ಶೃಂಗಾರ ಪ್ರಕಾಶನದ ಬೆಳ್ಳಿ ಕಥೆ!

ಕನ್ನಡ ಜನತೆಗೆ ಬೌದ್ಧಿಕ ನೆಲೆಗಟ್ಟು ಒದಗಿಸುವ ನಿಟ್ಟಿನಲ್ಲಿ 1988ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ 'ಶೃಂಗಾರ ಪ್ರಕಾಶನ ಸಂಸ್ಥೆ' ಹುಟ್ಟಿಕೊಂಡಿತು. ವಿಜ್ಞಾನ, ಇತಿಹಾಸ, ಕಾದಂಬರಿ, ಕಥೆ, ಕಾವ್ಯ, ಪಠ್ಯಪುಸ್ತಕ, ಜೀವನ ಚರಿತ್ರೆ ಸೇರಿದಂತೆ 352 ಶೀರ್ಷಿಕೆಗಳಲ್ಲಿ ಕನ್ನಡ, ಇಂಗ್ಲಿಷ್ ಪುಸ್ತಕ ಪ್ರಕಟಿಸಿರುವುದು ಸಾಧನೆಯೇ ಸರಿ. ಗ್ರಾಮೀಣ ಪ್ರದೇಶದಲ್ಲಿ ಮೈತಳೆದ ಪ್ರಕಾಶನ ಇಂದು ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.
ಮಹಾಭಾರತ (1-2) ಸಂಪುಟಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರದ 'ಪುಸ್ತಕ ಸೊಗಸು' ಪ್ರಶಸ್ತಿ ಲಭಿಸಿರುವುದು ಪ್ರಕಾಶನದ ಹಿರಿಮೆ. ಪ್ರಕಾಶನದಲ್ಲಿ ಪ್ರಕಟವಾದ ಮೂರು ಪುಸ್ತಕಗಳು ಬೆಂಗಳೂರು, ಕುವೆಂಪು, ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿವೆ.
ಜ್ಞಾನಪೀಠ, ಪಂಪ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮತ್ತು ದೇಶವಿದೇಶಗಳ ವಿಜ್ಞಾನಿಗಳು, ಸಾಹಿತಿಗಳು, ರಾಷ್ಟ್ರ ನಾಯಕರು, ಪ್ರೇಕ್ಷಣೀಯ ಸ್ಥಳಗಳು, ಪ್ರಾಣಿ ಪಕ್ಷಿಗಳು, ಭಾರತದ 35 ರಾಜ್ಯಗಳು, ವಿಜ್ಞಾನ, ಕಲೆ, ಅಕ್ಷರಮಾಲೆ ಪ್ರಕಟಿಸಿ ಜನ ಮನ್ನಣೆ ಗಳಿಸಿದೆ. ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಶಾಲಾ ಮಕ್ಕಳ ಅಗತ್ಯಕ್ಕೆ ತಕ್ಕಹಾಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮಾಹಿತಿ ಇರುವ 500 ಕಲರ್ ಚಾರ್ಟ್ ಸಿದ್ದಪಡಿಸಿರುವುದು ವಿಶೇಷ. ಸದಾ ಹೊಸತನ್ನು ಹೊಸೆಯುವಲ್ಲಿ ಶೃಂಗಾರ ಪ್ರಕಾಶನ ಮೊದಲಿಂದಲೂ ಸಕ್ರಿಯವಾಗಿದೆ. ಶಾಲಾ ಮಕ್ಕಳಿಗಾಗಿ ಕನ್ನಡ ವ್ಯಾಕರಣ, ಸುಲಭ ಕನ್ನಡ ವ್ಯಾಕರಣ, ತತ್ಸಮ-ತದ್ಭವಕೋಶ, ಸರಳ ಹಿಂದಿ ವ್ಯಾಕರಣ ಇತ್ಯಾದಿ ಹಲವಾರು ಪುಸ್ತಕ ತಂದಿದ್ದಾರೆ. ಕಲಿಕೆಗೆ ಮಹತ್ವ ನೀಡುವ ಹೊತ್ತಗೆಗಳನ್ನು ಪ್ರಕಟಿಸಿರುವುದು ಶೃಂಗಾರ ಪ್ರಕಾಶನದ ಹೆಗ್ಗಳಿಕೆ.
ನಾಡೋಜ, ದೇ.ಜವರೇಗೌಡ, ನಾಗರಾಜ ಮೊದಲಾದವರು ನಾಗರಾಜರಾವ್ ಅವರನ್ನು ಸಾಂಸ್ಕೃತಿಕ ರಾಯಭಾರಿ ಎಂದಿದ್ದಾರೆ. 25 ವರ್ಷಗಳ ಇತಿಹಾಸದಲ್ಲಿ ಶೃಂಗಾರ ಪ್ರಕಾಶನ ಸ್ಥಾಪಕ ಎಂ. ವಿ. ನಾಗರಾಜರಾವ್ 'ಎಂವಿಎನ್' ಎಂದೇ ಪರಿಚಿತ. ಪ್ರೊ. ದಯಾನಂದ 1999ರಲ್ಲಿ ನಾಗರಾಜರಾವ್ ಬಗ್ಗೆ 'ಅನಾವರಣ' ಎಂಬ ಪುಸ್ತಕ ರಚಿಸಿದ್ದಾರೆ. ರಾಯರು ಹೊರತರುತ್ತಿದ್ದ ಪುಸ್ತಕಗಳ ಕುರಿತಾಗಿ 'ಚಿನ್ನದ ವರ್ಷಗಳು' ಎಂದೇ ಬಿಂಬಿಸಿದ್ದವು. ಭಾಷಾಂತರಿಸಿದ ಕೃತಿಗಳೂ 'ಮರುನಿರೂಪಣೆ' ಎಂದೆನಿಸಿಕೊಂಡಿವೆ.
ರಾಯರು ಹಿಂದಿ ಮೂಲದ 'ವಾಸಕ ಸಜ್ಜಾ'ವನ್ನು 'ಶೃಂಗಾರ ಶಯ್ಯೆ'ಯಾಗಿ ಮರು ನಿರೂಪಣೆ ಮಾಡಿ ಅಕ್ಷರ ಜಗತ್ತಿಗೆ ಅಡಿಯಿಟ್ಟರು. ವೃತ್ತಿಯಲ್ಲಿ ಶಿಕ್ಷಕ, ಕನ್ನಡ ಸಾಹಿತ್ಯ ಅಧ್ಯಯನ, ಬರವಣಿಗೆಯನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಪ್ರಕಾಶನ 25ಕ್ಕೆ ಕಾಲಿರಿಸಿರುವುದು ಗ್ರಾಮೀಣ ನೆಲೆಗಟ್ಟಿನಲ್ಲಿ ಮುಖ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


