ಬೈಟುಕಾಫಿ

ಆಹಾರ ಎಷ್ಟು ತೀವ್ರತೆ ತರುವುದು?

ಆಹಾರ ಎಷ್ಟು ತೀವ್ರತೆ ತರುವುದು?
Published On :

ತಲೆನೋವು ಆನುವಂಶೀಯವಾಗಿ ಬಂದಿರಲಿ ಅಥವಾ ಬೇರಾವುದೇ ಕಾರಣವಿರಲಿ. ಆಹಾರಕ್ಕೂ ಅದಕ್ಕೂ ಸಂಬಂಧವಿದೆ ಎನ್ನುವುದು ಸ್ಪಷ್ಟ. ಇದನ್ನು ನಿರೂಪಿಸುವ ಇನ್ನೊಂದು ಸಿದ್ಧಾಂತ ಏನೆಂದರೆ, ಯಾವುದೇ ರೀತಿಯ ತಲೆನೋವು ರಕ್ತನಾಳ, ರಕ್ತಸಂಚಾರದೊಂದಿಗೆ ಸಂಬಂಧ ಹೊಂದಿದೆ. ಅವುಗಳಲ್ಲಿನ ಏರಿಳಿತವೂ ತಲೆನೋವು ತರುತ್ತದೆ. ರಕ್ತನಾಳ ಹಿಗ್ಗಿಸುವ, ಕುಗ್ಗಿಸುವ, ಆ ಮೂಲಕ ರಕ್ತದ ಹರಿವು ನಿಯಂತ್ರಿಸುವ ಶಕ್ತಿ ಆಹಾರಕ್ಕಿದೆ ಎನ್ನುವುದು ವೇದ್ಯ. ಈ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಆಲೋಚಿಸಿದರೂ ಆಹಾರ ಮತ್ತು ತಲೆನೋವಿಗೆ ಪರಸ್ಪರ ಸಂಬಂಧವಿದೆ ಎನ್ನುವುದು ಅರ್ಥವಾಗುತ್ತದೆ. ವಿದೇಶಿ ರಾಸಾಯನಿಕಗಳು ಶರೀರದೊಳಕ್ಕೆ ಪ್ರವೇಶಿಸಿದಾಗ ರೋಗನಿರೋಧಕ ವ್ಯವಸ್ಥೆ ಜಾಗೃತಗೊಂಡು ಅವುಗಳನ್ನು ಪ್ರತಿರೋಧಿಸಲು ಮುಂದಾಗುತ್ತದೆ ಎನ್ನುವುದು ಗೊತ್ತೇ ಇದೆ. ಈ ಪ್ರಕ್ರಿಯೆಯಲ್ಲಿಯೂ ರಕ್ತನಾಳಗಳ ಮೇಲೆ ಒತ್ತಡ ಉಂಟಾಗಿ ತಲೆನೋವು ಆರಂಭವಾಗಬಹುದು. ಆದರೆ ಇಂಥದ್ದೇ ರಾಸಾಯನಿಕದಿಂದಾಗಿ ತಲೆನೋವು ಬಂದಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ ರಾಸಾಯನಿಕ ಸಂವೇದನೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
ಇನ್ನೊಂದು ವಾದ ಏನೆಂದರೆ ಪ್ರತಿ ಆಹಾರವೂ ನೋವು ಮತ್ತು ಉರಿಯೂತದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇರುತ್ತದೆ. ಈ ಪ್ರಕ್ರಿಯೆ ಸಂಕೀರ್ಣವಾದದ್ದು. ತಲೆನೋವು ರಕ್ತನಾಳ ಮತ್ತು ಅವುಗಳ ಉರಿಯೂತಕ್ಕೆ ಸಂಬಂಧಿಸಿರುವುದರಿಂದ ಅಂತಹ ಆಹಾರಗಳನ್ನು ಅತಿಯಾಗಿ ಸೇವಿಸಿದಾಗ ತಲೆನೋವು ತೀವ್ರಗೊಳ್ಳುತ್ತದೆ.
ಮುಂದಿನ ಪ್ರಶ್ನೆ- ತಲೆನೋವಿನ ಮೇಲೆ ಆಹಾರದ ಪ್ರಭಾವ ಎಷ್ಟು? ಕೆಲವು ತಜ್ಞರು ಶೇ. 5ರಿಂದ 20 ಎಂದು ಅಭಿಪ್ರಾಯಪಟ್ಟಿದ್ದರೆ, ಬಹುತೇಕ ತಜ್ಞರು ಶೇ. 80ರಷ್ಟು ಎನ್ನುವ ನಿಲುವಿಗೆ ಬಂದಿದ್ದಾರೆ. 'ಮೈಗ್ರೇನ್‌ನ ಎಲ್ಲ ಸ್ವರೂಪಗಳಿಗೂ ಆಹಾರವೇ ಮೂಲ ಎನ್ನುವುದು ನನಗೆ ಮನವರಿಕೆಯಾಗಿದೆ' ಎಂದು ಅಮೆರಿಕನ್ ಕಾಲೇಜ್ ಆಫ್ ಅಲರ್ಜಿಯ ಫುಡ್ ಅಲರ್ಜಿ ಸಮಿತಿ ಮುಖ್ಯಸ್ಥರಾಗಿದ್ದ ಡಾ. ಜೇಮ್ಸ್ ಬ್ರೆನ್‌ಮನ್ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಹೇಳಿರುವಂತೆ ತಲೆನೋವಿಗೆ ಕಾರಣವಾಗುವ ಆಹಾರಗಳನ್ನು ನಿಖರವಾಗಿ ಪಟ್ಟಿ ಮಾಡುವುದು ಕಷ್ಟ. ಒಬ್ಬರಿಗೆ ದಾಲ್ಚಿನ್ನಿಯನ್ನು ಸೇವಿಸಿದಾಗ ತಲೆನೋವು ಆರಂಭವಾದರೆ, ಇನ್ನೊಬ್ಬರಿಗೆ ಹಾಲು ಕುಡಿದ ದಿನ ತಲೆನೋವು ಕಾಣಿಸಿಕೊಳ್ಳಬಹುದು. ಮತ್ತೊಬ್ಬರಿಗೆ ಕೆಫೀನ್ ಸೇವನೆಯಿಂದ ತಲೆನೋವು ಬರಬಹುದು. ಆದರೂ ಸಾಮಾನ್ಯವಾಗಿ ಎಲ್ಲರಿಗೂ ಅನ್ವಯ ಆಗಬಹುದಾದ ಕೆಲವು ಆಹಾರಗಳ ಬಗ್ಗೆ ಚರ್ಚಿಸೋಣ.
 
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
(ಮುಂದುವರಿಯುವುದು)
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.