ಬೈಟುಕಾಫಿ

ಸಕ್ಕರೆ ಅಂಶ ಕಡಿಮೆಯಾದರೂ ಅಪಾಯ!

ಸಕ್ಕರೆ ಅಂಶ ಕಡಿಮೆಯಾದರೂ ಅಪಾಯ!
Published On :

ಊಟ ಬಲ್ಲವನಿಗೆ ರೋಗವಿಲ್ಲ ಎಂದು ನಮ್ಮ ಹಿರಿಯರು ಹೇಳಿದ್ದು ಸುಳ್ಳಲ್ಲ. ಆಹಾರವೇ ಆರೋಗ್ಯದ ಮೂಲ, ಆಹಾರವೇ ಆನಾರೋಗ್ಯದ ಮೂಲವೂ ಸಹ. ಅಷ್ಟೇ ಅಲ್ಲ, ಕೆಲವು ಸಂಶೋಧನೆಗಳ ಪ್ರಕಾರ ವ್ಯಕ್ತಿ ಧೂಮಪಾನಿಯಾಗಲು, ಮದ್ಯವ್ಯಸನಿಯಾಗಲು, ಅಪರಾಧ ಪ್ರವೃತ್ತಿ ಬೆಳೆಸಿಕೊಳ್ಳಲು ಸಹ ಆಹಾರವೇ ಕಾರಣ. ಮರೆವಿನ ಕಾಯಿಲೆ (ಅಲ್ಜೆಮಿರ್), ಕೆಲವು ನರ ಸಂಬಂಧಿ ಕಾಯಿಲೆಗಳಿಗೂ ಆಹಾರವೇ ಮೂಲ. ಮಕ್ಕಳು ಕಲಿಕೆಯಲ್ಲಿ ಹಿಂದಿದ್ದರೆ ಮಾತ್ರವಲ್ಲ, ಅತಿ ಬುದ್ಧಿವಂತರಾಗಿದ್ದರೂ ಅದಕ್ಕೆ ಆಹಾರದಲ್ಲಿನ ವ್ಯತ್ಯಾಸ ಕಾರಣವಾಗಿರಬಹುದು.
ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಂಯಾದರೆ ಮಧುಮೇಹ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇವತ್ತಿನ ದಿನಮಾನದಲ್ಲಿ `ಶುಗರ್' ಕಾಮನ್ ಹೆಲ್ತ್ ಪ್ರಾಬ್ಲಂ. ಆದರೆ ಸಕ್ಕರೆ ಅಂಶ ಕಡಿಮೆಯಾದರೂ ಅನಾರೋಗ್ಯ ಉಂಟಾಗುವುದನ್ನು ಕೇಳಿರಲಿಕ್ಕಿಲ್ಲ ಅಲ್ಲವೆ? ಕೆಲವರಲ್ಲಿ ಹಾಗೂ ಆಗುವುದುಂಟು. ಅದನ್ನೇ ವೈದ್ಯಕೀಯ ಪರಿಭéಾಷೆಯಲ್ಲಿ ಹೈಪೊಗ್ಲೈಸೆಮಿಯಾ ಎಂದು ಹೇಳಲಾಗುತ್ತದೆ. ಡಾ.ರಸೆಲ್ ಬ್ಲೇಲಾಕ್ ಎನ್ನುವ ಪಾಶ್ಚಾತ್ಯ ಆಹಾರ ತಜ್ಞರು ಹೇಳುವಂತೆ, ಸಕ್ಕರೆ ಮತ್ತು ಪಿಷ್ಟ ಅಧಿಕವಾಗಿರುವ ಕಾಬರ್ೊಹೈಡ್ರೇಟ್ಗಳು ಅಧಿಕ ಇನ್ಸುಲಿನ್ ಸ್ರಾವಕ್ಕೆ ಉತ್ತೇಜನ ನೀಡುತ್ತವೆ. ಅದರಿಂದಾಗಿ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ.
ಹೈಪೊಗ್ಲೈಸೆಮಿಯಾ ಅನೇಕ ಕಾಯಿಲೆಗಳ ಮೂಲ. ಅದು ಮಾಡುವ ಅನಾಹುತಗಳಲ್ಲಿ ಪ್ರಮುಖವಾದದ್ದು ಎಂದರೆ ಗ್ಲುಕೊಮೇಟ್ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಬಿಡುಗಡೆ ಮಾಡುವಂತೆ ಮೆದುಳನ್ನು ಉತ್ತೇಜಿಸುವುದು. ಸಿಟ್ಟು, ಹತಾಶೆ, ಖಿನ್ನತೆ, ಆತಂಕಗಳು ಆಗಾಗ ಕಾಡುವುದಕ್ಕೆ ಅತಿಯಾದ ಗ್ಲುಕೊಮೇಟ್ ಕಾರಣ. ಇದು ಒಮ್ಮೊಮ್ಮೆ ಆತ್ಮಹತ್ಯಾ ಪವೃತ್ತಿಯನ್ನೂ ಉತ್ತೇಜಿಸಬಲ್ಲದು, ತೀವ್ರ ಹೃದಯಾಘಾತಕ್ಕೂ ಕಾರಣ ಆಗಬಲ್ಲದು. ಸಾವಿರಾರು ಆಹಾರಗಳಲ್ಲಿ ಗ್ಲುಕೊಮೇಟ್ ಹೇರಳವಾಗಿ ಸಿಗುತ್ತದೆ. ಪದೆಪದೇ ಹೈಪೊಗ್ಲೈಸೆಮಿಯಾಕ್ಕೆ ತುತ್ತಾಗುತ್ತಿದ್ದರೆ ಅಂತಹ ವರು ರಿಸ್ಕಿ ವಲಂಯದಲ್ಲಿದ್ದಾರೆ ಎಂದೇ ಲೆಕ್ಕ. ಏಕೆಂದರೆ ಇದು ನರವ್ಯೂಹ ನಿಷ್ಕ್ರಿಯವಾಗುವಂತೆ ಮಾಡಬಲ್ಲದು ಸಹ. ಮರೆವಿನ ಕಾಯಿಲೆ, ಪಾಕರ್ಿನ್ಸನ್, ಎಎಲ್ಎಸ್ ಮೊದಲಾದ ನರಸಂಬಂಧಿ ಆರೋಗ್ಯ ತೊಂದರೆಗಳು ಉಂಟಾಗಬಲ್ಲವು.
ಮಕ್ಕಳು ಮತ್ತು ವಯಸ್ಕರು ಇಬ್ಬರಲ್ಲಿಯೂ ಆಕ್ರಮಣಕಾರಿ ಮನೋಭಾವ ಕಾಣಿಸಿಕೊಳ್ಳುವುದೂ ಹೈಪೊಗ್ಲೈಸೆಮಿಯಾ ಆಗಿರಬಹುದು. ವಯಸ್ಕರಲ್ಲಿ ವಿಪರೀತ ಗೊಂದಲ, ಪ್ರತಿ ವಿಷಯದಲ್ಲಿ ದ್ವಂದ್ವ, ನಿಧರ್ಾಋ ಕೈಗೊಳ್ಳುವಲ್ಲಿ ತಾಕಲಾಟ ಕಾಡುವುದು ಇವೆಲ್ಲವೈ ಹೈಪೊಗ್ಲೈಸೆಮಿಯಾ ಲಕ್ಷಣಗಳೇ ಆಗಿರಲಿಕಲ್ಕೆ ಸಾಕು. ನಾವು ಸೇವಿಸುವ ಆಹಾರವೇ ನಮ್ಮ ವರ್ತನೆಯನ್ನೂ, ವ್ಯಕ್ತಿತ್ವವನ್ನೂ ನಿಯಂತ್ರಿಸುತ್ತದೆ ಎನ್ನುವುದಕ್ಕೆ ಇಂಥ ಹಲವು ಉದಾಹರಣೆಗಳು
ಸಿಗುತ್ತವೆ. ?

ಡಾ.ಪಿ ಸದಾನಂದ ಮೈಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.