ಉದರಕ್ಕೆ ಒಳ್ಳೆ ಆಹಾರ ಕೊಟ್ಟರೆ ಮೆದುಳು ಚುರುಕಾಗುತ್ತದೆ!

ನೀವು ಒತ್ತಡಗಳನ್ನು ಎಷ್ಟೇ ಸಲೀಸಾಗಿ ನಿಭಾಯಿಸಬಹುದು. ಆದರೂ ಒಮ್ಮೊಮ್ಮೆ ಒತ್ತಡಗಳ ಭಾರಕ್ಕೆ ನಲುಗುವಂತಾಗಿಬಿಡುತ್ತದೆ. ಅಂತಹ ಸಂದರ್ಭ ಎದುರಾದಲ್ಲಿ ಸುಮ್ಮನೆ ಒಂದು ಪ್ರಯೋಗ ಮಾಡಿನೋಡಿ. ಏನಿಲ್ಲ, ಸೀದಾ ಅಡುಗೆ ಮನೆಗೆ ಹೋಗಿ ಕಾಫಿ ಪುಡಿಯ ವಾಸನೆ ನೋಡಿ. ಕಚೇರಿಯಲ್ಲಿದ್ದೀರಿ ಎಂದುಕೊಳ್ಳಿ. ಅರ್ಧ ಕಪ್ ಕಾಫಿ ಕುಡಿಯಿರಿ, ಕಾಫಿ ಕಪ್ ಬಾಯಿಗಿಡುವ ಮುನ್ನ ನಾಸಿಕದಿಂದ ಒಮ್ಮೆ ಆಘ್ರಾಣಿಸಿ ಅಥವಾ ಚಾಕೊಲೇಟ್ನ ಪುಟ್ಟ ಚೂರೊಂದನ್ನು ಬಾಯಿಗಿಟ್ಟುಕೊಳ್ಳಿ. ಮರುಘಳಿಗೆಯಲ್ಲೇ ನಿಮ್ಮ ಮನಸ್ಥಿತಿ ಎಂತಹ ಗಣನೀಯ ಬದಲಾವಣೆ ಕಾಣುತ್ತದೆ ಎಂದರೆ ನವೋಲ್ಲಾಸದಿಂದ ಪುಟಿಯುವಿರಿ. ಇನ್ನಷ್ಟು ಕಾರ್ಯಹೊರೆ ಬಂದರೂ ಎದುರಿಸಲು ಮಾನಸಿಕವಾಗಿ ಸಿದ್ಧರಾಗುವಿರಿ.
ಕಾಫಿ, ಚಾಕೊಲೇಟ್ಗಳೂ 'ನಟ್ಸ್' ಪಂಗಡಕ್ಕೇ ಸೇರುವಂಥವು. ನಟ್ಸ್ಗಳಲ್ಲಿನ ವಿಶೇಷ ಎಂದರೆ ಅವುಗಳಲ್ಲಿನ ಪೈರಾಝಿನ್ ಎನ್ನುವ 'ಮೂಡ್ ಅಲರ್ಟಿಂಗ್' ರಾಸಾಯನಿಕ ಮೆದುಳಿನಲ್ಲಿ ಖುಷಿಯನ್ನು ಉದ್ದೀಪನಗೊಳಿಸುವ ಗುಣ ಹೊಂದಿರುವುದು. ಕಾಫಿ ಪುಡಿ ಇತ್ಯಾದಿಗಳ ವಾಸನೆಯನ್ನು ಮೂಗಿನ ಮೂಲಕ ಗ್ರಹಿಸುವ ಮೆದುಳು, ಎಷ್ಟೇ ಒತ್ತಡದಲ್ಲಿದ್ದರೂ ಆನಂದದ ಭಾವವನ್ನು ಉದ್ದೀಪಿಸುತ್ತದೆ. ಹೀಗಾಗಿಯೇ ನಮಗೆ ಹೊಸ ಚೈತನ್ಯ ಪಡೆದ ಅನುಭವ ಆಗುತ್ತದೆ. ಇನ್ನು ಬೀಜ, ತರಕಾರಿ ಎಣ್ಣೆ (ವೆಜಿಟೆಬಲ್ ಆಯಿಲ್) ಇತ್ಯಾದಿಗಳಲ್ಲಿ ಕೊಬ್ಬು ಇರುತ್ತದೆ. ಇವನ್ನು ಇಎಫ್ಎ (ಎಸೆನ್ಶಿಯಲಿ ಫ್ಯಾಟಿ ಆ್ಯಸಿಡ್) ಎಂದು ಹೇಳಲಾಗುತ್ತದೆ. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಅದರ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲು ಇಎಫ್ಎಗಳು ಅಗತ್ಯ. ಇಂಥ ಕೊಬ್ಬು ಜೈವಿಕವಾಗಿ ಬಹಳ ಕ್ರಿಯಾಶೀಲತೆಯಿಂದ ಕೂಡಿರುವುದು ಮಾತ್ರವಲ್ಲದೆ ಶಕ್ತಿ ಉತ್ಪಾದನೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.
ಆಹಾರದ ವಿಚಾರದಲ್ಲಿ ಚಾಣಾಕ್ಷ ಆಯ್ಕೆಗಳನ್ನು ಮಾಡಿಕೊಂಡರೆ ಸದಾ ಮಾನಸಿಕ ಸದಾ ಲವಲವಿಕೆಯುಂದ ಕೂಡಿರಬಹುದು. ಒತ್ತಡಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬಹುದು. ಮುಖ್ಯವಾಗಿ ದೈಹಿಕ ಆರೋಗ್ಯವನ್ನೂ ಚೆನ್ನಾಗಿ ಇಟ್ಟುಕೊಳ್ಳಬಹುದು. ನಮ್ಮ ಶರೀರದ ಯಾಂತ್ರಿಕ ವಿನ್ಯಾಸ ಎಷ್ಟು ಅಚ್ಚರಿ ಹುಟ್ಟಿಸುತ್ತದೆ ಅಲ್ಲವೆ? ಉದರಕ್ಕೆ ಒಳ್ಳೆಯ ಆಹಾರ ನೀಡಿದರೆ ಮೆದುಳು ಚುರುಕುಗೊಳ್ಳುತ್ತದೆ! ಆಹಾರದ ಆಕರ್ಷಣೆಗೆ ಒಳಗಾಗುವಾಗ ಅದರಲ್ಲಿನ ಸತ್ವವನ್ನು ನೋಡಬೇಕೇ ವಿನಾ ಅದರ ಬಣ್ಣ, ವಿನ್ಯಾಸಗಳನ್ನು ನೋಡಿ ಮರುಳಾಗುವುದಲ್ಲ. ಹಣ್ಣು, ತರಕಾರಿ, ಗೆಡ್ಡೆಗಳು, ಬೀಜಗಳು ಇತ್ಯಾದಿಗಳು ನಿಮ್ಮ ಆಹಾರದ ಭಾಗವಾಗಿದ್ದರೆ ನಿಶ್ಚಿತವಾಗಿಯೂ ಅತ್ಯುತ್ತಮ ಮಾನಸಿಕ, ದೈಹಿಕ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


