ಬೈಟುಕಾಫಿ

ಮಕ್ಕಳಿಗೆ ಮೊಬೈಲ್ ಒಳ್ಳೆಯದಲ್ಲ

Published On :

ಮೊಬೈಲ್ ಮಕ್ಕಳು ಉಪಯೋಗಿಸುವುದರಿಂದ ಕಣ್ಣುಗಳ ದೋಷ ಉಂಟಾಗುತ್ತದೆ. ಅಲ್ಲದೇ ದೀರ್ಘಕಾಲ ಗೇಮ್ಸ್, ಎಸ್ಸೆಮ್ಮೆಸ್‌ಗಳಲ್ಲಿ ತೊಡಗಿದ್ದರೆ ಮೈಗ್ರೇನ್ ತಲೆನೋವು ಬರುವ ಸಾಧ್ಯತೆ ಇದೆ.  ಹುಡುಗ-ಹುಡುಗಿಯರ ಮಧ್ಯೆ ಪ್ರೇಮ ಪ್ರಕರಣಗಳು ನಡೆಯಲು  ಈ ಮೊಬೈಲ್ ಮಾಧ್ಯಮವಾಗುತ್ತಿದೆ. ಕಾಲೇಜು ಮಕ್ಕಳನ್ನು ಎಷ್ಟೇ ಎಚ್ಚರಿಕೆಯಿಂದ ಗಮನಿಸುತ್ತಿದ್ದರೂ ಅಚಾತುರ್ಯ ನಡೆದುಹೋಗುತ್ತದೆ. ಹಾಗಾಗಿ ಈ ವಯಸ್ಸಿಗೆ ಕೂಡ ಮೊಬೈಲ್ ಒಳ್ಳೆಯದಲ್ಲ. ಚಿಕ್ಕ ಮಕ್ಕಳಿಗೆ ಪೋಷಕರೆ ಮೊಬೈಲ್ ಕೊಟ್ಟು ಅವರ ಆಟೋಟಗಳನ್ನು ನೋಡಿ ಖುಷಿ ಪಡುವುದು ಸರಿಯಲ್ಲ.ಟಿ
=ಶ್ರೀವತ್ಸ ಶ್ರೀಹರ್ಷ, ಬೆಂಗಳೂರು


ನೈತಿಕ ಅಧಃಪತನದ ಕಾಲ
ಮೊಬೈಲ್ ಸರ್ವೋಪಯೋಗಿ ಆಗಿದೆ. 10 ವರ್ಷದ ಮಕ್ಕಳೂ ಇದನ್ನು ಸುಲಲಿತವಾಗಿ ಬಳಸುತ್ತಾರೆ. ಆದರೆ ವಯಸ್ಕರಲ್ಲದ ಮಕ್ಕಳು ಮೊಬೈಲ್‌ನಲ್ಲಿನ ಎಸ್ಸೆಮ್ಮೆಸ್‌ಗಳನ್ನು ಬಳಸುವುದು ಹಾಗೂ ಇಂಟರನೆಟ್‌ಗಳಲ್ಲಿ ಹರಿದಾಡುವ ಅಶ್ಲೀಲ ಚಿತ್ರಗಳ ನೋಡುವುದು ಅವರ ಮನಸ್ಸನ್ನು ಕೆಡಿಸುತ್ತದೆ. ಪ್ರೀತಿ-ಪ್ರೇಮಗಳಿಗೆ ಈ ಮೊಬೈಲ್ ಸಾಧನವಾಗುತ್ತಿದೆ. ಹೀಗಾಗಿ ಓದುವ ವಯಸ್ಸಿನ ಮಕ್ಕಳು ಓದಿನಲ್ಲಿ ಆಸ್ಥೆ ಕಳೆದುಕೊಂಡು ನೈತಿಕ ಅಧಃಪತನ ಹೊಂದುತ್ತಾರೆ. ಮನೆಯಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ಇರುವಾಗ ಈ ಮಕ್ಕಳು ಅದನ್ನು ಅಪೇಕ್ಷಿಸುತ್ತಾರೆ. ಕಳವು ಮಾಡಿಯಾದರೂ ತಮ್ಮ ಚಟ ತೀರಿಸಿಕೊಳ್ಳುವ ತೀವ್ರತೆ ಇವರಲ್ಲಿ ಉಂಟಾಗುತ್ತದೆ. ಆದಕಾರಣ ಮಕ್ಕಳಿಗೆ ಮೊಬೈಲ್ ಕಡೆಗೆ ಒಲವು ಬಾರದಂತೆ ಎಚ್ಚರವಹಿಸುವುದು ಒಳ್ಳೆಯದು.
= ಸಂಗಪ್ಪ ಗಾಣಿಗೇರ, ಹುನಗುಂದ


ಮಕ್ಕಳಲ್ಲಿ ಸೃಜನಶೀಲತೆಯ ಕೊರತೆ
ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಅವರ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗುತ್ತದೆ. ಅದರಲ್ಲಿನ ಹಾಡು, ಮೆಸೇಜ್‌ಗಳೆಂದು ವಿದ್ಯಾಭ್ಯಾಸದ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಮೈದಾನದಲ್ಲಿ ಆಟ ಆಡುವುದನ್ನೇ ಮರೆತಿದ್ದಾರೆ. ದೈಹಿಕ ಬೆಳವಣಿಗೆ ಅವಕಾಶವೇ ಇಲ್ಲದಂತಾಗಿದೆ. ಸಾಂಪ್ರದಾಯಿಕ ಹಾಗೂ ಗ್ರಾಮೀಣ ಆಟಗಳು ಈಗಿನ ಮೊಬೈಲ್ ಸಂಸ್ಕೃತಿಯ ಮಕ್ಕಳಿಗೆ ಗೊತ್ತೇ ಇಲ್ಲ. ಈ ಮಕ್ಕಳಲ್ಲಿ ಸೃಜನಶೀಲತೆ, ಮನುಷ್ಯತ್ವಗಳಂತಹ ಮೌಲ್ಯಗಳು ಗೊತ್ತಾಗುವುದೂ ಇಲ್ಲ. ಪೋಷಕರಿಗೆ ತಿಳಿ ಹೇಳುವ ವ್ಯವಧಾನ ಇರುವುದೂ ಇಲ್ಲ. ಎಲ್ಲಾ ಯಾಂತ್ರಿಕ ಬದುಕಾಗಿದೆ. ಮಕ್ಕಳಲ್ಲಿ ಇರಬೇಕಾದ ಮುಗ್ಧತೆ ಇಲ್ಲವಾಗುತ್ತಿದೆ. ಸ್ವಾವಲಂಬಿಗಳಾಗಿ ಬದುಕು ನಡೆಸುವವರೆಗೂ ಮೊಬೈಲ್ ಬೇಡ.ಟಿ
-ಅಂಬಮ್ಮ ಪ್ರತಾಪ್‌ಸಿಂಗ್, ಮಾನ್ವಿ


'ಜಗುಲಿ'ಯಲ್ಲಿ ಈ ಸಲದ ವಿಷಯ 'ಮಕ್ಕಳಿಗೆ ಯಾವ ವಯಸ್ಸಿನಿಂದ ಮೊಬೈಲ್ ಕೊಡಿಸುವುದು ಸೂಕ್ತ.' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.