ಬೈಟುಕಾಫಿ

ಸಿಡಿಲು ಕೂಡಿಸಿತು

ಸಿಡಿಲು ಕೂಡಿಸಿತು
Published On :

ಒಂದೊಂದು ಕಾಲಕ್ಕೆ ಒಂದೊಂದು ಗುಣ. ಬೇಸಿಗೆಯ ಉರಿ ಉರಿ ಸೆಖೆಗೆ ಪ್ರೇಮಿಗಳನ್ನು ಪ್ರತ್ಯೇಕಿಸುವ ಗುಣ. ಚಳಿಗಾಲಕ್ಕೆ ನಲ್ಲ ನಲ್ಲೆಯರನ್ನು ಬೇರ್ಪಡದಂತೆ ಒತ್ತರಿಸಿಡುವ ಗುಣ. ಮಳೆಗಾಲಕ್ಕೆ ವಿರಹಿಗಳನ್ನು ಮತ್ತೆ ಒಂದುಗೂಡಿಸುವ ಗುಣ. ಮಳೆಗಾಲಕ್ಕೆ ಇನ್ನೂ ಒಂದು ಗುಣವಿದೆ- 'ಹತ್ತಿರವಿದ್ದೂ ದೂರ ನಿಲ್ಲುವೆವು' ಎನ್ನುತ್ತಾರಲ್ಲ, ಅಂಥ ಸಂಗಾತಿಗಳನ್ನು ಮತ್ತೆ ಕೂಡಿಸುವ ಗುಣ- ಕಾಳಿದಾಸ ಉವಾಚ.
ಪಯೋಧರೈರ್ ಭೀಮಗಭಿರನಿಃಸ್ವನೈಷು
ತಡಿಬಿರ್ ಉದ್ವೇಜಿತಚೇತಸೋ ಭೃಷಂ
ಕೃತಾಪರಾಧಾನ್ ಅಪಿ ಯೋಷಿತಃ ಪ್ರಿಯಾನ್
ಪರಿಷ್ವಜಂತೇ ಶಯನೇ ನಿರಂತರಮ್

ಜೋಡಿಯೊಂದು ಮಂಚದಲ್ಲಿ ಮಲಗಿದೆ. ಇಬ್ಬರೂ ದೂರ- ದೂರ, ವಿರುದ್ಧ ದಿಕ್ಕಿಗೆ ಮುಖ ಮಾಡಿ ಮಲಗಿದ್ದಾರೆ. ನಲ್ಲೆ, ನಿದ್ರೆಹೋಗಿರುವ ನಲ್ಲನನ್ನೇ ನೋಡುತ್ತಿದ್ದಾಳೆ. ಅವಳ ತಲೆಯಲ್ಲಿ, ಆತ ಮಾಡಿದ ಮೋಸದ್ದೇ ರಿಂಗಣಗುಣಿತ. ತನ್ನಿಂದ ದೂರವಿದ್ದಾಗ ಈತ ಯಾವ ಚೆಲುವೆಯ ತೆಕ್ಕೆಯಲ್ಲಿ ಕ್ರೀಡಿಸಿರಬಹುದು, ಯಾವ ವೇಶ್ಯೆಯ ಮನಯಲ್ಲಿ ಮಲಗಿ ಎದ್ದು ಬಂದಿರಬಹುದು ಎಂಬೆಲ್ಲ ಯೋಚನೆಗಳಿಂದ ಆಕೆಯ ಮನಸ್ಸು ಅವನ ಬಗ್ಗೆ ಕಹಿಯಾಗಿದೆ. ಆಗ ಆಗಸದಲ್ಲಿ ಸಿಡಿಲೊಂದು ಅಬ್ಬರಿಸುತ್ತದೆ, ಗುಡುಗು ಮೊರೆಯುತ್ತದೆ. ಇದರಿಂದ ಭೀತಳಾದ ತರುಣಿ, ಥಟ್ಟನೆ ಜರುಗಿ ನಲ್ಲನನ್ನು ಅಪ್ಪಿಕೊಳ್ಳುತ್ತಾಳೆ. ಹೀಗೆ ಮಳೆಗಾಲವು, ದೂರವಿರುವ ಪ್ರೇಮಿಗಳನ್ನೂ ಹತ್ತಿರ ಸೇರಿಸುತ್ತದೆ.

ಫಿಲಂಗಳಲ್ಲಿ, ಸಿಡಿಲು ಹೊಡೆಯುವಾಗ ನಾಯಕನ್ನು ಅಪ್ಪಿಕೊಳ್ಳುವ ನಾಯಕಿಯ ನೆನಪಾಗುತ್ತದೆಯೆ? ಈ ಪರಿಕಲ್ಪನೆ ಕೊಟ್ಟ ಕಾಳಿದಾಸನಿಗೆ ನಮ್ಮ ಸಿನೆಮಾ ನಿರ್ದೇಶಕರು ಥ್ಯಾಂಕ್ಸ್ ಹೇಳಬೇಕು.

-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.