ಬೈಟುಕಾಫಿ

ಭರಿಸಲಾಗದ ಗುಟ್ಟು

ಭರಿಸಲಾಗದ ಗುಟ್ಟು
Published On :

ಎಲ್ಲರ ಹೊಟ್ಟೆಯೊಳಗೂ ಗುಟ್ಟುಗಳಿರುತ್ತವೆ. ಕೆಲವರು ಸಾಯುವವರೆಗೂ ಅದನ್ನು ಹೊಟ್ಟೆಯೊಳಗೇ ಬಚ್ಚಿಟ್ಟುಕೊಂಡಿರುತ್ತಾರೆ. ಸತ್ತರೂ ಅದನ್ನು ಬಹಿರಂಗಪಡಿಸುವುದಿಲ್ಲ. ಇನ್ನು ಕೆಲವರಿಗೆ ಗುಟ್ಟನ್ನು ಕೇಳಿಸಿಕೊಂಡ ಕೂಡಲೇ ಹೊಟ್ಟೆ ಉಬ್ಬರಿಸಲಾರಂಭಿಸುತ್ತದೆ. ಅದನ್ನು ಹೊರ ಹಾಕುವವರೆಗೂ, ಇನ್ನೊಬ್ಬರ ಕಿವಿಯ ಬಲಿ ಪಿಸುಗುಟ್ಟುವರೆಗೂ ಈ ಹೊಟ್ಟೆಯುಬ್ಬರ ಶಮನವಾಗುವುದೇ ಇಲ್ಲ. ಇದಕ್ಕೆ ಹೆಣ್ಣು- ಗಂಡು ಎಂಬ ಭೇದವಿಲ್ಲ. ಎಲ್ಲ ಬಗೆಯ ಚಾಡಿಕೋರತನಗಳೂ ಇಲ್ಲಿಂದಲೇ ಶುರುವಾಗುತ್ತದೆ. ಎಲ್ಲರ ಕಿವಿಗಳೂ ಗುಟ್ಟುಗಳಿಗೆ ತೆರೆದುಕೊಂಡೇ ಇರುತ್ತವೆ. ಸಹೋದ್ಯೋಗಿಗಳ, ಮನೆಯ ಇತರ ಸದಸ್ಯರ ಬಗ್ಗೆ ಹೊಸ ಗುಟ್ಟು ತಿಳಿದುಕೊಳ್ಳುವುದು ಎಂದರೆ, ಅವರ ಮೇಲೆ ಅದೇನೋ ಅಧಿಪತ್ಯ ಸಾಧಿಸಿದ ಹೆಮ್ಮೆ. ಆದರೆ ಒಂದು ನೆನಪಿರಲಿ, ಗುಟ್ಟು ನಮ್ಮ ಹೊಟ್ಟೆಯೊಳಗಿರುವವರೆಗೂ ಅದು ನಮ್ಮ ಅಧೀನ. ಗುಟ್ಟು ಹೊರಬಿದ್ದ ಮೇಲೆ ನಾವು ಅದರ ಅಧೀನ. ಆಮೇಲೆ ಅದು ನಮ್ಮ ಯಾರ ಕೈಯಳತೆಗೂ ನಿಲುಕುವುದೇ ಇಲ್ಲ. ಎಲ್ಲರ ಕೈಯನ್ನೂ ಮೀರಿ ಹೋಗಿಬಿಡುತ್ತದೆ. ಎಂತಂತಹುದೋ ಆಳ ಅಗಲ ವಿಸ್ತಾರಗಳನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಗುಟ್ಟುಗಳ ಬಗ್ಗೆ ಎಚ್ಚರವಿರಬೇಕು. ಅದು ವಿಷಕಂಠನ ಗಂಟಲಲ್ಲಿ ಸಿಕ್ಕಿಕೊಂಡ ವಿಷದಂತೆ. ಒಳಗಿಳಿದರೆ ಸಾವು, ಹೊರಗಿಳಿದರೆ ನೋವು. ಭರಿಸಲಾಗದ ಗುಟ್ಟುಗಳನ್ನು ಹೊರುವುದೂ ತರವಲ್ಲ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.