ಉದಾಸೀನ ವೈರಸ್, ಉತ್ಸಾಹ ಸಕ್ಸಸ್

ಉತ್ಸಾಹವೇ .. ಸಾರೀ.. ಹೋಗಿಬಾ.. ನಾನು ಬಿಜಿಯಾಗಿ ಇದ್ದೇನೆ:
ಉದಾಸೀನತೆ ಎಂದರೆ ಯಾವುದರ ಬಗ್ಗೆಯೂ ಆಸಕ್ತಿ, ಉತ್ಸಾಹ ಇಲ್ಲದಿರುವುದು. ಉಗ್ರಗಾಮಿಗಳ ದಾಳಿಗೆ ಹತ್ತುಸಾವಿರ ಮಂದಿ ಸತ್ತುಹೋಗಿದ್ದಾರೆ ಎನ್ನುವ ವಾತರ್ೆ ಕಿವಿಗೆ ಬಿದ್ದಾಗ ನಿಮ್ಮ ಪಕ್ಕದ ವ್ಯಕ್ತಿಯಲ್ಲಿ ಯಾವುದೇ ರೀತಿಯ ಸಹಾನುಭೂತಿಯಾಗಲೀ, ಸ್ಪಂದನವಾಗಲೀ ಇಲ್ಲದಿದ್ದರೂ, ನಮ್ಮ ಸ್ನೇಹಿತ ಕುಟುಂಬದೊಂದಿಗೆ ಈ ದೇಶ ಬಿಟ್ಟು ಹೊರಟುಹೋಗುತ್ತಿದ್ದಾನೆ. ಮತ್ತೆ ಮರಳಿ ಬರದೇ ಇರಬಹುದು. ಒಂದು ಸಾರಿ ಹೋಗಿ ಭೇಟಿಯಾಗೋಣ ಎಂದು ಕೇಳಿದರೆ, ಪಕ್ಕದ ವ್ಯಕ್ತಿ ಸೋಮಾರಿತನದ ನಿಟ್ಟುಸಿರಿನೊಂದಿಗೆ, ಹೂಂ... ಏನೆಂದು ಭೇಟಿಯಾಗುತ್ತೀರಿ ಎಂದು ಉದ್ವೇಗರಹಿತವಾಗಿ ಹೇಳಿದರೂ, ಅವನು ಬಹಳ ಉದಾಸೀನತೆಯೊಂದಿಗೆ ಬದುಕು ತ್ತಿರುವನೆಂದರ್ಥ.
ಉದಾಸೀನತೆ ವೈರಸ್ನಂತಹದ್ದು. ಇಂತಹ ಉದಾಸೀನತೆಗೆ ಕಾರಣ ಜೀವನ ರೊಟೀನ್ ಎನ್ನುವ ಭಾವನೆ ದಿನದಿನಕ್ಕೆ ಹೆಚ್ಚಾಗುವುದು. ವಿಜಯಕ್ಕೆ ಐದು ಮೆಟ್ಟಿಲು ನಲ್ಲಿ ಒಬ್ಬ ಸೈಕಾಲಜಿಸ್ಟ್ಗೆ, ಗೃಹಿಣಿಗೆ ಮಧ್ಯೆ ಇಂತಹ ಉದಾಸೀನತೆಯ ಪ್ರಸ್ತಾವನೆ ಬಂದಿತ್ತು.
ಗೃ : ನನಗೆ ಬದುಕು ಬಹಳ ಬೇಸರವಾಗಿದೆ. ಸಾಯಬೇಕೆನ್ನಿಸಿದೆ.
ಸೈ : ನಿಮಗೇನಾದರೂ ಸಮಸ್ಯೆ ಇರುವುದೇ?
ಗೃ: ದೊಡ್ಡ ಸಮಸ್ಯೆಗಳೇನೂ ಇಲ್ಲ. ಇಬ್ಬರು ಮಕ್ಕಳು. ಬೆಳಿಗ್ಗೆಯೇ ಶಾಲೆಗೆ ಹೋಗುತ್ತಾರೆ. ರಾತ್ರಿ ಹತ್ತುಗಂಟೆಯವರೆಗೂ ಟ್ಯೂಷನ್ಗಳಿರುತ್ತವೆ. ಗಂಡ ಬಹಳ ಒಳ್ಳೆಯವರು. ಆದರೆ ತನ್ನ ಪ್ರಪಂಚದಲ್ಲಿಯೇ ಬದುಕುತ್ತಾರೆ. ಕೆಲಸ ಬಿಟ್ಟು ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ.
ಸೈ : ಅಂದರೆ?
ಗೃ : ಆತ ಒಂದು ದಿನ ಬೆಳಿಗ್ಗೆ ಎಂಟಕ್ಕೇ ಆಫೀಸಿಗೆ ಹೋದರು
ಸೈ : ಅದರಲ್ಲಿ ತಪ್ಪೇನಿದೆ?
ಗೃ : ಆ ದಿನ ಭಾನುವಾರ ಎಂದು ಅಲ್ಲಿನ ವಾಚ್ಮನ್ ಹೇಳಿದಾಗ ಮರಳಿ ಬಂದುಬಿಟ್ಟರು.
ಸೈ: ನಿಮ್ಮ ಗಂಡ, ಮಕ್ಕಳು ಮನೆಯಲ್ಲಿಲ್ಲದಿದ್ದಾಗ ದಿನವೆಲ್ಲಾ ಏನು ಮಾಡ್ತೀರಿ? ಸಂಗೀತ ಕೇಳುವುದು ಇಲ್ಲವೇ ಪುಸ್ತಕಗಳನ್ನು ಓದುವುದು, ಅದಿಲ್ಲದಿದ್ದರೆ ಟಿ.ವಿ. ನೋಡುವಂತಹುದ್ದೇನನ್ನಾದರೂ ಮಾಡುವಿರಾ?
ಗೃ: ದಿನಕ್ಕೊಂದು ಸಿನಿಮಾ. ಮೂರು ಅಥವಾ ನಾಲ್ಕು ಸೀರಿಯಲ್ಸ್ ನೋಡ್ತೀನಿ. ಅದು ಕೂಡಾ ಉತ್ಸಾಹ ಇರುವುದಿಲ್ಲ.
ಸೈ: ನಿಮ್ಮ ದಿನಚರಿ ಹೇಳಿರಿ
ಗೃ: ಬೆಳಿಗ್ಗೆಯೇ ಎಲ್ಲರೂ ಹೊರಟುಹೋಗುತ್ತಾರೆ. ನಾನು ಮನೆ ಕೆಲಸವನ್ನು ಪೂತರ್ಿ ಮಾಡಿ ಮಧ್ಯಾಹ್ನ ಟಿ.ವಿ. ನೋಡುತ್ತೇನೆ. ಸ್ವಲ್ಪ ಹೊತ್ತು ಫೋನಿನಲ್ಲಿ ಮಾತಾಡುತ್ತೇನೆ. ನಂತರ ಮಕ್ಕಳೊಂದಿಗೆ ಬಿಝಿ ಆಗಿಬಿಡುತ್ತೇನೆ. ತಿನ್ನುವುದು, ಮಲಗುವುದು. ಅಷ್ಟೇ.
ಸೈಕಾಲಜಿಸ್ಟ್ಗೆ ವಿಷಯವೇನೆಂದು ಅರ್ಥವಾಗಿತ್ತು. ವಿಮಾನ ನಿಲ್ದಾಣಗಳಲ್ಲಿಯೂ, ರೈಲ್ವೇ ನಿಲ್ದಾಣಗಳಲ್ಲಿಯೂ ಪ್ರಯಾಣಿಕರು ಒಳಗೆ ತೆಗೆದುಕೊಂಡು ಹೋಗುವ ವಸ್ತುಗಳಲ್ಲಿ ವಿಧ್ವಂಸಕಾರಿ ಪದಾರ್ಥಗಳನ್ನು ಹಿಡಿದುಕೊಳ್ಳಲು ಮೆಟಲ್ ಡಿಟೆಕ್ಟರ್ ಇರುವಂತೆ, ಮನುಷ್ಯನಲ್ಲಿನ ಅಪಾಯಕಾರಿ ಪರಿಣಾಮಗಳನ್ನು ಹಿಡಿದುಕೊಳ್ಳಲು ಮೆಂಟಲ್ ಡಿಟೆಕ್ಟರ್ ಇರುತ್ತದೆ. ಸರಿಯಾಗಿ ಆಯಿಲ್ ಮಾಡದಿದ್ದರೆ ಅದು ಹಾಳಾಗುತ್ತದೆ. ಆ ಗೃಹಿಣಿಯ ವಿಷಯದಲ್ಲಿಯೂ ಅದೇ ನಡೆದಿತ್ತು. ಯಾವ ಕೋನದಿಂದ ನೋಡಿದರೂ ಆಕೆ ಸಂತೋಷ ಹೊಂದಲಾರದೇ ಹೋದಳು.
ಮಕ್ಕಳು ಒಂದು ಹೊಣೆಗಾರಿಕೆ, ಗಂಡ ಒಬ್ಬ ನಿರಾಸಕ್ತ. ಅವಳ ಬದುಕೆಲ್ಲಾ ಅವರೊಂದಿಗೇ ಗಂಟು ಹಾಕಿಕೊಂಡಿದೆ. ಆ ವೃತ್ತದ ಹೊರಗೆ ಯಾವ ಸಂತೋಷವೂ ಇಲ್ಲದೇ ಹೋದದ್ದರಿಂದ ಅವಳ ಮೆಂಟಲ್ ಡಿಟೆಕ್ಟರ್ ಫೆಯಿಲ್ ಆಗಿಹೋಗಿತ್ತು.
ಸೈಕಾಲಜಿಸ್ಟ್ ಆಕೆಯೊಂದಿಗೆ ಮತ್ತೆ ಒಂದು ತಿಂಗಳ ನಂತರ ಭೇಟಿಯಾಗೆಂದೂ, ಅಷ್ಟರಲ್ಲಿ ಆಕೆಗೆ ಆಸಕ್ತಿ ಇರುವ ಯಾವುದಾದರೂ ಒಂದು ಅಭಿರುಚಿಯನ್ನು ಗುರುತಿಸೆಂದೂ ಹೇಳಿದ. ಮತ್ತೆ ಆಕೆ ಬರಲೇ ಇಲ್ಲ.
ಜೀವನದ ಬಗ್ಗೆ ಪ್ರೇಮ ಎನ್ನುವುದು ಒಂದು ಅದ್ಭುತವಾದ ಎಮೋಷನಲ್ ಎಕ್ಸರ್ಸೈಜ್. ಒಳ್ಳೆಯ ಪುಸ್ತಕಗಳನ್ನು ಓದುವುದು, ಪದರಂಗವನ್ನು ತುಂಬುವುದು, ಒಳ್ಳೆಯ ಸ್ನೇಹಿತರು, ಹವ್ಯಾಸಗಳು, ಒಳ್ಳೆಯ ಅಭಿರುಚಿಗಳು, ವ್ಯಾಯಾಮ, ಆರೋಗ್ಯಕರವಾದ ಭೋಜನ - ಇವು ಜೀವನದ ಬಗ್ಗೆ ಕುತೂಹಲವನ್ನು ಉಂಟುಮಾಡುತ್ತವೆ. ದೈಹಿಕ, ಮಾನಸಿಕ ಆರೋಗ್ಯಗಳನ್ನು ಹೆಚ್ಚಿಸುತ್ತವೆ.
ಗೌತಮಬುದ್ಧ ಉದಾಸೀನತೆಯನ್ನು ಜೈಲಿನೊಂದಿಗೆ ಹೋಲಿಸುತ್ತಾನೆ. ಒಬ್ಬ ಖೈದಿ ಚಿಕ್ಕಂದಿನಿಂದ ಕಾರಾಗೃಹದಲ್ಲಿ ಇರುತ್ತಾನೆಂದುಕೊಳ್ಳೋಣ. ಅದು ಹಬ್ಬದ ದಿನ. ಹೊರಗೆ ಜನರು ಬಹಳ ಸಂತೋಷದಿಂದ ಹಬ್ಬವನ್ನು ಮಾಡುತ್ತಿದ್ದಾರೆಂದು ಉಳಿದವರು ಅವನೊಂದಿಗೆ ಹೇಳುತ್ತಿದ್ದಾಗ, ಅದರ ಬಗ್ಗೆ ತಿಳಿಯದಿದ್ದುದರಿಂದ ಮೌನವಾಗಿದ್ದ. ಮರು ವರ್ಷ ಜೈಲಿನಿಂದ ಹೊರಬಂದು ಆ ಹಬ್ಬವನ್ನು ಆನಂದಿಸುತ್ತಿದ್ದಾಗ ಅವನು ತನ್ನ ಗತಜೀವನವನ್ನು ನೆನಪಿಸಿಕೊಂಡು, ಕೇವಲ ತನ್ನ ತಪ್ಪಿನಿಂದಾಗಿ ಇಷ್ಟು ವರ್ಷ ಇಷ್ಟೂ ಹಬ್ಬಗಳನ್ನೂ ಅನುಭವಿಸಲಾಗಲಿಲ್ಲ ಎಂದುಕೊಂಡಿದ್ದೆ. ಮನುಷ್ಯ ಕೂಡಾ ಹಾಗೆಯೇ. ಜೀವನ ಎನ್ನುವ ಹಬ್ಬವನ್ನು ಆನಂದಿಸದೇ ಹೋಗಲು ನಿದ್ದೆಯ ಮತ್ತು, ಸೋಮಾರಿತನ, ಮೈಗಳ್ಳತನದ ತಪ್ಪುಗಳು ಅವನನ್ನು ಜೈಲಿನಲ್ಲಿ ಬಂದಿಯಾಗಿಡುತ್ತವೆ ಎನ್ನುತ್ತಾನೆ.
ಏಕೆ ಕೆಲವು ಪ್ರಯಾಣಿಕರು ರೈಲ್ವೇ ಟಾಯ್ಲೆಟ್ಟುಗಳನ್ನು ಸ್ವಚ್ಛವಾಗಿಡುವುದಿಲ್ಲ? ಯಾಕೆ ಕೆಲವು ಜನರ ಮನೆಗಳಲ್ಲಿನ ಅಡುಗೆಮನೆಯಿಂದ ದುವರ್ಾಸನೆ ಬರುತ್ತದೆ? ಏಕೆ ಎನ್ಕ್ವೈರಿ ಕ್ಲಕರ್್ ಕಿರುನಗೆಯೊಂದಿಗೆ ಉತ್ತರಿಸುವುದಿಲ್ಲ? ಏಕೆ ಕೆಲವು ಉದ್ಯೋಗಿಗಳು ಹೆಚ್ಚು ಹೊತ್ತು ಕ್ಯಾಂಟೀನಿನಲ್ಲಿ ಕಳೆದು ಅವಸರದಲ್ಲಿ ಮನೆಗೆ ಹೋಗಿಬಿಡುತ್ತಾರೆ? ಏಕೆ ಈ ಪ್ರಪಂಚದಲ್ಲಿ ಮನುಷ್ಯರೆಲ್ಲರೂ ಮೆದುಳುಗಳನ್ನು ಷಾಪರ್್ಆಗಿ, ಫಲವಂತವಾಗಿ ಇಟ್ಟುಕೊಳ್ಳುವುದಿಲ್ಲ? ಏಕೆ ಸೋಮಾರಿತನದಿಂದ ಒದ್ದಾಡುತ್ತಾ, ಆ ಅಭ್ಯಾಸದಿಂದ ಹೊರಗೇಕೆ ಬರುವುದಿಲ್ಲ? ಏಕೆ ಕೆಲವರು ಕೆಲಸ ಮಾಡದೇ ಫಲಿತಾಂಶ ಸಿಕ್ಕಿ ಬಿಡಬೇಕೆಂದು ಆಶಿಸುತ್ತಾರೆ?
ಮೆಂಟಲ್ ಫಿಟ್ನೆಸ್ ಎನ್ನುವ ಪುಸ್ತಕದಲ್ಲಿ ಟಾಂ ವ್ಯೂಜೆಕ್ ಎನ್ನುವ ಲೇಖಕ, ಮೇಲಿನ ಪ್ರಶ್ನೆಗಳಿಗೆ ಎರಡು ಕಾರಣಗಳನ್ನು ನೀಡುತ್ತಾನೆ. ಒಂದು: ಅವರು ಜೀವನ ವಿಧಾನ ಇಂತಹ ಚಾಲೆಂಜುಗಳನ್ನು ಕೋರಿಕೊಳ್ಳದೇ ಹೋಗುವುದು. ಎರಡು: ಅವರ ಆಲೋಚನಾ ವಿಧಾನದಲ್ಲಿ ಆನಂದಿಸುವುದು ಎಂದರೆ, ಜೀವನವನ್ನು ಹಗುರವಾಗಿ ಕಳೆದುಬಿಡುವುದು.
ಒಬ್ಬ ಉದ್ಯೋಗಿ ಇದ್ದಾನೆಂದುಕೊಳ್ಳೋಣ. ಕೆಲಸ ಮಾಡದ ಸಮಯದಲ್ಲಿ ಅಡುಗೆಮನೆಯಲ್ಲಿ ಹೆಂಡತಿಯೊಂದಿಗೆ ಹರಟೆ ಹೊಡೆಯುತ್ತಾ ಸಹಾಯ ಮಾಡುತ್ತಾನೆ. ಅಡುಗೆಯಲ್ಲಿ, ರೊಮಾನ್ಸ್ನಲ್ಲಿ ಹೊಸ ಪ್ರಯೋಗಗಳನ್ನು ಮಾಡೋಣವೆಂದು ಪ್ರೋತ್ಸಾಹಿಸುತ್ತಾನೆ. ಮಕ್ಕಳಿಗೆ ಪಾಠಗಳನ್ನು ಹೇಳಿಕೊಡುತ್ತಾನೆ. ಅದು ಟೀಚರುಗಳ ಜವಾಬ್ದಾರಿ ಎಂದು ವಾದಿಸುವುದಿಲ್ಲ. ಮಕ್ಕಳ ಬಟ್ಟೆಗಳನ್ನು ಒಗೆದು, ಇಸ್ತ್ರೀ ಮಾಡುತ್ತಾನೆ. ಅದು ಹೆಂಡತಿಯ ಹೊಣೆಗಾರಿಕೆ ಎಂದುಕೊಳ್ಳುವುದಿಲ್ಲ. ಹತ್ತನ್ನು ಹನ್ನೆರಡರಿಂದ ಭಾಗಿಸಿದರೆ ಎಷ್ಟು ಬರುತ್ತದೆಂದು ಕೆಲಸವಿಲ್ಲದ ಸಮಯದಲ್ಲಿ ವಿನೋದದಿಂದ ಬ್ರೆಯಿನ್ ವಕರ್್ ಮಾಡುತ್ತಾನೆ. ಪುಸ್ತಕಗಳನ್ನು ಓದುತ್ತಾನೆ. ಜನರಲ್ ನಾಲೆಡ್ಜ್ ಹೆಚ್ಚಿಸಿಕೊಳ್ಳುತ್ತಾನೆ. ಗೇಮ್ಸ್ ಆಡುತ್ತಾನೆ.
ಮತ್ತೊಬ್ಬ ಬ್ಯಾಚುಲರ್ ಕಂಪ್ಯೂಟರ್ ಇಂಜಿನಿಯರ್ ಇದ್ದಾನೆ. ತಿಂಗಳಿಗೆ ಎರಡು ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಾನೆ. ಮೇಧಾವಿ. ಆಫೀಸಿನಲ್ಲಿ ಅವನ ಬುದ್ಧಿವಂತಿಕೆಗೆ ಎಲ್ಲರೂ ಮಂತ್ರಮುಗ್ಧರಾಗುತ್ತಾರೆ. ಆದರೆ ಹಣವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದು. ತಿಂಗಳ ಕೊನೆಯಲ್ಲಿ ಬಹಳ ಒದ್ದಾಡುತ್ತಾನೆ. ಅಡುಗೆಯಾಕೆ, ಕೆಲಸದಾಕೆ ಒಂದು ದಿನ ಬರದಿದ್ದರೆ ಅವನು ಬದುಕಲಾರ. ಬಟ್ಟೆಗಳನ್ನು ಒಗೆಯುವುದು ಕೈಯಲ್ಲಾಗದು. ಇಸ್ತ್ರೀ ಮಾಡಿಕೊಳ್ಳಲಾರ. ಟೈಮ್ ಮ್ಯಾನೇಜ್ಮೆಂಟ್ ಗೊತ್ತೇ ಇಲ್ಲ. ವಿನೋದದಿಂದ ಸಂಭಾಷಣೆ ನಡೆಸಲಾರ.
ಈ ವ್ಯಕ್ತಿ ಮೊದಲ ವ್ಯಕ್ತಿಯಂತೆ ಏಕೆ ಬದಲಾಗುವುದಿಲ್ಲ? ಉದಾಸೀನತೆ.
ಮಕ್ಕಳನ್ನು ಗಮನಿಸಿರಿ. ಒಬ್ಬ ಹುಡುಗನ ಕಣ್ಣುಗಳಲ್ಲಿನ ಹೊಳಪಿಗೆ ಚಿಕ್ಕ ಮರದ ತುಂಡು, ಮೂರು ಬಿದಿರಿನ ಕಡ್ಡಿಗಳು, ಒಂದು ರಬ್ಬರು ಚೆಂಡು ಸಾಕು. ಅಲ್ಲಿಯವರೆಗೇ ಏಕೆ? ಅಪ್ಪನೊಂದಿಗೆ ಷಾಪಿಂಗ್, ಅಮ್ಮನ ಕೈಯಲ್ಲಿನ ಚಾಕ್ಲೆಟ್ ಸಾಕು..! ಹಾಗೆ ಕಣ್ಣುಗಳು ಮಿಂಚುವ ಅವಕಾಶ ಅವನಿಗೆ ದಿನಕ್ಕೆ ಹತ್ತುಸಲ ಬರುತ್ತದೆ. ರಾಜಕೀಯ ನಾಯಕನ ಕಣ್ಣುಗಳಲ್ಲಿ ಅಂತಹ ಮಿಂಚು ಬರುವುದು ಕಷ್ಟ. ಇಪ್ಪತ್ತನಾಲ್ಕು ಗಂಟೆಗಳ ಕಾಲದಲ್ಲಿ, ಒಬ್ಬ ವಾಣಿಜ್ಯೋದ್ಯಮಿಯ ಕಣ್ಣುಗಳಲ್ಲಿ ಕಾಣಿಸುವ ಮಿಂಚಿಗಿಂತ, ಅವನ ಬಿ.ಪಿ ಹೆಚ್ಚು ಸಲ ಏರುತ್ತಿದೆಯೆಂದರೆ ನೀವು ಒಪ್ಪುತ್ತೀರಿ ಅಲ್ಲವೇ?
ನೀವು ಆಯಾಸಗೊಂಡು, ಬೋರ್ ಆಗುತ್ತಿದ್ದಾಗ, ಇಲ್ಲವೇ ಯಾವುದೋ ಅಜ್ಞಾತ ಆಶಾಭಂಗ ಉಂಟಾಗುತ್ತಿದೆ ಎನ್ನಿಸಿದಾಗ ಹೊರಗೆ ಹೋಗಿ. ಇಪ್ಪತ್ತು ನಿಮಿಷಗಳ ಕಾಲ ರಸ್ತೆಯ ಮೇಲಿನ ವ್ಯಕ್ತಿಗಳನ್ನು ನೋಡುತ್ತಾ ನಡೆಯಿರಿ. ಜಸ್ಟ್ ಅವರನ್ನು ಗಮನಿಸಿರಿ. ನಗುವವರು...ಸೀರಿಯಸ್ ಆಗಿ ಇರುವವರು... ಪ್ರಳಯ ಅವರ ಬದುಕಿಗೇ ನುಗ್ಗಿ ಬಂದಂತೆ ಕಂಗಾಲಾಗಿರುವವರು... ವಿವಿಧ ವ್ಯಕ್ತಿಗಳನ್ನು ನೀವು ನೋಡಬಹುದು. ಕ್ರಮೇಣ ನಿಮ್ಮ ಸುತ್ತಲೂ ಇರುವ ಕತ್ತಲೆಯ ಪರದೆ ತೊಲಗಿಹೋಗುತ್ತಿದ್ದ ಭಾವನೆ ಉಂಟಾಗುತ್ತದೆ. ದ್ವಿಗುಣವಾದ ಉತ್ಸಾಹದೊಂದಿಗೆ ಮನೆಗೆ ಬರುತ್ತೀರಿ.
(ಮುಂದುವರಿಯುವುದು)
-ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ: ಯತಿರಾಜ್ ವೀರಾಂಬುಧಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


