ದೇಶದ ಹಿತಾಸಕ್ತಿಗಾಗಿ ದುಡಿಯಲಿ
ಯಾರೇ ಪ್ರದಾನಿಯಾದರೂ ಉತ್ತಮ ಆಡಳಿತಗಾರನಾಗಿರಬೇಕು. ಪ್ರಚಲಿತ ಸಮಸ್ಯೆಗಳಾದ ನೀರು, ವಿದ್ಯುತ್ ಮುಂತಾದ ಕೊರತೆಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂಥವರಾಗಿರಬೇಕು. ರೈತನ ಹಿತಾಸಕ್ತಿ ಕಾಯುವವನಾಗಿರಬೇಕು. ಅನಾವಶ್ಯಕ ಯೋಜನೆಗಳಿಂದ ದೇಶದ ಸಂಪತ್ತನ್ನು ಲೂಟಿ ಮಾಡಬಾರದು. ಮುಂದುವರಿದ ದೇಶವನ್ನಾಗಿಸಲು ದೃಡ ಸಂಕಲ್ಪ ಕೈಗೊಳ್ಳ ಬೇಕು.ಮೊದಲು ಭ್ರಷ್ಟಾಚಾರ ರಹಿತ ದೇಶವನ್ನಾಗಿಸಬೇಕು. ಗಡಿಯಾಚಿನ ಬೆದರಿಕೆಗಳನ್ನು ನಿಯಂತ್ರಿಸುವಲಿ, ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಯಾವ ಮುಲಾಜೂ ಇಟ್ಟುಕೊಳ್ಳದೇ ದಿಟ್ಟ ಹೆಜ್ಜೆ ಇಡುವವ ಬೇಕು.
= ಅನನ್ಯ. ಎಸ್. ಆರ್, ಹಾಲಗೋಡು, ಕಮ್ಮರಡಿ
ದೇಶ ಚಿಂತಕನಾಗಿರಬೇಕು
ನಮ್ಮ ಮುಂದಿನ ಪ್ರಧಾನಿ ದೇಶದ ಬಗೆಗೆ ಪ್ರಾಮಾಣಿಕವಾಗಿ ಚಿಂತಿಸುವವನಾಗಿರಬೇಕು,. ದ್ವೇಷ ರಾಜಕಾರಣ ಮಾಡದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶ ಮುನ್ನಡೆಸುವವರಾಗಿರಬೇಕು. ದೇಶದ ಸಮಸ್ತ ಪ್ರಜೆಗಳನ್ನು ಜಾತಿ-ಧರ್ಮದ ಭೇದವಿಲ್ಲದೇ ಸಮಾನವಾಗಿ ಕಾಣಬೇಕು. ದೇಶದ ಆರ್ಥಿಕ ಸ್ಥಿತಿಗತಿ ಉತ್ತಮ ಪಡಿಸುವತ್ತ ಸಾಗಿ ಸ್ವಾವಲಂಬನೆಯನ್ನು ವೃದ್ಧಿಸಬೇಕು. ನೆರೆಯ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಿ ವಿದೇಶಾಂಗ ನೀತಿ ಬಲಪಡಿಸಬೇಕು. ವಿಜ್ಞಾನ, ತಂತ್ರಜ್ಞಾನದ ಉನ್ನತಿಯ ಜತೆಗೆ ದೇಶ ರಕ್ಷಣೆಗೆ ಬದ್ಧನಾಗಿರಬೇಕು. ತಾನಾಯಿತು ತನ್ನ ಪಕ್ಷದ ನಿರ್ಧಾರವಾಯಿತೆಂದು ಯೋಚಿಸದೇ ಇತರ ಪಕ್ಷಗಳ ಸಲಹೆ ಸೂಚನೆಗಳನ್ನೂ ಗಣನೆಗೆ ತೆಗೆದುಕೊಂಡು ಅದನ್ನು ಕಾರ್ಯಗತಗೊಳಿಸುವ ಪ್ರಧಾನಿಬೇಕು.
= ಹೊಳಲು. ಎಂ.ಸಿ. ಪ್ರಸನ್ನ, ಬಾಗಲಕೋಟೆ
ಸಮರ್ಥ ಪ್ರಧಾನಿ ಬೇಕು
ಭವ್ಯ ಭಾರತವನ್ನು ದಿವ್ಯ ದೃಷ್ಟಿಯಿಂದ ಮುನ್ನಡೆಸಿಕೊಂಡು ಹೋಗುವ ಶೂರ ಸಾರಥಿ ಬೇಕಾಗಿದ್ದಾರೆ. ನಮ್ಮ ದೇಶದಲ್ಲಿ ಈಗಾಗಲೆ ಸಾವಿರಾರು ಸಮಸ್ಯೆಗಳಿವೆ ಗಡಿ ತಂಟೆ, ಭ್ರಷ್ಟಾಚಾರ, ಬಡತನ, ನಿರುದ್ಯೋಗ, ಹೆಣ್ಣು ಭ್ರೂಣಹತ್ಯೆ, ಅನಕ್ಷರತೆ ಮೂಢನಂಬಿಕೆ ಹೀಗೆ ಹಲವಾರು. ಆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಜಗತ್ತಿನ ಎಲ್ಲ ದೇಶಗಳ ದೃಷ್ಟಿಯೂ ಭಾರತದತ್ತ ಬೀರುವಂತೆ ಮಾಡುವ ಪ್ರಧಾನಿಯ ಅವಶ್ಯಕತೆ ಈಗ ನಮಗಿದೆ. ಭಾರತವನ್ನು ಮುನ್ನಡಿಸುವ ಸಮರ್ಥನ ಎಲ್ಲ ಲಕ್ಷಣಗಳು ಪ್ರಧಾನಿಗಿರಬೇಕು. ಇಂತಹವರು ಪ್ರಧಾನಿಯಾದರೆ ದಿಲ್ಲಿಗೆ ಮಾತ್ರ ಸೀಮಿತವಾಗಿರದ ಪ್ರಧಾನಿ ದಿಲ್ಲಿಯಿಂದ ಹಳ್ಳಿಯವರೆಗೆ ಎಲ್ಲರಿಗೂ ನೆರವಾಗುತ್ತಾರೆ.
= ರಾಜು. ಎಸ್. ಶೇಗುಣಸಿ.
ಮುಗಳಖೋಡ,
'ಜಗುಲಿ'ಯಲ್ಲಿ ಈ ಸಲದ ವಿಷಯ 'ಮುಂದಿನ ಪ್ರಧಾನಿ ಹೇಗಿರಬೇಕು?' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

