ರಕ್ತಪರೀಕ್ಷೆ ಮಾಡಿಸಿಕೊಂಡಿರಾ?

ನಿಮಗೊಂದು ಕುತೂಹಲದ ಸಂಗತಿ ಹೇಳಬೇಕು. ನಿಯಮಿತ ರಕ್ತಪರೀಕ್ಷೆ ನಿಮ್ಮ ಆಹಾರದ ಇತಿಹಾಸ ಬಿಚ್ಚಿಡಬಲ್ಲದು, ಮಾತ್ರವಲ್ಲ ಆ ಮೂಲಕ ಕ್ಯಾನ್ಸರ್ ಮುನ್ನೆಚ್ಚರಿಕೆಯನ್ನೂ ನೀಡಬಲ್ಲದು. ನಿಮ್ಮ ಶರೀರದಲ್ಲಿರುವ ಆ್ಯಂಟಿಕ್ಯಾನ್ಸರ್ ಪದಾರ್ಥಗಳನ್ನು ರಕ್ತಪರೀಕ್ಷೆಯಿಂದ ಅರಿತುಕೊಳ್ಳಲು ಸಾಧ್ಯವಿದೆ. ಹಣ್ಣು, ತರಕಾರಿಗಳನ್ನು ಕಡಿಮೆ ಸೇವಿಸುವವರು 40 ದಾಟಿದ ಬಳಿಕ ಇಂಥ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ರಕ್ತದಲ್ಲಿ ಬೀಟಾಕೆರೊಟಿನ್ ಪ್ರಮಾಣ ಜಾಸ್ತಿ ಇದ್ದವರಲ್ಲಿ ಕ್ಯಾನ್ಸರ್ ಸಂಭವನೀಯತೆ ಶೇ 40ರಷ್ಟು ಕಡಿಮೆ ಎನ್ನುವುದನ್ನು ಬ್ರಿಟನ್ ಸಂಶೋಧನೆಯೊಂದು ಪತ್ತೆ ಮಾಡಿದೆ. ಫೋಲಿಕ್ ಆ್ಯಸಿಡ್ ಹಾಗೂ ಲೈಕೊಪೆನ್ ಜಾಸ್ತಿ ಇರುವವರಲ್ಲಿಯೂ (ಹಸಿರು ತರಕಾರಿ, ಟೊಮೆಟೊಳಲ್ಲಿ ಇವು ಹೆಚ್ಚು) ಎಲ್ಲ ರೀತಿಯ ಕ್ಯಾನ್ಸರ್ ಸಾಧ್ಯತೆ ಬಹಳ ಕಡಿಮೆ ಎನ್ನುವುದೂ ಸಂಶೋಧನೆಗಳಿಂದ ತಿಳಿದುಬಂದಿದೆ. ಇವನ್ನೆಲ್ಲ ರಕ್ತಪರೀಕ್ಷೆಯಿಂದ ತಿಳಿದುಕೊಳ್ಳಬಹುದು.
ಕ್ಯಾನ್ಸರ್‌ನಿಂದ ನಿಮ್ಮನ್ನು ಪಾರುಮಾಡಿಕೊಳ್ಳಲು ಸುಲಭದ ವಿಚಾರ ಎಂದರೆ ಹಸಿರು ಸೊಪ್ಪು, ತರಕಾರಿಗಳನ್ನು ಜಾಸ್ತಿ ಸೇವಿಸುವುದು. ಇವುಗಳಲ್ಲಿ ಇರುವಷ್ಟು ಆ್ಯಂಟಿಕ್ಯಾನ್ಸರ್ ತಾಕತ್ತು ಬೇರಾವುದರಲ್ಲೂ ಇಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಅದರಲ್ಲೂ ಹಸಿರು ಸೊಪ್ಪುಗಳಂತೂ ಮ್ಯಾಜಿಕ್ ಅನ್ನೇ ಮಾಡಬಲ್ಲವು. ನಿತ್ಯ ಆಹಾರದಲ್ಲಿ ಇವುಗಳನ್ನು ಬಳಸುತ್ತಿದ್ದೀರಿ ಅಂತಾದರೆ ಕ್ಯಾನ್ಸರ್ ನಿಮ್ಮಿಂದ ಬಹುದೂರದಲ್ಲಿದೆ ಎಂದು ನಿಶ್ಚಿತವಾಗಿಯೂ ಹೇಳಬಹುದು. ಪಾಲಕ್, ಕೋಸುಗಡ್ಡೆ, ತರಕಾರಿ ಸೊಪ್ಪುಗಳು (ಉದಾಹರಣೆಗೆ ಮೂಲಂಗಿ ಸೊಪ್ಪು) ಇತ್ಯಾದಿಗಳು. ಹಸಿರು ಸೊಪ್ಪು, ತರಕಾರಿಗಳು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುತ್ತವೆ. ವೈವಿಧ್ಯಮಯ ಆ್ಯಂಟಿಆಕ್ಸಿಡೆಂಟ್‌ಗಳು ಅವುಗಳಲ್ಲಿ ಇರುತ್ತವೆ. ಬೀಟಾಕ್ಯಾರೊಟಿನ್, ಫೋಲಿಕ್ ಆಸಿಡ್, ಲುಟೆನ್ ಮೊದಲಾದವು ಹೇರಳವಾಗಿರುತ್ತವೆ. ಕ್ಯಾನ್ಸರ್ ಹಿಮ್ಮೆಟ್ಟಿಸುವಲ್ಲಿ ಬೀಟಾಕ್ಯಾರೊಟಿನ್‌ಗಿಂತಲೂ ಆ್ಯಂಟಿಆಕ್ಸಿಡೆಂಟ್ ಬಹಳ ಪರಿಣಾಮಕಾರಿ, ಸ್ವಲ್ಪಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಅದ್ಭುತ ಪರಿಣಾಮ ಬೀರಬಲ್ಲದು.
ದಟ್ಟ ಹಸಿರು ಸೊಪ್ಪುಗಳು ಲ್ಯೂಟಿನ್‌ನಿಂದ ಶ್ರೀಮಂತವಾಗಿರುತ್ತವೆ. ಉದಾಹರಣೆಗೆ ಹೇಳಬೇಕು ಎಂದರೆ ಪಾಲಕ್ ಸೊಪ್ಪಿನಲ್ಲಿ ಲುಟೆನ್ ಅಧಿಕವಾಗಿಯೇ ಇರುತ್ತದೆ. ಅದೇ ಕೋಸಿನಲ್ಲಿ ಆ ಪ್ರಮಾಣ ದುಪದಪಟ್ಟಾಗಿರುತ್ತದೆ. ಎಷ್ಟು ಗಾಢ ಹಸಿರು ಇರುತ್ತದೆಯೊ ಪರಿಣಾಮ ಅಷ್ಟು ಹೆಚ್ಚು. ಹಸಿರು ಹೆಚ್ಚಿದಷ್ಟೂ ಅವುಗಳಲ್ಲಿ ಕ್ಯಾರೊಟೆನಾಯ್ಡ್‌ಗಳು ಮತ್ತು ಇತದ ಆ್ಯಂಟಿಆಕ್ಸಿಡೆಂಟ್‌ಗಳು ಅಧಿಕವಾಗಿರುತ್ತವೆ ಎನ್ನುವುದು ಪತ್ತೆಯಾಗಿದೆ. 'ದಟ್ಟ ಹಸಿರು ಸೊಪ್ಪು, ತರಕಾರಿಗಳಲ್ಲಿ ಕ್ಯಾನ್ಸರ್ ಹಿಮ್ಮೆಟ್ಟಿಸುವ ಶಕ್ತಿ ದುಪ್ಪಟ್ಟಾಗಿರುತ್ತದೆ' ಎನ್ನುತ್ತಾರೆ ಅಮೆರಿಕದ ಸಂಶೋಧನಾ ವಿಜ್ಞಾನಿ ಡಾ.ಫ್ರೆಡರಿಕ್ ಖಾಚಿಕ್. ಇಂಥ ಸೊಪ್ಪು, ತರಕಾರಿಗಳನ್ನು ಬೇಯಿಸಿದರೆ ಅಥವಾ ರೆಫ್ರಿಜರೇಟರ್‌ನಲ್ಲಿ ಇಟ್ಟರೂ ಅವುಗಳಲ್ಲಿವ ಲುಟೆನ್, ಕ್ಯಾರೊಟೆನಾಯ್ಡ್, ಆ್ಯಂಟಿ ಆಕ್ಸಿಡೆಂಟ್ ಅಥವಾ ವಿಟಮಿನ್‌ಗಳು ನಾಶವಾಗುವುದಿಲ್ಲ ಎನ್ನುತ್ತಾರೆ ಅವರು.
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
(ಮುಂದುವರಿಯುವುದು)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


