ಬೈಟುಕಾಫಿ

ಹಣ ಆನಂದವನ್ನು ನೀಡದಿದ್ದರೂ ಸುಖವನ್ನು ನೀಡುತ್ತದೆ

ಹಣ ಆನಂದವನ್ನು ನೀಡದಿದ್ದರೂ ಸುಖವನ್ನು ನೀಡುತ್ತದೆ
Published On :

ಭಾಗ 5

ಮತ್ತೆ ನಮಗೆ ಉಪಯೋಗಕ್ಕೆ ಬರುವ ಲಾಭಗಳೆಂದರೆ ಯಾವುವು? ಒಬ್ಬ ಲೇಖಕನ ಬಳಿ ಒಂದೇ ಕಥೆ ಇರುತ್ತದೆ. ನಿದರ್ೇಶಕನಿಗೆ ಹೇಳುವಾಗ ಒಂದು ರೀತಿಯಲ್ಲಿ, ನಾಯಕನಿಗೆ ಹೇಳುವಾಗ ಮತ್ತೊಂದು ರೀತಿಯಲ್ಲಿ, ಸಸ್ಪೆನ್ಸ್ ಕಡಿಮೆ ಮಾಡಿಯೋ, ಹಾಸ್ಯವನ್ನು ಬೆಳೆಸಿಯೋ, ಅವರವರ ಅಭಿರುಚಿಗೆ ತಕ್ಕಂತೆ ಹೇಳಿ ಅವರನ್ನು ಆಕಷರ್ಿಸಲು ಪ್ರಯತ್ನಿಸುತ್ತಾನೆ. ಅದೇ ರೀತಿಯಲ್ಲಿ ನಮಗಿರುವ ಒಂದೇ ಬದುಕನ್ನು ನಮ್ಮ ಗುರಿಗೆ ಅನುಗುಣವಾಗಿ ಬದಲಿಸಿಕೊಳ್ಳಬೇಕು.
ಸ್ಪ್ರಿಂಟರ್ ಆಗಬೇಕೆಂದರೆ ಓಡುವುದರಲ್ಲಿ ಸಾಧನೆ ಮಾಡಬೇಕು. ವ್ಯಾಪಾರಿಯಾಗಬೇಕಾದರೆ ಔಚಿತ್ಯಪ್ರಜ್ಞೆ ತಿಳಿದಿರಬೇಕು. ರಾಜಕೀಯ ಧುರೀಣ ಆಗಬೇಕೆಂದರೆ ಹತ್ತುಜನರೊಂದಿಗೆ ಮಾತಾಡುವುದನ್ನು ಕಲಿತುಕೊಳ್ಳಬೇಕು. ಪಂಡಿತನಾಗಬೇಕಾದರೆ ಚೆನ್ನಾಗಿ ಓದಬೇಕು ದಾಂಪತ್ಯ ಚೆನ್ನಾಗಿರಬೇಕೆಂದರೆ ಭಾಗಸ್ವಾಮಿಯನ್ನು "ಟೇಕ್-ಇಟ್-ಫಾರ್-ಗ್ರ್ಯಾಂಟೆಡ್' ಆಗಿ ತೆಗೆದುಕೊಳ್ಳಕೂಡದು. ಇದು ನಮ್ಮಲ್ಲಿ ನಾವೇ ಮಾಡಿಕೊಳ್ಳಬೇಕಾದ ಬದಲಾವಣೆ.

ಗುರಿ ತಲುಪಿದ ಟೈಟಾನಿಕ್
ಬಹಳ ಸಲ ಪ್ರಸ್ತಾಪ ಮಾಡಿರುವ ವಿಷಯವಾದರೂ, ಈ ಉದಾಹರಣೆಯನ್ನು ಇನ್ನೊಂದು ಸಲ ಚಚರ್ಿಸುತ್ತೇನೆ. ನೀವು `ಟೈಟಾನಿಕ್' ಎನ್ನುವ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅದು ಮುಳುಗಿಹೋಗಿದೆಯೆಂದುಕೊಳ್ಳೋಣ. ಆ ಸಿನಿಮಾದಂತೆ ನೀವು ನಾಯಕನಿಗೋಸ್ಕರವೋ ನಾಯಕಿಗೋಸ್ಕರವೋ ತ್ಯಾಗ ಮಾಡುವ ಅಗತ್ಯವಿಲ್ಲ. ಈಜುತ್ತಾ ಒಂದು ಅದ್ಭುತವಾದ ದ್ವೀಪಕ್ಕೆ ಹೋಗುತ್ತೀರಿ. ಅಲ್ಲಿ ವಿಧವಿಧವಾದ ಜಿಂಕೆಗಳು, ನವಿಲುಗಳು, ಸಣ್ಣ ಝರಿಗಳು, ದೊಡ್ಡ ಜಲಪಾತಗಳು ಕಣ್ಣಿಗೆ ಹಬ್ಬದಂತೆ ಇವೆ. ನೀವು ಶಾಕಾಹಾರಿಗಳಾದರೆ ಹಣ್ಣುಗಳು, ಮಾಂಸಾಹಾರಿಯಾದರೆ `ರ್ಯಾಬಿಟ್ ಮಂಚೂರಿಯಾ' ಇಲ್ಲವೇ `ಡೀರ್-65' ಮಾಡಿಕೊಂಡು ತಿನ್ನಬಹುದು. ಬೆಳಿಗ್ಗೆ ಹತ್ತುಗಂಟೆಗೆ ಎದ್ದರೂ ಯಾರೂ ಕೇಳುವವರಿಲ್ಲ. ಜಲಪಾತದ ಕೆಳಗೆ ಎರಡುಗಂಟೆಗಳ ಕಾಲ ಸ್ನಾನ ಮಾಡಿ, ಮಧ್ಯಾಹ್ನ ಹಾಯಾಗಿ ನಿದ್ದೆ ಮಾಡಬಹುದು. ಕಾಲೇಜಿಗಾಗಲೀ, ಆಫೀಸಿಗಾಗಲೀ ಹೋಗುವ ಅಗತ್ಯವಿಲ್ಲ.
ನೀವು ಅಲ್ಲಿ ಶಾಶ್ವತವಾಗಿ ಇದ್ದುಬಿಡುವಿರಾ? ಮರಳಿ ಬಂದುಬಿಡುವಿರಾ? ಸಂಸಾರದ ದು:ಖಗಳಲ್ಲಿ, ಆಥರ್ಿಕ ಸಮಸ್ಯೆಗಳಲ್ಲಿ ಮುಳುಗಿರುವವರು, ತಮ್ಮಲ್ಲಿಯೇ ಸಮಸ್ಯೆಗಳಿರುವವರನ್ನು ಬಿಟ್ಟರೆ ನೂರಕ್ಕೆ ತೊಂಬತ್ತೊಂಬತ್ತು ಜನ, ಹಿಂದಕ್ಕೆ ಬಂದುಬಿಡುತ್ತೇವೆನ್ನುತ್ತಾರೆ. ``ಅಲ್ಲಿ ತಿಂಡಿ ಫ್ರೀ. ಯಾವ ರೀತಿಯ ಟೆನ್ಷನ್ನುಗಳೂ, ಸಮಸ್ಯೆಗಳೂ ಇಲ್ಲ ಅಲ್ಲವೇ... ಆದರೂ ಏಕೆ ಬಂದುಬಿಟ್ಟಿರಿ? ಎಂದು ಕೇಳಿದರೆ ಬಹಳ ಜನ ತಕ್ಷಣವೇ ಉತ್ತರ ಹೇಳಲಾರರು. ``ಅಲ್ಲಿ ಇಲ್ಲದ್ದು ಇಲ್ಲಿ ಇರುವುದು ಏನು? ಏನು? ಏನು?'' ಎಂದು ದೇವರನ್ನು ಟಾಪ್ ಆಂಗಲ್ನಲ್ಲಿ ಪ್ರಶ್ನಿಸುವ ನಾಯಕನ ತಾಯಿಯ ಹಾಗೆ ಕಿರುಚಿಕೊಳ್ಳುವ ಅಗತ್ಯವಿಲ್ಲ.
ಅಲ್ಲಿ ನಮ್ಮವರು ಯಾರೂ ಇಲ್ಲ. ಇಲ್ಲಿ ನಮ್ಮವರಿದ್ದಾರೆ. ನಮಗೆ ಪ್ರೀತಿ ಬೇಕು. ನಾವು ಪ್ರೇಮಿಸಲು, ಪ್ರೇಮಿಸಲ್ಪಡಲು ಮನುಷ್ಯರು ಬೇಕು.
ನಮ್ಮ ಗೆಲುವನ್ನು ಮೆಚ್ಚಿಕೊಳ್ಳುವವರು ಅಲ್ಲಿ ಯಾರೂ ಇರುವುದಿಲ್ಲ. ಅದೇ ಕೀತರ್ಿ. ಪ್ರತಿ ಮನುಷ್ಯನಿಗೆ ಯಾವುದೋ ಒಂದು ವಿಜಯವನ್ನು ಸಾಧಿಸಬೇಕೆಂದೂ, ಅದನ್ನು ನಾಲ್ವರು ಗುರುತಿಸಬೇಕೆಂದೂ ಅಭಿಲಾಷೆ ಇರುತ್ತದೆ. ಪಕ್ಕದ ಮನೆಯ ಆಂಟಿಯಿಂದ, ಮನೆಯಲ್ಲಿನ ಕೆಲಸದಾಕೆಯವರೆಗೂ ಯಾರಾದರೂ ತನ್ನ ಕೆಲಸವನ್ನು ಹೊಗಳಿದರೆ ಆನಂದ ಉಂಟಾಗುತ್ತದೆ. ಅಂತಹ ಸೆನ್ಸ್ ಆಫ್ ಅಛೀವ್ಮೆಂಟ್ ಆ ದ್ವೀಪದಲ್ಲಿ ದೊರಕದು.
ಅಲ್ಲಿ ಕ್ರಿಕೆಟ್ ಮ್ಯಾಚ್ಗಳಿರುವುದಿಲ್ಲ. ದಿನದ ನಂತರ ದಿನ ರೊಟೀನ್ ಆಗಿ, ಯಾವ ಬದಲಾವಣೆಯೂ ಇಲ್ಲದೇ ಇರುವುದರಿಂದ `ನಾಳೆಯ' ಬಗ್ಗೆಗಿನ ಕುತೂಹಲ ಸತ್ತುಹೋಗುತ್ತದೆ. ಅಲ್ಲಿ ಗುಹೆಗಳಲ್ಲಿ ಮಲಗಬೇಕಾಗಿ ಬರುತ್ತದೆ. ಸೊಳ್ಳೆಪರದೆಯಿಂದ ಹಿಡಿದು ಹಾಸಿಗೆಯವರೆಗೂ ಏನೂ ದೊರಕದು. ಕೊನೆಗೆ ಗಡ್ಡವನ್ನು ಕೆರೆದುಕೊಳ್ಳಲು ರೇಜéರ್ ಕೂಡಾ ಇರದು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ವಿಧಾನಗಳೇನೂ ಇರುವುದಿಲ್ಲ. ಮೆದುಳು ತನ್ನ ಚುರುಕುತನವನ್ನು ಕಳೆದುಕೊಳ್ಳುತ್ತದೆ. ಕಣ್ಣುಗಳಲ್ಲಿನ ವಿದ್ವತ್ತು ಕಡಿಮೆಯಾಗಿಬಿಡುತ್ತದೆ. ಕ್ರಮೇಣ ಟಾಜರ್ಾನ್ಗಳಾಗಿ ಬದಲಾಗಿಬಿಡುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಡಾಕ್ಟರುಗಳು ಇರುವುದಿಲ್ಲ ಇಲ್ಲಿ ಆರೋಗ್ಯ ಕೆಟ್ಟರೆ ಡಾಕ್ಟರುಗಳಿದ್ದಾರೆ. ಮನಸ್ಸು ಹಾಳಾದರೆ ಸಿನಿಮಾಗಳಿವೆ. ಒಬೆಸಿಟಿ ಸೆಂಟರ್ಗಳೂ, ರೇವ್ ಪಾರ್ಟಿಗಳೂ, ಫೆಶಿಯಲ್ ಗಳೂ ಇರುತ್ತವೆ.
ಅದಕ್ಕೇ ನಾವು ಮತ್ತೆ ನಮ್ಮ ಪ್ರಪಂಚದೊಳಕ್ಕೆ ಬಂದು... ಕಷ್ಟಗಳನ್ನೂ, ಶ್ರಮವನ್ನೂ, ಟೆನ್ಷನ್ನ್ನೂ ಆಹ್ವಾನಿಸುತ್ತೇವೆ. ಎಚ್ಚರಿಕೆಯಿಂದ ಗಮನಿಸಿದರೆ ಪ್ರೇಮ, ಆರೋಗ್ಯ, ಕೀತರ್ಿ, ಜ್ಞಾನ, ಐಶ್ವರ್ಯ, ಕುತೂಹಲ (ಇಲ್ಲವೇ ಉತ್ಸಾಹ) ಎನ್ನುವ 'ಆರು ಸಂಪತ್ತುಗಳಿ'ಗಾಗಿ ನಾವು
ಆ ದ್ವೀಪದಲ್ಲಿ ಜಿಂಕೆಗಳನ್ನು, ಚಿಕ್ಕ ಝರಿಗಳನ್ನು, ಜಲಪಾತ ಸ್ನಾನವನ್ನು, ಉಚಿತ ಭೋಜನವನ್ನು ಬಿಟ್ಟು ಮರಳಿ ಬಂದುಬಿಡುತ್ತಿದ್ದೇವೆ. ಇವೇ ಷಡ್ಗುಣ ಐಶ್ವರ್ಯಗಳು. ಇವನ್ನು ಸಂಪಾದಿಸುವುದೇ ವಿಜಯ. ಇವನ್ನು ಸಂಪಾದಿಸಲೆಂದೇ ನಾವು ಬದಲಾಗಬೇಕು.
ನಿಮ್ಮ ಭವಿಷ್ಯವನ್ನು ಒಂದು ಕಾಗದದ ಮೇಲೆ ಬರೆದುಕೊಳ್ಳಿ. ಗತದ ಸಂತೃಪ್ತಿಯೊಂದಿಗೆ ಭವಿಷ್ಯತ್ತಿನತ್ತ ಪ್ರಯಾಣವೇ ವರ್ತಮಾನ. ಐವತ್ತು ವರ್ಷಗಳ ನಂತರ ಹಿಂತಿರುಗಿ ನೋಡಿದರೆ, ನಿಮ್ಮ ಗತದಿನಗಳ ಬಗ್ಗೆ ನೀವು ಹೇಗೆ ಫೀಲಾಗಬೇಕೆಂದು ಊಹಿಸಿಕೊಳ್ಳುತ್ತೀರಿ? ಶರಶಯ್ಯೆಯಲ್ಲಿ ಮಲಗಿರುವಾಗ ಜೀವನಕ್ಕೆ ಹೇಗೆ ವಿದಾಯ ಹೇಳಬೇಕೆಂದುಕೊಂಡಿದ್ದೀರಿ? ಜೀವನದ ಜವಾಬ್ದಾರಿಗಳನ್ನು ಸಂತೋಷದಿಂದ ನೆರವೇರಿಸಿದ ಸಂಪೂರ್ಣ ತೃಪ್ತಿಯೊಂದಿಗೆ, ಯಾವ ವಿಧವಾದ ದೂರುಗಳೂ ಇಲ್ಲದೇ ಬೀಳ್ಕೊಡಬೇಕೆಂದಿರುವಿರಾ? ಅದೇ ಗೆಲುವು ಎಂದರೆ. ಅದು ನೆರವೇರಬೇಕಾದರೆ ವರ್ತಮಾನದ `ಪ್ರತಿಕ್ಷಣವೂ' ಚೆನ್ನಾಗಿರಬೇಕು. ಸಂತೃಪ್ತಿಯಿಂದ ತುಂಬಿರಬೇಕು.

ನೀವು ಕನಸುಗಳನ್ನು ಕಾಣುವಿರಾ?
ಹದಿನೇಳರ ವಯಸ್ಸಿನಲ್ಲಿ ಕ್ಲಾಸ್ ಟಾಪರ್ ಆಗಬೇಕೆಂಬ ಛಲ ನಿಮಗಿದೆಯೇ? ಇಪ್ಪತ್ತು ವರ್ಷಗಳಿಗೆ ಆಸ್ಟ್ರೋನಾಟ್ ಆಗಬೇಕೆಂದು ಅಂದುಕೊಂಡಿರುವಿರಾ? ಇಪ್ಪತ್ತೈದರ ವಯಸ್ಸಿನಲ್ಲಿ ರಾಷ್ಟ್ರಪತಿ ನೀಡುವ ಪಾಟರ್ಿಯಲ್ಲಿ ಪ್ರಮುಖ ಸಿನಿಮಾತಾರೆಯರೊಂದಿಗೆ ಹಸ್ತಲಾಘವ ನೀಡಬೇಕೆಂದಿದೆಯಾ? ಮೂವತ್ತು ವರ್ಷಗಳಾದಾಗ ಬಿ.ಎಂ.ಡಬ್ಲ್ಯೂ ಕಾರನ್ನು ಸ್ವಂತವನ್ನಾಗಿ ಮಾಡಿಕೊಳ್ಳುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಲವತ್ತರ ವಯಸ್ಸಿನಲ್ಲಿ ಮಲ್ಟೀನ್ಯಾಷನಲ್ ಕಂಪೆನಿಗೆ ಸಿ.ಈ.ಓ. ಆಗುವುದಾ? ಐವತ್ತರ ವಯಸ್ಸಿನಲ್ಲಿ ಪ್ರಧಾನಮಂತ್ರಿ ಆಗಬೇಕೆಂದುಕೊಂಡಿರುವಿರಾ? ಅರುವತ್ತರ ವಯಸ್ಸಿನಲ್ಲಿ ನೋಬೆಲ್ ಪ್ರೈಜéಾ? ಎಪ್ಪತ್ತರಲ್ಲಿ ಮಠಾಧಿಪತಿ ಆಗುವುದಾ? ಎಂಬತ್ತರಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳುವುದಾ? ಯಾವುದು ನಿಮ್ಮ ಕನಸು?
ಭವಿಷ್ಯಕ್ಕಾಗಿ ಕನಸು ಕಾಣಿರಿ. ವರ್ತಮಾನವನ್ನು ವ್ಯರ್ಥ ಮಾಡಬೇಡಿ. ಆಸ್ವಾದಿಸಲು ಇನ್ನೇನೂ ಇಲ್ಲ ಎನ್ನುವಂತೆ ಆಳವಾಗಿ ನಿಮ್ಮ ಇಷ್ಟವನ್ನು ಅನುಭವಿಸಿರಿ. ನಿಮಗೆ `ಟೀ' ಇಷ್ಟವಾದಲ್ಲಿ ಲೆಮೆನ್ ಟೀ, ಐಸ್ಡ್ ಟೀ, ಬ್ಲ್ಯಾಕ್ ಟೀ, ಚೈನೀಸ್ ಟೀ ಕುಡಿದಿರುವಿರಾ? ಐಸ್ಕ್ರೀಮ್ ಇಷ್ಟವಾದರೆ ಪ್ರೈಡ್ ಐಸ್ಕ್ರೀಮ್, ವೇಫರ್ ಕೋನ್, ಸಂಡೇಸ್, ಜೆಲ್ಲೀಸ್, ಸಾಫೆಟ್ ಫ್ಯಾಂಟಸಿ, ಹಾಟ್ ಕಾಫéಿ, ಬ್ಲೂಬೆರ್ರಿ, ಕ್ಯೂಬನ್ ಕಾಫéೀ ವಿತ್ ಡೋಲ್ಸ್, ಹನಿ ಲಾವೆಂಡರಿ ಕೋಟ್ ಐಸ್ಕ್ರೀಮ್ಗಳನ್ನು ಟ್ರೈ ಮಾಡಿರಿ.
ಚಿತ್ರಕಲೆ, ಸಂಗೀತ, ಬಡರ್್ ವಾಚಿಂಗ್, ಒಳ್ಳೆಯ ಸ್ನೇಹ.. ಎಲ್ಲವೂ ಸಂತೋಷಗಳೇ. ನದೀ ತೀರದಲ್ಲಿ ಪ್ರಾಣಸ್ನೇಹಿತನೊಂದಿಗೆ ಒಂದು ಗಂಟೆಯ ಹೊತ್ತು ನಿಶ್ಶಬ್ದವಾಗಿ ಕಳೆದು ಮರಳಿ ಬರುತ್ತಾ ``ಇಂತಹ ಸುಂದರವಾದ ಸಂಭಾಷಣೆಯನ್ನು ಇಲ್ಲಿಯವರೆಗೂ ಎಂದೂ ನಡೆಸಿರಲಿಲ್ಲ'' ಎಂದು ಸಂತೃಪ್ತಿಯಿಂದ ಅಂದುಕೊಳ್ಳುವುದೇ ಆನಂದ.
ನೀವು ಹುಣ್ಣಿಮೆಯನ್ನು ನೋಡಿ ಎಷ್ಟು ದಿನಗಳಾಗಿವೆ? ಹೊರಗಿನ ಆಗಸವನ್ನು ನೋಡುತ್ತಾ ಬೆನ್ನಡಿಯಾಗಿ ಮಲಗಿ ಎಷ್ಟು ಕಾಲವಾಗಿದೆ? ಈ ನಡುವೆ ಕೆರೆಯಲ್ಲಿ ಎಂದಾದರೂ ಸ್ನಾನ ಮಾಡಿರುವಿರಾ? ಇಂತಹ ಉತ್ತೇಜಕರವಾದ ಆನಂದಗಳೂ, ಉತ್ಪಾದಕರವಾದ ಕೋರಿಕೆಗಳು ಮಾತ್ರವೇ ಖಚರ್ಿಲ್ಲದವು. ನಿಮ್ಮ ಶಕ್ತಿಗಳನ್ನು ಉತ್ತೀಜಿಸುತ್ತವೆಯೇ ಹೊರತು ನಷ್ಟವನ್ನು ಉಂಟುಮಾಡುವುದಿಲ್ಲ. ಆನಂದವನ್ನು ನೀಡುವ ಸಕಾರಾತ್ಮಕವಾದ ಪರಮಸುಖದ ಅಂಶಗಳನ್ನು(ಪಾಜ್ಹಿಟಿವ್ ಬ್ಲಿಸ್ ಪಾಯಿಂಟ್ಸ್) ಗುರುತಿಸದೇ ಹೋಗುವುದು ಬದುಕಿನಲ್ಲಿನ ಅತ್ಯಂತ ದೀನ ಸ್ಥಿತಿ.
ಇನ್ನು ಹಣದ ವಿಷಯಕ್ಕೆ ಬರೋಣ. ಒಬ್ಬ ಬಡವ ಫéುಟ್ಪಾತ್ ಮೇಲೆ ಸುಖವಾಗಿ ನಿದ್ರಿಸಬಹುದು. ಒಬ್ಬ ಶ್ರೀಮಂತನಿಗೆ ಎಯರ್ ಕಂಡಿಷನ್ಡ್ ಕೊಠಡಿಯಲ್ಲಿ ಕೂಡಾ ಸರಿಯಾಗಿ ನಿದ್ರೆ ಬರದಿರಬಹುದು. ಅದರ ಅರ್ಥ ಮನುಷ್ಯ ಎಯರ್ ಕಂಡಿಷನರ್ಗಳನ್ನು ಕೋರಿಕೊಳ್ಳಕೂಡದೆಂದಲ್ಲ.
ಹಣ ಆನಂದವನ್ನು ನೀಡದಿರಬಹುದು. ಆದರೆ ನಿಶ್ಚಯವಾಗಿ ಸುಖವನ್ನು ನೀಡುತ್ತದೆ. ಆನಂದದಲ್ಲಿ ಸುಖ ಖಚಿತವಾದ ಅಂತಭರ್ಾಗ. ಕುಟುಂಬದೊಂದಿಗೆ ಸ್ಟಾರ್ ಹೊಟೇಲ್ಗೆ ಡಿನ್ನರ್ಗೆ ಹೋದಾಗ ಮೆನೂಕಾಡರ್್ನ ಎಡಗಡೆ ಭಾಗವನ್ನು ಮಾತ್ರ ನೋಡಿ (ಬಲಗಡೆ ಬೆಲೆಗಳನ್ನು ಮುದ್ರಿಸಿರುತ್ತಾದ್ದರಿಂದ) ಇಷ್ಟವಾದ ಪದಾರ್ಥಗಳಿಗೆ ಪದಾರ್ಥಗಳಿಗೆ ಆರ್ಡರ್ ಕೊಡಬಲ್ಲ ಸ್ಥಾಯಿಗೆ ಬರುವುದು ಎಲ್ಲರ ಅಭಿಲಾಷೆಯೇ ಅಲ್ಲವೇ?

ಮುಂದುವರೆಯುವುದು...

ಯಂಡಮೂರಿ ವೀರೇಂದ್ರನಾಥ್

ಕನ್ನಡಕ್ಕೆ:
ಯತಿರಾಜ್ ವೀರಾಂಬುಧಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.