ಬೈಟುಕಾಫಿ

ಭಯವನ್ನು ಚೆಂಡಾಡಲು ಆಯುಧವುಂಟು...

ಭಯವನ್ನು ಚೆಂಡಾಡಲು ಆಯುಧವುಂಟು...
Published On :

ಭಾಗ 12

ಭಯದ ಹಾಸಿಗೆಯ ಮೇಲೆ ಸೋಲಿನ ದುಪ್ಪಟಿ...

ಭಯವು ಎರಡು ರೀತಿಯದು. ಅರ್ಧರಾತ್ರಿ ಮಲಗುವ ಕೊಠಡಿಯಲ್ಲಿ ಶಬ್ದವೆನ್ನುವುದು  ವರ್ತಮಾನದ ಭಯ. ಬರುವ ತಿಂಗಳು ಮದುವೆಗೆ ಹಣ ಸೇರಿಸಲಾಗದೇ ಹೋಗುವುದು ನಾಳಿನ ಭಯ. ಅದನ್ನೇ ಆಂದೋಳನ ಎಂದು ಕೂಡಾ ಹೇಳುತ್ತಾರೆ.
ಭಯ ಎನ್ನುವುದು ಸಮಸ್ಯೆಯಲ್ಲ. ಬಲಹೀನತೆ. ಅದರಿಂದ ಬರುವುದು ಸಮಸ್ಯೆ. ಬೇರೆ ರಾಷ್ಟ್ರದಲ್ಲಿ  ಉದ್ಯೋಗ ಸಿಕ್ಕಿದರೆ ಮಗಳನ್ನು ಕಳಿಸದೇ ಇರುವುದು. ವಾಸ್ತು ಸರಿಯಿಲ್ಲವೆಂದು ಬಂಗಾರದಂತಹ  ಮನೆಯನ್ನು ಬಿಟ್ಟುಬಿಡುವುದು, ಹೆಂಡತಿ ಓಡಿಹೋಗುವಳೆಂಬ ಭಯದಿಂದ ಮಾಂಗಲ್ಯಕ್ಕೆ ನಾಲ್ಕನೆಯ  ಗಂಟು ಹಾಕುವುದು... ಇಂತಹವೆಲ್ಲಾ ಭಯದಿಂದ ಆಗುವ ಪರಿಣಾಮಗಳೇ. ಭಯಕ್ಕೆ ಅಭದ್ರತಾ ಭಾವ  ಕೂಡಾ ಒಂದು ಕಾರಣ. ಆಡಿಟೋರಿಯಂನಲ್ಲಿ ಮುಂದಿನ ಸೀಟುಗಳು ಖಾಲಿ ಇದ್ದರೂ ಹಿಂದಿನ ವರಸೆಯಲ್ಲಿ ಕು ಳಿತುಕೊಳ್ಳುವ ವಿದ್ಯಾರ್ಥಿಗಳು ಈ ಗುಂಪಿಗೆ ಸೇರುತ್ತಾರೆ.
ನಾವು ಭಯಪಟ್ಟಷ್ಟೂ ಇತರರು ನಮ್ಮ ಬಲಹೀನತೆಗಳ ಮೇಲೆ ಆಡಿಕೊಳ್ಳುತ್ತಾರೆ. ಈ ಪತ್ರವನ್ನು  ಹತ್ತು ಜನರಿಗೆ ಕಳಿಸದಿದ್ದರೆ ನಿಮ್ಮ ಬದುಕು ಬಸ್ಟಾಂಡಿನಂತಾಗುತ್ತದೆ ಎಂದು ಬರೆಯುವವನೊಬ್ಬ. ಮುಖ್ಯದ್ವಾರ ಬದಲಾಯಿಸದಿದ್ದರೆ ನಿನ್ನ ವ್ಯಾಪಾರ ಮಟಾಷ್ ಎನ್ನುವವನೊಬ್ಬ. ಹೊಟ್ಟೆಯ ಮೇಲೆ  ಕಬ್ಬಿಣದ ಕಂಬಿಯಿಂದ ಕೆಂಪಗೆ ಸುಡದಿದ್ದರೆ ನಿನ್ನ ಮಗನ ಹೊಟ್ಟೆ ನೋವು ಕಡಿಮೆಯಾಗದು  ಎನ್ನುತ್ತಾನೆ ಮೂರನೆಯವನೊಬ್ಬ.
ನೀವು ಗಮನಿಸಿರುವಿರಾ? ಬಹಳ ಜನ ಕ್ರಿಕೆಟರ್ಗಳ ಮಣಿಕಟ್ಟುಗಳಲ್ಲಿ ತಾಯಿತಗಳೂ, ಕುತ್ತಿಗೆಯಲ್ಲಿ ಸ ರಗಳೂ ವಿಪರೀತವಾಗಿ ಕಾಣಿಸುತ್ತಿರುತ್ತವೆ. ಬಹುಶ: ಇವರ ತಾಯ್ತಂದೆಯರು ಕಟ್ಟಿಸಿರುತ್ತಾರೆ. ಈ  ಕ್ರಿಕೆಟರುಗಳಿಗೆ ಬಹಳ ಹಣವಿರುವುದು. ಎಲ್ಲಿ ಹಣವಿದ್ದರೆ ಅಲ್ಲಿ ಒಂದು ಅಭದ್ರತಾ ಭಾವವೂ, ಎಲ್ಲಿ ಅಭದ್ರತಾಬಾವವಿರುವುದೋ ಆ ಭಾವವನ್ನು ನಿರಂತರವಾಗಿ ಹೆಚ್ಚಿಸುತ್ತಾ ಇರಲು ಅಲ್ಲಿ ಒಬ್ಬ ಬಾಬಾನೋ, ಜ್ಯೋತಿಷಿಯೋ  ಇವರ ತಾಯ್ತಂದೆಯರಲ್ಲಿ ಭಯ ಉಂಟುಮಾಡಿ ತಮ್ಮ ಹಬ್ಬ ಮಾಡಿಕೊಳ್ಳುತ್ತಾರೆ. ಅದರಲ್ಲಿ ವಿಚಿತ್ರವೇನಿದೆ?  ರಣಜಿ ಆಡುವವರಿಗೆ ಕೂಡಾ ತಾಯಿತಗಳಿರುತ್ತವೆ. ಆದರೆ ಐವತ್ತು ಮಂದಿ ರಣಜಿ ಆಟಗಾರರಲ್ಲಿ ಕೇವಲ ಒಬ್ಬರೇ  ದೇಶಕ್ಕೆ ಆಡಲು ಆಯ್ಕೆಯಾಗುತ್ತಾರೆ. ಅವರು ದೇಶದ ಪ್ರಾತಿನಿಧ್ಯವನ್ನು ವಹಿಸಬೇಕೆಂದರೆ ಇನ್ನೂ  ಚೆನ್ನಾಗಿ ಆಡಬೇಕು. ಆಟಕ್ಕೆ ಬೇಕಾಗಿರುವುದು ಪ್ರತ್ಯರ್ಥ ಏಟಿಗೆ ಎದುರೇಟು. ತಾಯಿತ ಅಲ್ಲ.
ಬಹಳ ಕಾಲದ ಹಿಂದೆ ಒಂದು ಸಿನಿಮಾ ಬಂದಿತ್ತು. ಯುದ್ಧಕ್ಕೆ ಹೋಗುತ್ತಿದ್ದ ಪುಕ್ಕಲ ರಾಜನಿಗೆ ಸಾಧುವೊಬ್ಬ  ಒಂದು ಗೊಂಬೆ ನೀಡಿ, ಇದು ನಿನ್ನ ಬಳಿ ಇದ್ದರೆ ನೀನು ಗೆಲ್ಲುತ್ತೀ ಎನ್ನುತ್ತಾನೆ. ಆ ಗೊಂಬೆ ಕೊಟ್ಟ  ಧೈರ್ಯದೊಂದಿಗೆ ರಾಜ ಯುದ್ಧ ಗೆಲ್ಲುತ್ತಿದ್ದಾಗ, ಹೋರಾಟದ ನಡುವೆ ಅದೆಲ್ಲಿಯೋ  ಜಾರಿಹೋಗಿರುತ್ತದೆ. ಗೊಂಬೆ ತನ್ನ ಬಳಿ ಇದೆ ಎನ್ನುವ ಧೈರ್ಯದೊಂದಿಗೇ ಆ ರಾಜ ಯುದ್ಧವನ್ನು  ಗೆದ್ದನೆನ್ನಿ. ಈ ವಿಧವಾಗಿ ಜೇಬಿನಲ್ಲಿ ಗೊಂಬೆ-ಆಟದ ಗೊಂಬೆ ಮನುಷ್ಯನಿಗೆ ಆತ್ಮವಿಶ್ವಾಸವನ್ನು ನಿ ಡುತ್ತದೆಯೇ ಹೊರತು ಯುದ್ಧವನ್ನು ಗೆಲ್ಲಿಸಿ ಕೊಡುವುದಿಲ್ಲ.
ಕೆಲವರಿಗೆ ಟೆಡ್ಡಿ ಬೇರ್ಗಳೆಂದರೆ, ಮುದ್ದಾಗಿರುವ ಉಣ್ಣೆಯ ನಾಯಿಗಳು, ಕೊನೆಗೆ ಮೊಲಗಳೆಂದರೂ  ಭಯವಿರುತ್ತದೆ. ವೇದಿಕೆ ಹತ್ತಲು ಭಯ..! ವೃದ್ಧಾಪ್ಯದ ಭಯ..! ಅತ್ತೆಯ ಮನೆಗೆ ಕಾಲಿಟ್ಟಿರುವ ಸೋಸೆಗೆ, ಶತ್ರುಗಳ ಕೈಗೆ ಸಿಕ್ಕಿಬಿದ್ದಿರುವ ಸೈನಿಕನಿಗೆ - ಭವಿಷ್ಯತ್ತಿನ ಭಯ..! ಭಯಗಳು ಎಷ್ಟು  ರೀತಿಯವೋ ನೋಡಿರಿ.
ಸೋಲಿನ ಭಯ: ಮೊಟ್ಟಮೊದಲ ಸಲ ಮಾತಾಡಲು ವೇದಿಕೆ ಹತ್ತಿದಾಗ
ನಿರಾಧಾರ ಭಯ: ಟೆಡ್ಡಿ ಬೇರ್ಸ್, ಹೂಗಳು, ಸಾಕು ಪ್ರಾಣಿಗಳು
ತಿರಸ್ಕಾರ ಭಯ: ದೊಡ್ಡ ಲೇಖಕರಿರುವ ಕಥೆಗಳ ಪೈಪೋಟಿಯಲ್ಲಿ ಪಾಲ್ಗೊಳ್ಳಲು ಸಂದೇಶಿಸುವುದು
ಭವಿಷ್ಯದ ಭಯ: ಅತ್ತೆಯ ಮನೆಯಲ್ಲಿ ಹೊಸ ಮದುಮಗಳು, ಶತ್ರುವಿನ ಅಧೀನದಲ್ಲಿ ಸೈನಿಕ
ಗೆಲುವಿನ ಭಯ: ಕ್ಯಾಪ್ಟನ್ ಆಗಿದ್ದ ಆಟಗಾರ; ಐ.ಐ.ಟಿ.ಯಲ್ಲಿ ಗ್ರಾಮೀಣ ವಿದ್ಯಾಥರ್ಿ
ಅಭದ್ರತೆಯ ಭಯ: ಮಿತ್ರರನ್ನು ಕಳೆದುಕೊಳ್ಳುವುದು, ಅನಾರೋಗ್ಯ, ವೃದ್ಧಾಪ್ಯ
ಹೊಸ ವಾತಾವರಣ: ಶಾಲೆಯಲ್ಲಿ ಮೊದಲ ದಿನ, ವಿದೇಶಗಳಲ್ಲಿ ಓದಲು ಪ್ರಯಾಣ
ಮೂಢ ನಂಬಿಕೆಗಳು: ದೆವ್ವ, ವಾಸ್ತು
ಭಯವು ಇಷ್ಟು ತಳಮಳ ಸೃಷ್ಟಿಸುವು ದಾದರೆ ಮತ್ತೆ ಮನುಷ್ಯರು ಏಕೆ ಹಾರರ್ ಚಿತ್ರಗಳನ್ನು  ನೋಡುತ್ತಾರೆ? ಇದು ಮನಸ್ತತ್ವಕ್ಕೆ ಸಂಬಂಧಿಸಿದ ಸಂಗತಿ. ಸೇಫ್ ಆಗಿ ಇರುವೆವೆಂಬ ಧೈರ್ಯದಿಂದ  ನಾವು ನಮ್ಮ ಭಾವೋದ್ವೇಗಗಳೊಂದಿಗೆ ಆಡಿಕೊಳ್ಳುವ ಆಟ ಅದು. ಸೊಂಟಕ್ಕೆ ಹಗ್ಗ ಕಟ್ಟಿಕೊಂಡಿರುವ  ನಂಬಿಕೆಯೊಂದಿಗೆ ಮಾಡುವ ಬಂಜೀ ಜಂಪ್ನಂತಹದ್ದು.
ಒಂದು ಚಿಕ್ಕ ಮಗು ಚೆಂಡನ್ನು ಎಸೆಯುತ್ತದೆ. ಮತ್ತೆ ಕೈಗಿತ್ತರೆ ಮತ್ತೆ ಎಸೆಯುತ್ತದೆ. ಆ  ಚರ್ಚೆಯನ್ನು ವೀಕ್ಷಿಸುತ್ತಾ ಪ್ರಖ್ಯಾತ ಮನೋಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್, ಚೆಂಡನ್ನು ಕಳೆದುಕೊಂಡೆನೆನ್ನುವ ಭಯವು- ಮತ್ತೆ ಪಡೆಯಬೇಕೆಂಬ ಆನಂದವನ್ನು ಅತಿಕ್ರಮಿಸುತ್ತದೆ ಎಂದಿ ದ್ದಾನೆ. ಚೆಂಡು ಇನ್ನೆಲ್ಲಿಗೂ ಹೋಗುವುದಿಲ್ಲ ಎನ್ನುವ ನಂಬಿಕೆ ಕುದುರುವವರೆಗೂ (ಆನಂದ  ಕಡಿಮೆಯಾಗುವವರೆಗೂ) ಮಕ್ಕಳು ಹಾಗೆ ಎಸೆಯುತ್ತಲೇ ಇರುತ್ತಾರಂತೆ.
ಭಯಕ್ಕೆ ಕಾರಣ ನಂಬಿಕೆ. ವಿಚಿತ್ರವೆಂದರೆ, ಭಯವನ್ನು ಹೋಗಲಾಡಿಸುವ ಮದ್ಯ ಕೂಡಾ ಕೇವಲ  ನಂಬಿಕೆ ಮಾತ್ರವೇ. ಮನೆಯಲ್ಲಿ ಟಿ.ವಿ. ಕೆಲಸ ಮಾಡದಿದ್ದರೆ ಆಪರೇಟರ್ ಬಳಿ ಕರೆಂಟು ಹೋಗಿದೆಯೆಂದೋ,  ಕೇಬಲ್ ವೈರ್ ಕಿತ್ತುಹೋಗಿದೆ ಎಂದೋ ಹೇಳುತ್ತೇವೆಯೇ ಹೊರತು, ನಮ್ಮ ಟಿ.ವಿ. ಹಾಳಾಗಿದೆಯೆಂದು  ಅಂದುಕೊಳ್ಳುವುದಿಲ್ಲ. ಭಯ ಕೂಡಾ ಅಂತಹುದ್ದೇ. ಸಮಸ್ಯೆ ಇನ್ನೆಲ್ಲಿಯೋ ಇಲ್ಲ. ನಮ್ಮಲ್ಲಿಯೇ ಇದೆ.  ಭಯದ ಹಿಂದಿನ ನಿಜವಾದ ಕಾರಣವನ್ನು ಕಂಡುಕೊಂಡರೆ, ನಾಲ್ಕು ಹಂತಗಳಲ್ಲಿ ಭಯವನ್ನು ಹೋಗ ಲಾಡಿಸಿಕೊಳ್ಳಬಹುದು.

ಮೊದಲ ಮೆಟ್ಟಿಲು - ಶೋಧನೆ

ಭಯ ಬೇರೆ. ಜುಗುಪ್ಸೆ ಬೇರೆ. ಜಿರಳೆ, ಹಲ್ಲಿ ಭಯವಲ್ಲ. ಜುಗುಪ್ಸೆ. ಹಾಗೆಯೇ ಭಯ ಬೇರೆ. ಜಾಗ್ರತೆ  ಬೇರೆ. ತರ್ಕರಹಿತವಾದ ಭಯವನ್ನು ಜಾಗ್ರತೆ ಎನ್ನುತ್ತಾರೆ. ಜೀವನದಲ್ಲಿ ಜಾಗ್ರತೆಗಳು ಬಹಳವೇ  ಅಗತ್ಯ. ಡಯಾಬಿಟೀಸ್ ಇರುವ ವ್ಯಕ್ತಿಗೆ ಯಾವ ಕ್ಷಣದಲ್ಲಾದರೂ ಬಿ.ಪಿ. ಹೆಚ್ಚಬಹುದು. ಎಚ್ಚರಿಕೆಯಿಂದ ಇರಬೇಕು. ಅದು ಸಕಾರಣದ ಭಯ. ಕತ್ತಲೆಂಲ್ಲಿ ನಿಧಾನವಾಗಿ ನಡೆಯುವಂತಹದ್ದು ಇದು. ನಿಮ್ಮದು  ಯಾವ ರೀತಿಯ ಭಯಗಳು? ಸಕಾರಣದ ಭಯಗಳೇ? ಇಲ್ಲಾ ಅಕಾರಣದ ಭಯಗಳೇ?
ನಿಮ್ಮನ್ನು ತನ್ನ ದಾಸನಾಗಿ ಮಾಡಿಕೊಳ್ಳಲು ಎದುರಿನವನು ನಿಮ್ಮ ಮನಸ್ಸಿನಲ್ಲಿ ತರಲೆತ್ನಿಸುವ ಭಯಗ ಳು ಅಕಾರಣವಾದವು. ಶಾಂತರೀತಿಯಲ್ಲಿ ಯೋಚಿಸಿರಿ.  ನಿಮಗೆ ಈ ಭಯ ಯಾವಾಗ, ಏಕೆ, ಹೇಗೆ ಉಂಟಾಯಿತು? ನಿಮಗೆ ದೆವ್ವ ಹಿಡಿದಿದೆ ಎಂದುಕೊಳ್ಳೋಣ.  ದಯವಿಟ್ಟು ಕ್ಷಮಿಸಿ. ಒಬ್ಬ ಭೂತವೈದ್ಯ ಹತ್ತುಸಾವಿರ ವರಹಗಳ ನ್ನು ಕೇಳುತ್ತಾನೆ. ಆಲೋಚಿಸಿರಿ. ದೆವ್ವ ಮನುಷ್ಯನಿಗೆ  ಹಾನಿ ಮಾಡುವುದನ್ನು ನೀವೆಲ್ಲಾದರೂ  ನೋಡಿರುವಿರಾ? ಇಲ್ಲಾ ಓದಿರುವಿರಾ? ವದಂತಿಗಳು, ಯಾರೋ ಹೇಳಿದ ಮಾತಗಳನ್ನು ಬಿಟ್ಟುಬಿಡಿರಿ. ದೆವ್ವ  ಎಂದರೆ ಲೇಖಕರೂ, ನಿದರ್ೇಶಕರೂ ಸೃಷ್ಟಿಸಿದ ಭಯಾನಕ, ಭೀಭತ್ಸ ರಸಗಳೇ ತಾನೇ?

ಎರಡೇ ಎರಡು ಪ್ರಶ್ನೆಗಳು
1. ನನಗೆ ಯಾವುದರ ಬಗ್ಗೆ ಭಯ?
2. ಅದರ ಬಗ್ಗೆ ನನಗೇಕೆ ಭಯ? ಇದೇ ಶೋಧನೆ ಎಂದರೆ.

ಎರಡನೇ ಮೆಟ್ಟಿಲು - ವಿಶ್ಲೇಷಣೆ
ಶೋಧನೆ ಪೂರ್ಣವಾದ ಮೇಲೆ ನಿಮ್ಮ ಭಯಗಳ ಪರಿಣಾಮಗಳನ್ನು ವಿಶ್ಲೇಷಿಸಿರಿ. ನಿಮ್ಮ ಒಳ್ಳೆಯ ನಿ ಧರ್ಾರಗಳ ಮೇಲೆ ನೀವು ಕೆಟ್ಟ ಭಯಗಳ ಪ್ರಭಾವ ಎಷ್ಟಿರುತ್ತದೆ? ಅದು ನಿಮ್ಮ ಭವಿಷ್ಯತ್ತನ್ನು  ಯಾವ ವಿಧವಾಗಿ ವಿಶ್ಲೇಷಿಸುತ್ತದೆ? ಉದಾಹರಣೆಗೆ ನೀವೊಬ್ಬ ವ್ಯಕ್ತಿಯನ್ನು ಪ್ರೇಮಿಸುತ್ತಿದ್ದೀರಿ.  ಜಾತಕಗಳು ಸರಿಹೊಂದುವುದಿಲ್ಲವೆಂದೂ, ಈ ಮದುವೆ ನಡೆದರೆ ಪ್ರಾಣಹಾನಿ ತಪ್ಪದೆಂದೂ ಜ್ಯೋತಿಷಿ ಹೇಳಿ ದನೆಂದುಕೊಳ್ಳೋಣ. ನಿಮ್ಮದು ನಿಜವಾದ ಪ್ರೇಮವಾಗಿದ್ದರೆ, ಪ್ರೇಮಿಸಿದ ವ್ಯಕ್ತಿಯಿಲ್ಲದ ಬದುಕು  ಪ್ರಾಣರಹಿತವೇ ತಾನೇ? ಇಲ್ಲಿ ಹೊಸದಾಗಿ ಹೋಗುವುದಕ್ಕೆ ಇನ್ನೇನಿದೆ?
ನೀನು ವ್ಯಾಪಾರ ಆರಂಭಿಸಬೇಕೆಂದಿರುವೆಯಾ? ಇನ್ನೆರಡು ವರ್ಷಗಳವರೆಗೆ ಸುಮ್ಮನಿರದಿದ್ದರೆ ಬಹ ಳ ನಷ್ಟವನ್ನು ಹೊಂದುತ್ತೀ. ನಿನ್ನ ಮನೆ ಸಿಡಿದುಹೋಗುತ್ತದೆ. ಮದುವೆಯಾದ ನಿನ್ನ ಮಗ ಬೇರೆ  ಹುಡುಗಿಯೊಂದಿಗೆ ಓಡುಹೋಗುತ್ತಾನೆ. ನಿನ್ನ ಮಗಳು ಕಂಪ್ಯೂಟರ್ ಮುಂದಿನಿಂದ ಅಲುಗಾಡುವುದಿಲ್ಲ.  ನಿನ್ನ ಜನ್ಮನಕ್ಷತ್ರದ ಪ್ರಕಾರ ನೀನು ಹೋಮ ಮಾಡಿಸಿದರೆ ನೀನು ತಕ್ಷಣವೇ ವ್ಯಾಪಾರ ಪ್ರಾರಂಭಿಸಬ ಹುದು. ಕರೆದೊಯ್ದಿದ್ದ ಹುಡುಗಿಯನ್ನು ಕಾಡಿನಲ್ಲಿ ಬಿಟ್ಟು, ಓಡಿಹೋಗಿದ್ದ ನಿನ್ನ ಮಗ ಮರಳಿ ಬರುತ್ತಾನೆ.  ನಿನ್ನ ಮಗಳಿಗೆ ಮದುವೆಯಾಗುತ್ತದೆ. ಅಂದ ಹಾಗೆ, ಆ ಹೋಮಕ್ಕೆ ಒಂದು ಲಕ್ಷ ಖರ್ಚು ಆಗುತ್ತದೆ  ಎನ್ನುತ್ತಾನೆ.   ಇಂತಹ ಮೋಸಗಾರರ ಬಲೆಯಿಂದ ತಪ್ಪಿಸಿಕೊಳ್ಳಲು ಇರುವುದು ಒಂದೇ ದಾರಿ. ನಿಮ್ಮ, ನಿಮ್ಮ ಭಾಗ ಸ್ವಾಮಿಯ, ನಿಮ್ಮ ಮಕ್ಕಳದು ಇಲ್ಲವೇ ನಿಮ್ಮ ತಾಯ್ತಂದೆಯರು ನಾಲ್ವರ ನಕ್ಷತ್ರಗಳನ್ನು  ಕೊಡಿ. ಅದರಲ್ಲಿ ತಕ್ಷಣವೇ ವ್ಯಾಪಾರ ಆರಂಭಿಸಲು ಯಾವ ನಕ್ಷತ್ರ ಚೆನ್ನಾಗಿದೆಯೋ ಕೇಳಿರಿ. ವಿಧಿಯಿಲ್ಲದೇ  ಯಾವುದೋ ಒಂದು ಆಯ್ಕೆ ಮಾಡುತ್ತಾನೆ. ಅವರ ಹೆಸರಿನ ಮೇಲೆ ವ್ಯಾಪಾರ ಶುರು ಮಾಡಿ ಎರಡು  ವರ್ಷಗಳ ನಂತರ ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳುವುದರ ಮೂಲಕ ನೀವು ಆ ಹೋಮದ  ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಮೂರನೆಯ ಮೆಟ್ಟಿಲು - ಖಂಡನೆ

ವಿಶ್ಲೇಷಣೆ ಪೂರ್ತಿ ಆಗಿದೆ. ಇನ್ನು ಆಯುಧಗಳನ್ನು ಹುಡುಕಿರಿ. ಭಯವನ್ನು ಸೀಳಿ ಚೆಂಡಾಡಲು  ನವನವೀನ ಆಯುಧಗಳು ಬೇಕು. ಹಳೆಯವುಗಳಿಂದ ಲಾಭವಿಲ್ಲ. ನಿಮ್ಮ ಭಯಗಳು ಸ್ಟೇಜ್  ಹತ್ತಲು ಭಯ, ಇಂಟರ್ವ್ಯೂ ಭಯ ಎಂದುಕೊಳ್ಳೋಣ. ಸ್ಟೇಜ್ ಹತ್ತುವ ಭಯ ಹೋಗಿಸಲು ಒಂದೇ  ಒಂದು ದಾರಿ.. ಸ್ಟೇಜ್ ಹತ್ತುವುದು..! ಈ ಮೊದಲೇ ಹೇಳಿದ ಹಾಗೆ ನನಗಿದೇ ಮೊದಲ ಶೋಭನ, ಅನುಬ ವವಿಲ್ಲ. ಬೇಡ ಎಂದರೆ ಹೇಗೆ? ರಣರಂಗಕ್ಕೆ ಇಳಿಯದಿದ್ದರೆ ಯುದ್ಧ ಹೇಗೆ ಪ್ರಾರಂಭವಾಗುತ್ತದೆ?
(ಮುಂದುವರಿಯುವುದು)

ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ: ಯತಿರಾಜ್ ವೀರಾಂಬುಧಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.