ಇಂತಹವರ ಮಧ್ಯೆ ಎಚ್ಚರಿಕೆಯಿಂದಿರಿ
ಬಹುಮುಖ ಪಾದಚಾರಿಗಳಲ್ಲಿ ಮತ್ತೊಬ್ಬನನ್ನು ಸರ್ಪಸಂಚಾರಿ ಎನ್ನಬಹುದು. ಈತ ವಾಹನಗಳು ಸಿಗ್ನಲ್‌ನಲ್ಲಿ ನಿಂತಿದ್ದ ವೇಳೆ ಪಾದಚಾರಿಗಳಿಗೆ ಇರುವ ಜೀಬ್ರಾ ಕ್ರಾಸ್ ಬಳಸದೆ, ಯಾವುದೇ ಭಯವಿಲ್ಲದೆ ವಾಹನಗಳ ಮಧ್ಯೆಯೇ ಅಡ್ಡಾದಿಡ್ಡಿ ನುಗ್ಗಿ ಪರಾರಿಯಾಗುತ್ತಾನೆ. ಆತ ಸಹಜವಾಗಿ ಎಲ್ಲರಿಗೂ ಕಾಣುತ್ತಾನೆ. ಅವನ ಬಗ್ಗೆ ಎಚ್ಚರವಿರಲಿ.
ನಿಶಾಚರಿ ಸಂಚಾರಿ: ಈತನನ್ನು ನಿಶಾಚರಿ ಸಂಚಾರಿ ಎನ್ನಬಹುದು. ಇಂತಹ ವ್ಯಕ್ತಿಗಳನ್ನು ಸಾಮಾನ್ಯವಾಗಿ ರಾತ್ರಿ ವೇಳೆ ಮಾತ್ರ ಕಾಣಬಹುದು. ಸಿಗ್ನಲ್ ಜೀಬ್ರಾ ಪಟ್ಟಿ, ವಾಹನ ಯಾವುದನ್ನೂ ಲೆಕ್ಕಿಸದೆ ಬರುತ್ತಾನೆ. ಅಂತಹವನನ್ನು ಕಂಡಾಗ ವಾಹನವನ್ನು ನಿಲ್ಲಿಸಿ, ಅವರು ಮುಂದೆ ಹೋದ ಮೇಲೆ ವಾಹನ ಚಲಾಯಿಸಿ.
ಮೋಜಿನ ಮೆರವಣಿಗೆ: ಸಂಚಾರಕ್ಕೆ ಅತಿ ದೊಡ್ಡ ತೊಂದರೆ ಎಂದರೆ ಮೆರವಣಿಗೆಗಳು. ಸಾಕಷ್ಟು ರಸ್ತೆಗಳಲ್ಲಿ ಇಂತಹ ಮೆರವಣಿಗೆ ಮಾಡುವುದು ಕಾಣಸಿಗಬಹುದು. ಮೆರವಣಿಗೆಗೂ ಮುನ್ನ ಸಂಚಾರ ಪೊಲೀಸರಿಂದ ಒಪ್ಪಿಗೆ ಪಡೆಯಬೇಕು. ಆದರೆ, ಸಾಕಷ್ಟು ಮಂದಿ ಒಪ್ಪಿಗೆ ಪಡೆಯದೆ ಮೆರವಣಿಗೆ ಮಾಡುತ್ತಾರೆ. ಅಂತಹ ಸಮಯದಲ್ಲಿ ಆ ರಸ್ತೆಯಲ್ಲಿ ಸಂಚರಿಸಬೇಡಿ. ಅನಿವಾರ್ಯವಾಗಿ ಆ ರಸ್ತೆಗೆ ಹೋದರೆ ನಿಧಾನವಾಗಿ ಮೆರವಣಿಗೆ ಹಿಂದೆ ಸಂಚರಿಸಿ.
ಮಕ್ಕಳ ಬಗ್ಗೆ ಎಚ್ಚರ: ಆಟವಾಡುವಾಗ ಪುಟಾಣಿಗಳು ಗಾಳಿಪಟ,ಚೆಂಡಿನ ಹಿಂದೆ ಓಡುತ್ತಿರುತ್ತಾರೆ. ಅದೇ ರೀತಿ ಸಾಕಷ್ಟು ಮಕ್ಕಳು ರಸ್ತೆ, ವಾಹನ ಯಾವುದನ್ನೂ ಗಮನಿಸದೆ ತಮ್ಮ ಆಟದಲ್ಲಿ ತಲ್ಲೀನರಾಗಿರುತ್ತಾರೆ. ಹಾಗಾಗಿ ಅಂತಹ ಮಕ್ಕಳ ಬಗ್ಗೆ ಗಮನವಿರಲಿ.ಟಿ
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

