ಬೈಟುಕಾಫಿ

ಗುಡ್ ಮೂಡ್ಗೆ ಬೇಕು ಗುಡ್ ಆಹಾರ!

ಗುಡ್ ಮೂಡ್ಗೆ ಬೇಕು ಗುಡ್ ಆಹಾರ!
Published On :

ನೀವೂ ಒಮ್ಮೊಮ್ಮೆ ಹಾಗೆ ವರ್ತಿಸಿರಲಿಕ್ಕೆ ಸಾಕು. ಈ ಕ್ಷಣ ಸಂತೋಷದಿಂದ ಇದ್ದರೆ, ಮರುನಿಮಿಷವೇ ಸಿಟ್ಟು. ಕಾರಣವೇ ಇಲ್ಲದೆ ಯಾರ ಮೇಲೋ ರೇಗಾಟ, ಮತ್ತಾರ ಮೇಲೋ ಕಿರುಚಾಟ. ಸ್ವಲ್ಪ ಶಾಂತರಾದ ಬಳಿಕ ನಿಮಗೇ ಅನ್ನಿಸಿರುತ್ತದೆ, 'ನಾನೇಕೆ ಹೀಗೆ ವರ್ತಿಸಿದೆ?' ಇಂಥ ವರ್ತನೆ ಒಮ್ಮೊಮ್ಮೆ ಸಂಬಂಧಗಳಲ್ಲಿ ಬಿರುಕು ಮೂಡಲೂ ಕಾರಣ ಆಗಬಲ್ಲದು. ಇದ್ದಕ್ಕಿದ್ದಂತೆ ಮೂಡ್ನಲ್ಲಿ ವ್ಯತ್ಯಾಸ ಆಗುವುದಕ್ಕೂ, ನೀವು ಸೇವಿಸುವ ಆಹಾರಕ್ಕೂ ನೇರ ಸಂಬಂಧ ಇದೆ ಎನ್ನುವುದನ್ನು ವಿಜ್ಞಾನ ಲೋಕ ಕಂಡುಕೊಂಡಿದೆ. ಮನಸ್ಥಿತಿಯನ್ನು ನಿಯಂತ್ರಿಸುವುದು ಮೆದುಳು, ಮೆದುಳಿನ ಆರೋಗ್ಯ ಚೆನ್ನಾಗಿರಬೇಕು ಅಂತಾ ದರೆ ಪೌಷ್ಟಿಕ ಆಹಾರ ಸೇವಿಸಬೇಕು. ಸಿಂಪಲ್ ಸಿದ್ಧಾಂತ.
ಆಹಾರ ಸೇವನೆ ಮೂಲಕ 'ಮೂಡ್' ಹೊಂದಿಸಿಕೊಳ್ಳಲು ಸಾಧ್ಯವೇ? ಆಹಾರದ ಏರುಪೇರಿನಿಂದ ಮನಸ್ಥಿತಿ ಬದಲಾಗುತ್ತದೆಯೇ? ದೈನಂದಿನ ಚಟುವಟಿಕೆಗೆ ತೊಂದರೆ ಆಗಬಲ್ಲುದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಆಹಾರ ಸೇವನೆಯಿಂದ ಮನಸ್ಥಿತಿಯಲ್ಲಿ ಏರುಪೇರಾಗುವ ಸಾಧ್ಯತೆ ಬಹಳಷ್ಟಿದೆ. ನಿತ್ಯವೂ ನಿಯಮ ಬದ್ಧ ಆಹಾರ ಪದ್ಧತಿ ಅನುಸರಿಸುವುದರಿಂದ ದಿನವಿಡೀ ಒಳ್ಳೆಯ ಮೂಡ್ ಕಾಪಾಡಿಕೊಳ್ಳಬಹುದು ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಒಳ್ಳೆಯ ಮನಸ್ಥಿತಿಯಲ್ಲಿರಲು ಧಾನ್ಯ, ಹಣ್ಣು, ತರಕಾರಿ, ಬೀಜಗಳ ಸೇವನೆ ಉತ್ತಮ. ಇವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಇರುತ್ತವೆ. ಕಾರ್ಬೋಹೈಡ್ರೇಟ್ಸ್ ಮತ್ತು ಮನಸ್ಥಿತಿಯ ನಡುವೆ ನೇರ ಸಂಬಂಧವಿದೆ. ಅದು ಹೇಗೆ ಎಂದರೆ ಇವುಗಳಲ್ಲಿನ ಟ್ರೆಪ್ಟೋಫೋನ್ ಮೆದುಳನ್ನು ಪ್ರವೇಶಿಸಿ, ಮೆದುಳಿನ ನರವ್ಯೂಹ ಸೆರೊಟೋನಿನ್ಗೆ ಅನ್ನು ಉತ್ತಮವಾಗಿಡುತ್ತದೆ. ಹೀಗಾಗಿ ಟ್ರೆಪ್ಟೋಫೋನ್ ಇರುವ ಆಹಾರ ಹೆಚ್ಚೆಚ್ಚು ಸೇವಿಸಿದಷ್ಟೂ ಮನಸ್ಥಿತಿ ಶುದ್ಧಿಯಾಗುತ್ತದೆ. ಇದರಿಂದ ಯಾವಾಗಲು ಗುಡ್ ಮೂಡ್ನಿಂದ ಇರಬಹುದು. ಮೂಡ್ ಬಹುಬೇಗ ಹಾಳಾಗಲು ಟ್ರೆಫ್ಟೋಫೋನ್ ಕೊರತೆ ಕಾರಣ.
ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಆಯಾಸ ಹೆಚ್ಚುತ್ತದೆ. ದಿನಕಳೆದಂತೆ ತೂಕ ಇಳಿಮುಖವಾಗುತ್ತದೆ. ಈ ಪರಿಣಾಮ ಎರಡೇ ವಾರಗಳಲ್ಲಿ ಶುರುವಾಗುತ್ತದೆ. ಸ್ವಲ್ಪ ಕೆಲಸ ಮಾಡಿದರೂ ಆಯಾಸ ಆವರಿಸಿ ಶಕ್ತಿ ಕುಂದುತ್ತದೆ. ಸುಸ್ತಿನಿಂದ ದೂರ ಇರಲು ಅನ್ಸ್ಯಾಚುರೇಟೆಡ್ ಕೊಬ್ಬಿನ ಪದಾರ್ಥಗಳನ್ನು ಜಾಸ್ತಿ ಸೇವಿಸಬೇಕು.
ವಿಶೇಷವಾಗಿ ಒತ್ತಡದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವವರು ತಮ್ಮ ಆಹಾರದ ಬಗ್ಗೆ ಎಚ್ಚರವಹಿಸಲೇಬೇಕು. ಇಲ್ಲದಿದ್ದರೆ ದೈಹಿಕ, ಮಾನಸಿಕ ಎರಡೂ ರೀತಿಯಲ್ಲಿ ಆರೋಗ್ಯ ತೊಂದರೆ ಎದುರಿಸಬೇಕಾಗಿ ಬರಬಹುದು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.