ಅಗತ್ಯ ಇರುವಷ್ಟೇ ಕೆಫಿನ್ ಬಳಕೆ!

ವಿಪರೀತ ಆಯಾಸವಾಗಿದೆ ಅಥವಾ ಮಾನಸಿಕವಾಗಿ ತುಂಬಾ ಬಳಲಿದ್ದೀರಿ. ರಿಫ್ರೆಶ್ ಆಗಬೇಕು. ಏನು ಮಾಡುತ್ತೀರಿ? ಕಾಫಿ ಮೊರೆಹೋಗುತ್ತೀರಿ ತಾನೆ? ಮಾನಸಿಕ ದಣಿವನ್ನು ಹೋಗಲಾಡಿಸುವ ಶಕ್ತಿ ಕಾಫಿಯಲ್ಲಿದೆ ಎನ್ನುವುದು ನಮ್ಮ ನಂಬಿಕೆ. ಕೆಲವರಿಗಂತೂ ಗಂಟೆಗೊಮ್ಮೆ ಕಾಫಿ ಕುಡಿಯುವ ಅ್ಯಾಸ. 'ಕಾಫಿಯನ್ನು ಆಗಾಗ ಕುಡಿಯುತ್ತಿದ್ದರೆ ಆಯಾಸವೇ ಆಗುವುದಿಲ್ಲ ಮಾರಾಯ್ರೆ. ಕೆನೆಹಾಲು ಹಾಕಿ ರುಚಿಕಟ್ಟಾಗಿ ಮಾಡಿದರಂತೂ ಎಷ್ಟು ಕುಡಿದರೂ ಸಾಕು ಅಂತ ಅನ್ನಿಸುವುದೇ ಇಲ್ಲ' ಎಂದು ಹೇಳುವವರನ್ನೂ ನಾನು ಕಂಡಿದ್ದೇನೆ.
ಸಾವಿರಾರು ವರ್ಷಗಳಿಂದಲೂ ಕಾಫಿ ಕುರಿತಾಗಿ ಇಂತಹ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ. ಯೂರೋಪ್ನಲ್ಲಿ ಕಾಫಿಯನ್ನು ಎಷಧದ ಉದ್ದೇಶಕ್ಕೆ ಬಳಸಲು ಆರಂಭಿಸಿದ್ದು ಕ್ರಿ.ಶ. 1600ರ ಆಸುಪಾಸಿನಲ್ಲಿ ಎನ್ನುತ್ತದೆ ಇತಿಹಾಸ. ಆ ನಂತರ ಹಲವೆಡೆ ಕಾಫಿಹೌಸ್ಗಳು ತಲೆಎತ್ತಿದವು. ಆದರೆ ಆಶ್ಚರ್ಯ ಎಂದರೆ ವಾಣಿಜ್ಯ ಉದ್ದೇಶದ ದೃಷ್ಟಿಯಿಂದ ಕಾಫಿ ಬಳಕೆ ಇಲ್ಲವೇ ಇಲ್ಲ ಎನ್ನುವ ರೀತಿಯಲ್ಲಿ ಇತ್ತು. ಏಕೆಂದರೆ ಕಾಫಿ ಒಂದು ಔಷಧ, ಅದನ್ನು ವೈದ್ಯರ ಶಿಫಾರಸಿನ ಮೇರೆಗೆ ಮಾತ್ರವೇ ಸೇವಿಸಬೇಕು ಎನ್ನುವ ಭಾವನೆ ಸಾರ್ವತ್ರಿಕವಾಗಿತ್ತು. ಹೀಗಾಗಿ ಡಾಕ್ಟರ್ ಹೇಳಿದರೆ ಮಾತ್ರ ಕಾಫಿ ಕುಡಿಯಬೇಕು ಎನ್ನುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮನೆಯಲ್ಲಿ ಕಾಫಿ ಕುಡಿಯುವವರ ಸಂಖ್ಯೆಯೂ ಕಡಿಮೆಯೇ ಇತ್ತು. ಆದರೆ ಕಾಫಿಯ ಪ್ರಭಾವಕ್ಕೆ ಮಾರುಹೋದವರು ಮಾತ್ರ ಮತ್ತೆ ಮತ್ತೆ ಕಾಫಿಯ ಸೆಳೆತಕ್ಕೆ ಸಿಲುಕುತ್ತಿದ್ದರು. ಮೆದುಳಿನ ಮೇಲೆ ಅದು ಬೀರುವ ಪರಿಣಾಮ ಆ ರೀತಿ ಇತ್ತು. ಕಾಫಿ ಪೇಯವಲ್ಲ, ಅದೊಂದು ಔಷಧ ಎನ್ನುವ ಭಾವನೆ ಸಾರ್ವತ್ರಿಕವಾಗಿತ್ತು. ಕಾಫಿಯನ್ನು ಮನೆಬಳಕೆಗೆ ನಿಷೇಧಿಸಬೇಕು ಎನ್ನುವ ಆಗ್ರಹಗಳೂ ಇದ್ದವು. ಕಾಫಿಯಲ್ಲಿ ಮೆದುಳಿನ ಒತ್ತಡ ಕಡಿಮೆ ಮಾಡುವ ಮಾಯಾಗುಣ ಇದೆ ಎನ್ನುವ ಬಗ್ಗೆ ಯಾವ ತಕರಾರೂ ಇರಲಿಲ್ಲ; ಈಗಲೂ ಇಲ್ಲ!
ವಾಸ್ತವಿಕವಾಗಿ ಕಾಫಿಯಲ್ಲಿನ ಕೆಫಿನ್ ಮೆದುಳಿನ ಶಕ್ತಿ ಹೆಚ್ಚಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ. ಬದಲಿಗೆ ಮೆದುಳಿಗೆ ಘಾಸಿ ಮಾಡುವ ರಾಸಾಯನಿಕಗಳನ್ನು ಹತ್ತಿಕ್ಕುತ್ತದೆ. ನರಗಳು ಅಂಚಿನಲ್ಲಿ ಸ್ರವಿಸುವ ಅಡಿನೊಸಿನ್ ಎನ್ನುವ ರಾಸಾಯನಿಕದ ರೀತಿಯಲ್ಲಿಯೇ ಕೆಫಿನ್ ವರ್ತಿಸುತ್ತದೆ. ತಮಾಷೆ ಎಂದರೆ ಕೆಫಿನ್ ಅನ್ನೇ ಅಡಿನೊಸಿನ್ ಎಂದು ಗ್ರಹಿಸುವ ಮೆದುಳಿನ ಸಂದೇಶ ಸ್ವೀಕರಿಸುವ ತಂತುಗಳು ಆದರದಿಂದ ಬರಮಾಡಿಕೊಳ್ಳುತ್ತವೆ. ಇಲ್ಲಿ ಏನಾಗುತ್ತದೆ ಎಂದರೆ ನಿಜವಾದ ಅಡಿನೊಸಿನ್ ನಿಷ್ಕ್ರಿಯಗೊಳಿಸಿದರೆ, ಕೆಫಿನ್ ಆ ಕಾರ್ಯವನ್ನು ಅತ್ಯಂತ ಜಾಣತನದಿಂದ ನಿರ್ವಹಿಸಿರುತ್ತದೆ. ಇಲ್ಲೂ ಸೋಜಿಗದ ಸಂಗತಿ ಇದೆ. ನಾವು ಸೇವಿಸುವ ಪೂರ್ಣ ಪ್ರಮಾಣದ ಕೆಫಿನ್ ಪರಿಣಾಮ ಬೀರುವುದಿಲ್ಲ. ಅಲ್ಪ ಪ್ರಮಾಣದ ಕೆಫಿನ್ ಮಾತ್ರವೇ ಪ್ರಭಾವ ಬೀರುವುದು. ಕೇವಲ ಎರಡು ಗಂಟೆ ಮಾತ್ರವೇ ಕೆಫಿನ್ನ ಪ್ರಭಾವ ಮೆದುಳಿನ ಮೇಲೆ ಇರುವುದು ಎನ್ನುತ್ತಾರೆ ತಜ್ಞರು. ಇದರ ಅರ್ಥ ಏನು ಅಂದರೆ ನಾವು ಎಷ್ಟೇ ಕೆಫಿನ್ ಸೇವಿಸಿದರೂ ಸಹ ಮೆದುಳು ತನಗೆ ಎಷ್ಟು ಪ್ರಮಾಣದ ಕೆಫಿನ್ ಅಗತ್ಯ ಇದೆಯೋ ಅಷ್ಟನ್ನೇ ಸ್ವೀಕರಿಸುತ್ತದೆ!ಟಿ
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


