗುವವನಿಗೆ ಮೀಸೆ ಇದ್ದೇ ಇರಬೇಕು. ಮೀಸೆ ಇದ್ದರೇನು ಅದರಿಂದ ಕಸ ಗುಡಿಸುವುದಕ್ಕಾಗುತ್ತದೆಯೆ? ಆದರೂ ಒಬ್ಬೊಬ್ಬರ ಚೆಲುವಿನ ಪರಿಕಲ್ಪನೆ ಒಂದೊಂದು ಥರ ಎಂದು ಒಪ್ಪಿಕೊಳ್ಳಲೇಬೇಕು.
ರಾಮ, ಸೀತೆ, ಲಕ್ಷ್ಮಣರು ವನವಾಸ ಮುಗಿಸಿ, ರಾವಣನನ್ನು ಗೆದ್ದು, ಮರಳಿ ಬರುತ್ತಿದ್ದಾಗ ಕಿಷ್ಕಿಂಧೆಗೊಮ್ಮೆ ಭೇಟಿ ಕೊಟ್ಟರಂತೆ. ಅಲ್ಲಿನ ಹೆಣ್ಣು ಮಂಗಗಳಿಗೋ, ರಾಮನ ಹೆಂಡತಿಯನ್ನು ನೋಡುವ ಕುತೂಹಲ. ಅವರೆಲ್ಲ ಅದೇ ಮೊದಲ ಬಾರಿಗೆ ಮಾನವ ರಾಜಕುಮಾರಿಯೊಬ್ಬಳನ್ನು ನೋಡುತ್ತಿರುವುದು. ಸೀತೆಯ ರೂಪವನ್ನು ಅವರು ಪರಸ್ಪರ ತಮ್ಮಲ್ಲೇ ಬಣ್ಣಿಸಿಕೊಂಡ ರೀತಿ ಹೀಗಿತ್ತು:

ಗೌರೀ ತನುರ್ನಯನಮಾಯತಮುನ್ನತಾ ಚ
ನಾಸಾ ಕಟೀ ಪೃಥುತಟೀ ಚ ಪಟೀ ವಿಚಿತ್ರಾ
ಅಂಗಾನಿ ರೋಮರಹಿತಾನಿ ಹಿತಾಯ ಭರ್ತುಃ
ಪುಚ್ಛಂ ನ ತುಚ್ಛಮಿತಿ ಕುತ್ರ ಸಮಸ್ತವಸ್ತು


ಈಕೆಯ ಶರೀರ ನಮ್ಮಂತೆ ಕಪ್ಪಗಿಲ್ಲ, ಬಿಳಿ ಬಣ್ಣದಿಂದ ಕೂಡಿದೆ. ಇವಳ ಕಣ್ಣುಗಳು ನಮ್ಮಂತೆ ಚಿಕ್ಕದಿಲ್ಲ, ವಿಶಾಲವಾಗಿದೆ. ಮೂಗು, ಸೊಂಟಗಳೆಲ್ಲ ಚಿಕ್ಕದಾಗಿವೆ. ಮೈಯಲ್ಲಿ ನಮ್ಮಂತೆ ರೋಮಗಳು ಇಲ್ಲ. ಸೊಂಟದಲ್ಲಿ ನಾರುಡುಗೆ ಧರಿಸಿದ್ದಾಳೆ. ಇವಳ ಸ್ಪರ್ಶವೇನೋ ಆಕೆಯ ಗಂಡನಿಗೆ ತೃಪ್ತಿ ಕೊಡಬಹುದು. ಅದೆಲ್ಲ ಓಕೆ, ಆದರೆ ಸೊಂಟದಲ್ಲಿ ಬಾಲವಿಲ್ಲದವಳು ಯಾವ ಸೀಮೆ ಸುಂದರಿ!?

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.