ಬೈಟುಕಾಫಿ

ಉದ್ದದ ಬೆಡಗಿಗೆ ಇಷ್ಟುದ್ದ ಆಫರ್

ಉದ್ದದ ಬೆಡಗಿಗೆ ಇಷ್ಟುದ್ದ ಆಫರ್
Published On :

ತುಂಬಾ ದಿನಗಳಿಂದ ರಾಗಿಣಿ ದ್ವಿವೇದಿ ಕಾಣುತ್ತಲೇ ಇಲ್ಲವಲ್ಲ, ಎತ್ತ ಹೋದರು ಎಂದು ಸ್ಯಾಂಡಲ್‌ವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಬಾಲಿವುಡ್‌ಗೆ ಹೋಗುತ್ತೀನಿ ಅಂದಿದ್ದ ರಾಗಿಣಿ 'ನಾ ನಿಲ್ಲುವಳಲ್ಲ' ಅಂತ ಮರಳಿ ಬಂದಿದ್ದಾರೆ.
ಹಾಗಂತ ರಾಗಿಣಿ ಬೇಡಿಕೆಯಲ್ಲಿಲ್ಲ ಅಂದುಕೊಂಡೀರಿ, ಜೋಕೆ. ನಮ್ಮ ಉದ್ದದ ಹುಡುಗಿ ಹಾಗೆಲ್ಲ ನಿರುದ್ಯೋಗಿ ಆಗುವುದುಂಟೇ? ಖಂಡಿತ ಇಲ್ಲ. ಬದಲಾಗಿ, ಕಳೆದ ಸಾಲಿನಲ್ಲಿಲ್ಲದ ಅವಕಾಶಗಳು ಆಕೆಯತ್ತ ಒದ್ದುಕೊಂಡು ಬಂದಿವೆ.
ರಾಗಿಣಿ ಈ ಸಲದ 'ಬಿಗ್‌ಬಾಸ್‌' ರಿಯಾಲಿಟಿ ಶೋ ಆವೃತ್ತಿಯಲ್ಲಿದ್ದಾಳೆಯೇ? ಹಾಗೊಂದು ಸುದ್ದಿ ಹರಿದಾಡುತ್ತಿದೆ. ಆದರೆ, ಪೂಜಾ ಗಾಂಧಿ ಕೂಡ ಈ ಬಾರಿ ಬಿಗ್‌ಬಾಸ್‌ನಲ್ಲಿದ್ದಾರೆ ಎಂಬ ಸುದ್ದಿಯೂ ಇದೆ. ಇಬ್ಬರೂ ಒಂದೇ ಕಡೆ ಇದ್ದರಂತೂ ನೋಡುಗರಿಗೆ ಪುಷ್ಕಳ ಮನರಂಜನೆ ಗ್ಯಾರಂಟಿ. ಯಾಕೆಂದರೆ ಇಬ್ಬರಿಗೂ ಮೊದಲಿನಿಂದಲೂ ಆಗಿಬರದು. ಇಬ್ಬರೂ ಒಂದೇ ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ, ಮುಖಕ್ಕೆ ಮುಖ ಕೊಟ್ಟು ಮಾತಾಡಿದ್ದನ್ನು ನೋಡಿದವರಿಲ್ಲ. ಹೀಗಾಗಿ ಇವರಿಬ್ಬರ ಹೈಕೈ ನಿರೀಕ್ಷಿಸಬಹುದು.
ಇತ್ತ ರಾಗಿಣಿ ಸಿನೆಮಾಗಳಲ್ಲಿ ಕೂಡ ಬ್ಯುಸಿ. ಆಕೆಯೀಗ ಪಂಚಭಾಷಾ ತಾರೆ. 'ಅಮ್ಮ' ಎಂಬ ಸಿನೆಮಾದಲ್ಲಿ ಈಕೆಯೇ ಹೀರೋಯಿನ್ ಇತ್ಯಾದಿ ಇತ್ಯಾದಿ. ಅದು ಐದು ಭಾಷೆಗಳಲ್ಲಿ ಬರುತ್ತಿರೋ ಫಿಲಮ್ಮಂತೆ. ಹಿಂದಿ, ತಮಿಳು, ತೆಲುಗಿನ ಒಂದೊಂದು ಚಿತ್ರಕ್ಕೆ ಹೋಗಿ ಬಂದಿರುವ ರಾಗಿಣಿ ನಾವು ಕಡೆಗಣಿಸಬಹುದಾದ ನಟಿ ಅಂತೂ ಅಲ್ಲ.
ಆದರೆ ಆಕೆ ಕೊಂಚ ಬುದ್ದು ಕೂಡ ಹೌದು. ಇತ್ತೀಚೆಗೆ ನರೇಂದ್ರ ಮೋದಿ ಅವರನ್ನು ಲಲಿತ್ ಮೋದಿ ಎಂದು ಕನ್‌ಫ್ಯೂಸ್ ಮಾಡಿಕೊಂಡು ಟ್ವೀಟ್ ಮಾಡಿದ್ದರು. ಬಿಗ್‌ಬಾಸ್‌ಗೆ ಕರೆ ಬಂದಿದೆ, ಆದರೆ ಈಗ ನನ್ನ ಕೈಯಲ್ಲಿ ಆರು ಚಿತ್ರಗಳಿವೆ. ಹಾಗಾಗಿ ಬಿಗ್‌ಬಾಸ್ ಹೋಸ್ಟ್ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದರು. ಬಿಗ್‌ಬಾಸ್ ಸುದೀಪ್  ಹೋಸ್ಟ್ ಮಾಡ್ತಾರೆ ಬಿಡಮ್ಮಾ, ನೀನು ಒಳಗಿದ್ದರಾಯಿತು ಎಂದು ಇತರರು ಕಮೆಂಟಿಸಿದ್ದರು. ಹೀಗಾಗಿ ಈಕೆಗೆ ಜನರಲ್ ನಾಲೆಡ್ಜ್ ಸ್ವಲ್ಪ ಕಡಿಮೆ ಎಂಬ ಮಾತು ಹರಿದಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.