ತರಗತಿಯಲ್ಲಿ ವೈಚಾರಿಕತೆ ಮತ್ತು ಮೂಢನಂಬಿಕೆಗಳ ಬಗ್ಗೆ ಮಾತ ನಾಡಿದ ಶಿಕ್ಷಕ, ದಾರಿಯಲ್ಲಿ ಬೆಕ್ಕು ಬಂದಾಗ ಸ್ವಲ್ಪ ಹೊತ್ತು ಗಾಡಿ ನಿಲ್ಲಿಸಿ, ನಂತರ ಹೊರಟ.
-
ವಿರೋಧ ಪಕ್ಷದ ಸದಸ್ಯರು ಪೆಟ್ರೋಲ್‌ದರ ಏರಿಕೆಯು ಪ್ರತಿಭಟನೆಯಲ್ಲಿ ಭಾಗವಹಿಸಿ, ಹೊಸ ಪೆಚ್ರೋಲ್ ಕಾರ್‌ಗೆ ಬುಕ್ ಮಾಡಿಸಿದರು.
-
'ನಮ್ಮೆಜಮಾನರಿಗೆ ವ್ಯಾವಹಾರಿಕ ಬುದ್ದಿ ಇಲ್ಲ' ಎಂದು ಪಕ್ಕದ ಮನೆಯ ಹೆಂಗಸಿನೊಂದಿಗೆ ಮಾತನಾಡಿದವಳು ಗಂಡ ಮನೆಗೆ ಬಂದ ಮೇಲೆ 'ಸಂತೆ ಮಾಡ್ಕೋ ಬನ್ನಿ' ಎಂದು ರಾಗ ಎಳೆದಳು.
- ಗಣೇಶ್ ಹೆಗಡೆ