ಪ್ರಾಣಿ-ಪಕ್ಷಿಗಳಲ್ಲಿ ನಿದ್ರೆ
ಭೂಮಂಡಲದಲ್ಲಿ ನಿದ್ರೆ ಮಾಡದಿರುವ ಪ್ರಾಣಿ-ಪಕ್ಷಿಗಳು ದೊರೆಯುವುದಿಲ್ಲ. ಅಂತಹ ಕೆಲವು ಕುತೂಹಲಕಾರಿ ಉದಾಹರಣೆಗಳು ಇಲ್ಲಿವೆ.
ಪಕ್ಷಿಲೋಕದ ಅತ್ಯಂತ ಸಣ್ಣ ಹಕ್ಕಿ ಎಂಬ ಖ್ಯಾತಿಗೆ ಹೆಸರಾದ ಹಮಿಂಗ್ ಬರ್ಡ್ ನಿದ್ರೆಯ ಮಟ್ಟಿಗೆ ಹೇಳುವುದಾದರೆ ಕುಂಭಕರ್ಣನಂತೆ! ನಿದ್ರೆಯಲ್ಲಿದ್ದಾಗ ಹೆಚ್ಚೂ ಕಡಿಮೆ ಸತ್ತಂತೆಯೇ ಇರುವ ಈ ಹಕ್ಕಿಯನ್ನು ಕೈಹಾಕಿ ಸುಲಭವಾಗಿ ಎತ್ತಿಕೊಂಡು ಬರಬಹುದು!
ಉತ್ತರ ಅಮೆರಿಕದಲ್ಲಿ ವಾಸಿಸುವ ಕೆಲವು ಜಾತಿಯ ಅಳಿಲುಗಳು ವರ್ಷದಲ್ಲಿ ಒಂಬತ್ತು ತಿಂಗಳನ್ನು ನಿದ್ರೆಯಲ್ಲಿಯೇ ಕಳೆಯುತ್ತವೆ!
ದಕ್ಷಿಣ ಅಮೆರಿಕದ ಗೊಂಡಾರಣ್ಯಗಳಲ್ಲಿ ವಾಸಿಸುವ ಕರಡಿಯನ್ನು ಹೋಲುವ ಪ್ರಾಣಿ 'ಸೋಮಾರಿ ಸ್ಲಾಥ್'. ಇದರ ಕಥೆಯೇ ಬೇರೆ. ಈ ಪ್ರಾಣಿಯು ಸದಾ ಗಿಡದ ಮೇಲೆಯೇ ವಾಸಿಸುತ್ತದೆ. ದುಪ್ಪಟಿಯಂತೆ ದಪ್ಪನಾದ ಚರ್ಮ ಹೊಂದಿರುವ ಇದು ಚಿಗುರೆಲೆ, ಹೂವು, ಹಣ್ಣು ತಿಂದು ಬದುಕುತ್ತದೆ. ವಿಚಿತ್ರವೆಂದರೆ ಇದು ಮರದ ಟೊಂಗೆಯೊಂದರ ಆಶ್ರಯ ಪಡೆದು ಮಲಗಿತೆಂದರೆ ಮುಗಿಯಿತು, ನಿದ್ರೆ ಮುಗಿಯಲು 15 ಗಂಟೆಗಳೇ ಬೇಕು! ಇದು ನಿದ್ರೆಯಲ್ಲಿರುವಾಗ ಬಾಹ್ಯ ಪರಿವೆಯೇ ಇರುವುದಿಲ್ಲ. ನಿದ್ರೆ ಮಾಡುತ್ತಿರುವಾಗ ಚಿಟ್ಟೆಗಳು ಇದರ ಮೂಗಿನ ಹೊಳ್ಳೆಗಳಲ್ಲಿ ಮೊಟ್ಟೆ ಇಟ್ಟು, ಗೂಡು ಕಟ್ಟಿ, ಚಿಟ್ಟೆಗಳಾಗಿ ಹಾರಿಹೋಗುತ್ತವೆ. ಚರ್ಮದ ಮೇಲೆ ಪಾಚಿಗಳು ಬೆಳೆದಿರುತ್ತವೆ. ಆದರೆ, ಅದು ಮಾತ್ರ ನಿದ್ರೆಯಿಂದ ಏಳುವುದಿಲ್ಲ.
ಡಾಲ್ಫಿನ್‌ಗಳ ನಿದ್ರೆ ಇನ್ನೂ ವಿಚಿತ್ರ. ಅವುಗಳ ಮೆದುಳು ಎರಡು ಪ್ರತ್ಯೇಕ ಭಾಗಗಳಾಗಿ ಕಾರ್ಯ ನಿರ್ವಹಿಸುತ್ತದೆ. ಬಲ ಮೆದುಳು ನಿದ್ರೆಯಲ್ಲಿದ್ದಾಗ ಎಡ ಮೆದುಳು ಎಚ್ಚೆತ್ತಿರುತ್ತದೆ, ಎಡ ಮೆದುಳು ಮಲಗಿದಾಗ ಬಲ ಮೆದುಳು ಕಾರ್ಯ ನಿರ್ವಹಿಸುತ್ತದೆ. ಹೀಗೆ ಪರಸ್ಪರ ಸಹಕರಿಸಿ ಡಾಲ್ಫಿನ್‌ನ ಉಸಿರಾಟ ನಿರಂತರವಾಗಿರುವಂತೆ ನೋಡಿಕೊಳ್ಳುತ್ತವೆ. ಕಾರಣ, ಡಾಲ್ಫಿನ್ ಸಮುದ್ರದ ಮೇಲ್ಭಾಗಕ್ಕೆ ಪ್ರತಿ 90 ಸೆಕೆಂಡಿಗೊಮ್ಮೆ ಬಂದೇ ಉಸಿರಾಡಬೇಕು. ಆ ಕಾರಣಕ್ಕಾಗಿ ಮೆದುಳು ಸದಾ ಎಚ್ಚೆತ್ತಿರಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

