ಗ್ರೀನ್ ಟೀ ಕುಡಿದು ಹಸಿರಾಗಿರಿ!

ಸಾಮಾನ್ಯ ನಂಬಿಕೆ ಎಂದರೆ ಕೊಬ್ಬಿನಿಂದ ಹೃದ್ರೋಗ ಬರುತ್ತದೆ ಎನ್ನುವುದು. ಆದರೆ ಇದೇ ಕೊಬ್ಬು ಕ್ಯಾನ್ಸರ್ ಅನ್ನೂ ತರಬಲ್ಲದು, ಕ್ಯಾನ್ಸರ್ ಅನ್ನು ಹೆಚ್ಚಿಸಬಲ್ಲದು ಎಂಬ ಸಂಗತಿ ಗೊತ್ತಿರಲಿಕ್ಕಿಲ್ಲ. ಕೊಬ್ಬಿನಿಂದಾಗಿ ಕರುಳಿನ ಭಾಗದಲ್ಲಿ ಪಿತ್ತರಸದ ಸ್ರವಿಕೆ ತೀವ್ರವಾಗುತ್ತದೆ. ಇದು ಕೋಶಗಳು ಕ್ಯಾನ್ಸರ್ಕಾರಕವಾಗಿ ರೂಪುಗೊಳ್ಳಲು ಕಾರಣವಾಗುತ್ತದೆ. ಮುಖ್ಯವಾಗಿ ಕ್ಯಾನ್ಸರ್ ಉಂಟಾದಾಗ ಅಂಥ ಕೋಶಗಳು ವೇಗವಾಗಿ ಬೆಳವಣಿಗೆ ನೆರವಾಗುವುದೇ ಆಹಾರದಲ್ಲಿನ ಕೊಬ್ಬಿನ ಅಂಶ. ಕೊಬ್ಬು ಸಿಗದಿದ್ದರೆ ಕ್ಯಾನ್ಸರ್ ತರುವ ಕೋಶಗಳು ಬೆಳವಣಿಗೆ ಹೊಂದುವುದು ಸಾಧ್ಯವಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಸಸ್ಯಜನ್ಯ ಅಥವಾ ಪ್ರಾಣಿಜನ್ಯ- ಯಾವುದೇ ರೀತಿಯ ಕೊಬ್ಬು ಆಗಿದ್ದರೂ ಸಹ ಕೊಬ್ಬಿನ ಪದಾರ್ಥಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಕೊಬ್ಬು ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಕ್ಯಾನ್ಸರ್ ವಿಚಾರವಾಗಿ ಹೇಳುವುದಿದ್ದರೆ ಗಡ್ಡೆಗಳಾಗಲು ಕೊಬ್ಬು ಬಹಳವಾಗಿ ಸಹಾಯ ಮಾಡುತ್ತದೆ. ಬೊಜ್ಜು ಇರುವವರು ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಅತಿ ತೂಕ ಹೊಂದಿರುವವರೂ ಕ್ಯಾನ್ಸರ್ಗೆ ಹತ್ತಿರದಲ್ಲೇ ಇದ್ದಾರೆ ಎನ್ನುತ್ತದೆ ವೈದ್ಯಲೋಕ. ಇಂಥವರಲ್ಲಿ ಪಿತ್ತಕೋಶ ಮತ್ತು ಮೂತ್ರಪಿಂಡ ಕ್ಯಾನ್ಸರ್ ಸಂಭವನೀಯತೆ ಹೆಚ್ಚು. ಹಾಲು, ಡೈರಿ ಉತ್ಪನ್ನಗಳು, ಕೊಬ್ಬಿನಪದಾರ್ಥಗಳ ಸೇವನೆ ಕಡಿಮೆ ಮಾಡುವಂತೆ ವೈದ್ಯರು ಸಲಹೆ ನೀಡುವುದು ಇದೇ ಕಾರಣಕ್ಕೆ. ವಂಶವಾಹಿಯಲ್ಲಿ ಯಾರಾದರೂ ಕ್ಯಾನ್ಸರ್ಗೆ ತುತ್ತಾದವರಿದ್ದರೆ ಕುಟುಂಬಸ್ಥರೆಲ್ಲ ಕೊಬ್ಬಿನ ಬಗ್ಗೆ ನಿಗಾವಹಿಸುವುದು ಅಗತ್ಯ.
ಕೆಲವು ಆಹಾರಗಳು ಕೀಮೋಥೆರಪಿಗೆ ಪೂರಕವಾಗಿ ಸ್ಪಂದಿಸುತ್ತವೆ. ಚಿಕಿತ್ಸೆಯ ಭಾಗವಾಗಿಯೂ ನಮ್ಮ ಆಹಾರ ಪದ್ಧತಿಯನ್ನು ಪರಿಗಣಿಸಬಹುದು ಎಂದು ಹೇಳಿದ್ದೆ. ಕೀಮೋಥೆರಪಿಯ ಉದ್ದೇಶವೇನು ಹೇಳಿ? ಶರೀರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ಕೋಶಗಳನ್ನು ನಿರ್ನಾಮಗೊಳಿಸುವುದು. ಅದಕ್ಕಾಗಿ ಶಕ್ತಿಶಾಲಿ ರಾಸಾಯನಿಕಗಳನ್ನು ಔಷಧ ರೂಪದಲ್ಲಿ ಬಳಸಲಾಗುತ್ತದೆ. ಉಳಿದೆಲ್ಲ ಕೋಶಗಳಿಗಿಂತ ಕ್ಯಾನ್ಸರ್ ಕೋಶಗಳು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುವುದರಿಂದ ತೀವ್ರ ಸ್ವರೂಪದ ರಾಸಾಯನಿಕಗಳ ಬಳಕೆ ಅನಿವಾರ್ಯವೂ ಹೌದು. ಚಿಕಿತ್ಸೆಯಲ್ಲಿ ಬಳಸಲಾಗುವ ರಾಸಾಯನಿಕಗಳು ಆಹಾರದಲ್ಲಿ ನೈಸರ್ಗಿಕವಾಗಿಯೇ ಲಭಿಸುವುದರಿಂದ ಅಡ್ಡಪರಿಣಾಮಗಳು ಮತ್ತು ನೋವು ಎರಡೂ ಕಡಿಮೆ. ಈಗೀಗ ಆಧುನಿಕ ವೈದ್ಯ ವಿಜ್ಞಾನ ಸಹ ಚಿಕಿತ್ಸೆಯಷ್ಟೇ ಮಹತ್ವವನ್ನು ಡಯಟ್ಗೂ ನೀಡುತ್ತಿದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


