ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ
ಜ್ವಲಂತ ಸಮಸ್ಯೆಗಳ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಪ್ರಧಾನಿ ಬೇಕು. ಮತಭೇದವಿಲ್ಲದ, ಸಂಕುಚಿತ ಭಾವನೆಯಿಲ್ಲದ ದೃಢ ನಿರ್ಧಾರ ತೆಗೆದುಕೊಳ್ಳಲು ಧೈರ್ಯವಿರುವ ಪ್ರಧಾನಿ ಅವಶ್ಯವಿದೆ. ನಕ್ಸಲರ ಕಾಟ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ, ಅತಿಯಾದ ಭ್ರಷ್ಟಾಚಾರ, ಲಂಗುಲಗಾಮಿಲ್ಲದೆ ಏರುತ್ತಿರುವ ಬೆಲೆಗಳು, ಕಪ್ಪುಹಣದ ವಹಿವಾಟುಗಳ ಬಗ್ಗೆ ನಿಜವಾದ ಕಾಳಜಿ ಇದ್ದು ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡುವಂತಹ ನೇತಾರ ಈಗ ಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ಯಾವುದೇ ಪಕ್ಷದ, ಜಾತಿ ಭೇದ ಮಾಡದ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸುವುದುಸೂಕ್ತ.
-ಎ.ಎಸ್.ಗೋಪಾಲಕೃಷ್ಣ, ಮೈಸೂರು.
ಡೋಂಗಿ ಮುಖಗಳನ್ನ ನೋಡಿದ್ದು ಸಾಕು
ದೇಶಕ್ಕೆ ದಕ್ಷ ಪ್ರಮಾಣಿಕ, ಕರ್ತವ್ಯ ಪ್ರಜ್ಞೆವುಳ್ಳ ನಾಯಕಬೇಕಿದೆ. ದೇಶದ ಇಂದಿನ ಆಡಳಿತ ವ್ಯವಸ್ಥೆ ಬದಲಾಗಬೇಕು. ಅದಕ್ಕೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಪ್ರಜ್ಞೆ, ಅರಿವುವುಳ್ಳ ದಕ್ಷ, ಪ್ರಮಾಣಿಕ ನಾಯಕನ ಅವಶ್ಯಕತೆ ಬಹಳಯಿದೆ. ಅಭಿವೃದ್ಧಿ ಪಥದತ್ತ ಸಾಗುವ ಹಾಗೂ ದೇಶದ ಮುನ್ನಡೆಗೆ ಹೆಚ್ಚು ಒತ್ತು ಕೊಡುವ ಪ್ರಾಮಾಣಿಕತೆಯ ಅಭ್ಯರ್ಥಿ ಬೇಕಿದೆ. ಅಲ್ಲದೇ ದೂರ ದೃಷ್ಟಿ ಇರುವ ನಾಯಕನನ್ನು ಆಯ್ಕೆ ಮಾಡಬೇಕಿದೆ. ಇಂತಹ ಎಲ್ಲಾ ಗುಣಗಳಿರುವ ಪ್ರಧಾನಿ ಅಭ್ಯರ್ಥಿಗಳನ್ನು ಚುನಾಯಿಸೋಣ. ಎಲ್ಲಾ ಪಕ್ಷಗಳ ಡೋಂಗಿಗಳ ಮುಖಗಳನ್ನೆ ನೋಡಿ ಸಾಕಾಗಿದೆ. ಬದಲಾವಣೆಯು ಬೇಕಾಗಿದೆ. ದಕ್ಷನಾಯಕನು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿಯನ್ನು ಹಿಡಿಯುವವನ್ನು ಆರಿಸಿ ಕಳಿಸಬೇಕಾಗಿದೆ.
-ಎಚ್. ಎನ್. ಅನುರಾಧಾ, ಮೈಸೂರು
ಪರೋಕ್ಷವಾಗಿ ಪ್ರಧಾನಿಗೆ ಮತ
ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಚುನಾವಣೆ ಸಹಜ ಪ್ರಕ್ರಿಯೆಯಾಗಿದ್ದು ಕೆಲವು ಮತದಾರರು ಯಾವ ಅಭ್ಯರ್ಥಿಗೆ ಮತ ಹಾಕಬೇಕು, ಅವರು ಯಾವೆಲ್ಲಾ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ಯೋಚಿಸಿ ಮತಚಲಾಯಿಸುವರು. ಕೆಲವರು ಹಣದ ಆಮಿಷಕ್ಕೆ ಬಲಿಯಾಗಿ ತಮ್ಮ ಮತವನ್ನು ಮಾರುವ ಸಂದರ್ಭ ಉಂಟಾಗಿದೆ. ಎಲ್ಲೆಡೆ ಭರಾಟೆಯ ಪ್ರಚಾರದಿಂದ ಮತದಾರನು ನಿಖರ ನಿಲುವನ್ನು ತಾಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಅಭ್ಯರ್ಥಿಯನ್ನೆ ಆರಿಸಬಹುದು. ಆದರೆ ಅವರಲ್ಲಿನ ಗುಣಾವಗುಣವನ್ನು ತುಲನೆ ಮಾಡಿ ಮತಚಲಾಯಿಸಬೇಕು. ಸ್ಥಳೀಯ ಅಭ್ಯರ್ಥಿ ನಿಜವಾದ ಕೆಲಸಗಾರರನಾಗಿದ್ದರೆ ತನ್ನ ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡಿಸುತ್ತಾನೆ. ಆದ್ದರಿಂದ ಸ್ಥಳೀಯ ಅಭ್ಯರ್ಥಿಯನ್ನೆ ಆಯ್ಕೆಮಾಡಿ.
-ಪ್ರವೀಣ್. ಪಿ, ದಾವಣಗೆರೆ
'ಜಗುಲಿ'ಯಲ್ಲಿ ಈ ಸಲದ ವಿಷಯ 'ನೀವು ಮತ ಚಲಾಯಿಸುವಾಗ ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸುತ್ತೀರೋ? ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸುತ್ತೀರೋ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

