ಬೈಟುಕಾಫಿ

ಚಾಣಾಕ್ಷ ಸ್ಥಳೀಯರನ್ನು ಚುನಾಯಿಸಿ

Published On :

ಪ್ರಜಾಪ್ರಭುತ್ವದಡಿಯಲ್ಲಿ 18 ವರ್ಷದ ಪ್ರತಿಯೊಬ್ಬ ಭಾರತೀಯ ಪ್ರಜೆ ಮತ ಹಾಕುವುದರ ಮೂಲಕ ತನ್ನ ಹಕ್ಕನ್ನು ಚಲಾಯಿಸಬೇಕು. ಅಭ್ಯರ್ಥಿಯು ಸ್ಥಳೀಯನಾಗಿರಬೇಕು, ಆ ಕ್ಷೇತ್ರದ ಸಮಸ್ಯೆಗಳನ್ನರಿತಿರಬೇಕು. ಪ್ರಮುಖವಾಗಿ ಬುದ್ಧಿವಂತನಾಗಿರಬೇಕು. ಇಂಥವರನ್ನು ಆಯ್ಕೆ ಮಾಡಿ ಕಳುಹಿಸಿದಾಗ ಮಾತ್ರ ಮತಕ್ಕೆ ನ್ಯಾಯ ದೊರೆಕಿಸಿಕೊಟ್ಟಂತಾಗುತ್ತದೆ, ಇವರಿಂದ ಕ್ಷೇತ್ರದ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಪ್ರಧಾನಿ ವ್ಯಕ್ತಿಯನ್ನು ನಂಬಿ ಮತ ಹಾಕುವುದು ಸರಿಯಲ್ಲ. ಸ್ಥಳೀಯ ಅಭ್ಯರ್ಥಿಯಲ್ಲದೇ ರಾಷ್ಟ್ರೀಯ ಪಕ್ಷದ ವರ್ಚಸ್ಸನ್ನು ಮುಖ್ಯವಾಗಿಟ್ಟುಕೊಂಡ ವ್ಯಕ್ತಿಗೆ ಮತ ಹಾಕುವುದರಿಂದ ದೇಶ ಅಭಿವೃದ್ಧಿ ಕಾಣಬಹುದು.
ಟಡಿ. ಆರ್. ಸುರೇಂದ್ರನಾಥ್, ಹಂಪಿ

ಸ್ಥಳೀಯರು ಅಷ್ಟು ಸೂಕ್ತವಲ್ಲ
ದೇಶದ ಹಿತವನ್ನು ನಾವು ಗಮನದಲ್ಲಿರಿಸಿಕೊಂಡು ಮತವನ್ನು ನೀಡಬೇಕಾಗುತ್ತದೆ. ಕೇಂದ್ರ ಮಟ್ಟದಲ್ಲಿ ಉತ್ತಮ ಸರ್ಕಾರ ರಚನೆಯಾದರೆ ರಾಜ್ಯ ಮಟ್ಟವೂ ಸುಧಾರಣೆಯ ಹಾದಿ ಹಿಡಿಯುತ್ತದೆ. ಒಳ್ಳೆಯ ಪ್ರಧಾನಿ ನೇಮಕವಾದರೆ ದೇಶವೂ ಅಭಿವೃದ್ಧಿಯ ಹಾದಿ ಹಿಡಿದಂತೆಯೇ ಸರಿ. ದೇಶದ ಚುಕ್ಕಾಣಿಯನ್ನು ಹಿಡಿಯುವವನನ್ನು ಯೋಚಿಸಿ ನೇಮಕ ಮಾಡುವುದು ಪ್ರಜೆಗಳ ಕರ್ತವ್ಯ. ದೇಶವನ್ನು ಯಾವ ರೀತಿ ಮುಂದುವರೆಸಬೇಕು ಎಂಬುದು ಪ್ರಧಾನಿಯ ಕೈಯಲ್ಲಿ ಮಾತ್ರ ಇರುವುದು. ಆದುದರಿಂದ ಪ್ರಧಾನಿಯನ್ನು ಕೇಂದ್ರೀಕರಿಸಿ ಮತ ನೀಡುವುದೇ ಸೂಕ್ತ. ಆಗ ನಮ್ಮ ದೇಶದ ಎಲ್ಲಾ ರಾಜ್ಯಗಳು ಲಯ ಕಂಡುಕೊಳ್ಳುತ್ತವೆ. ಸ್ಥಳೀಯ ಅಭ್ಯರ್ಥಿಯನ್ನು ಪರಿಗಣಿಸುವುದು ಅಷ್ಟು ಸೂಕ್ತವಲ್ಲ, ಸಮಂಜಸವೂ ಅಲ್ಲ.
-ಅವಿನಾಶ್. ಎಸ್. ಬೋರಂಚಿ, ಚಿಂಚೋಳಿ

ಸ್ಥಳೀಯ ಅಭ್ಯರ್ಥಿಗೇ ಪ್ರಾಶಸ್ತ್ಯ
ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸಿದರೆ ಕ್ಷೇತ್ರ ಪ್ರಗತಿ ಸಾಧಿಸುತ್ತದೆ. ಅಲ್ಲಿಯ ಜನಜೀವನದ ಮಟ್ಟ ಸುಧಾರಿಸುತ್ತದೆ. ಸಾಮಾನ್ಯ ಜನರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಸಿಗುವವರು ಸ್ಥಳೀಯ ಅಭ್ಯರ್ಥಿಯೇ ಹೊರತು ಪ್ರಧಾನಿಯಲ್ಲ. ಗ್ರಾಮಗಳೇ ಅಭಿವೃದ್ಧಿಯಾಗದಿದ್ದರೆ ದೇಶವೆಲ್ಲಿ ಅಭಿವೃದ್ಧಿಯಾಗುತ್ತದೆ? ಮನೆಗೆ ತಳಪಾಯ ಹೇಗೆ ಸುಭದ್ರವಾಗಿರಬೇಕೋ ಹಾಗೆಯೇ ದೇಶಕ್ಕೆ ಸ್ಥಳೀಯ ಅಭ್ಯರ್ಥಿ ಸಮರ್ಥನಾಗಿರಬೇಕು. ಸಾಮಾನ್ಯ ಜನರ ಪರಿಸ್ಥಿತಿಗಳನ್ನು ಪ್ರಧಾನಿಗೆ ತಿಳಿಸಬೇಕಾದರೆ ಸ್ಥಳೀಯ ಅಭ್ಯರ್ಥಿಗಳು ಅವಶ್ಯಕ. ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧಗಳನ್ನು ಕಲ್ಪಿಸಿಕೊಳ್ಳಲು ಅವಕಾಶವಿರುವುದು ಸ್ಥಳೀಯ ಅಭ್ಯರ್ಥಿಗೇ ಹೊರತು ಪ್ರಧಾನಿಗಲ್ಲ. ಉತ್ತಮ ಅಭ್ಯರ್ಥಿ, ಉತ್ತಮ ಮತ ಉತ್ತಮ ಪ್ರಗತಿಯತ್ತ ಮತದಾರರ ಗುರಿಯಿರಬೇಕು.
ಟರಮ್ಯಾ ಹೆಚ್. ವಿ.


'ಜಗುಲಿ'ಯಲ್ಲಿ ಈ ಸಲದ ವಿಷಯ 'ನೀವು ಮತ ಚಲಾಯಿಸುವಾಗ ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸುತ್ತೀರೋ? ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸುತ್ತೀರೋ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.