ಬೈಟುಕಾಫಿ

ನಾವೂ ಒಮ್ಮೆ ಮಕ್ಕಳಾಗಿದ್ದೆವಲ್ಲ

Published On :

ಈಗಿನ ಮಕ್ಕಳನ್ನು ನಮಗೆ ಬೇಕಾದಂತೆ ತಿದ್ದುವುದು ಅಷ್ಟು ಸುಲಭವಲ್ಲ. ನಮ್ಮ ಸುತ್ತ-ಮುತ್ತಲಿರುವ ಮಕ್ಕಳನ್ನು, ಅವರ ಪೋಷಕರನ್ನು ನೋಡಿದರೆ, ಅವರು ತಮ್ಮ ಮಕ್ಕಳನ್ನು ಸರಿದಾರಿಗೆ ತರಲು ಪಡುವ ಪಡಿಪಾಟಲನ್ನು ನೋಡಿದರೆ ಗೊತ್ತಾಗುತ್ತದೆ. ನಾವು ಕೂಡ ನಮ್ಮ ಬಾಲ್ಯದಲ್ಲಿ ರಚ್ಚೆ ಹಿಡಿದ್ದೀವಲ್ಲ ಎಂಬುದನ್ನೆಲ್ಲ ಮರೆತೇಬಿಡುತ್ತಾರೆ. ಮಕ್ಕಳನ್ನು ಅತಿಯಾದ ಶಿಸ್ತಿಗೊಳಪಡಿಸಿ ಅವರ ಮನಸ್ಸನ್ನು ನೋಯಿಸುತ್ತಾರೆ. ಹೀಗೆ ಕಿರುಕುಳ ಕೊಡುವುದನ್ನು ಬಿಟ್ಟು ರಜೆಯಲ್ಲಿ ಎಂಜಾಯ್ ಮಾಡಲು ಬಿಡಿ. ಶಾಲೆ ಪ್ರಾರಂಭವಾದ ಮೇಲೆ ಓದಿನ ಕಡೆಗೆ ಗಮನ ಹರಿಸಿ. ಹೀಗೆ ಮಾಡದಿದ್ದರೆ ಮಕ್ಕಳಿಗೆ ತಮ್ಮ ಬಾಲ್ಯದ ಅನುಭವವೇ ಆಗುವುದಿಲ್ಲ.
- ನಾಗೇಂದ್ರ ಎಚ್. ಎಸ್., ಹಾಸನ

ಮನಸ್ಸು ವಿಕಲ್ಪಗೊಂಡರೆ!
ಮಕ್ಕಳ ಮನಸ್ಸನ್ನು ಮತ್ತು ನೀರಲ್ಲಿ ಮೀನಿನ ಹೆಜ್ಜೆಯನ್ನು ಕಂಡು ಹಿಡಿಯುವುದು ತುಂಬಾನೆ ಕಷ್ಟ. ಮಂಗನ ಬುದ್ಧಿಗೂ ಮಕ್ಕಳ ಮನಸ್ಸಿಗೂ ಏನೇನೂ ವ್ಯತ್ಯಾಸವಿರುವುದಿಲ್ಲ. ಹಾಗಾಗಿ ಮಂಗನನ್ನು ಮನುಷ್ಯರನ್ನಾಗಿಸುವ ಹೊಣೆ ಪ್ರತಿ ಪೋಷಕರ ಮೇಲಿರುವ ಜವಾಬ್ದಾರಿ. ಅದನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಬೇಕು. ಇಲ್ಲವಾದರೆ ಮಕ್ಕಳ ಮನಸ್ಸು ವಿಕಲ್ಪಗೊಳ್ಳಬಹುದು. ನನಗೆ ತಿಳಿದಂತೆ ರಜೆಯಲ್ಲಿ ಮಕ್ಕಳೇ ಹೆಚ್ಚು ಇಷ್ಟ ಪಡುವ ಕೆಲಸಗಳನ್ನು ಮಾಡಲು ಬಿಟ್ಟು ಯಾವುದೇ ಅಚಾತುರ್ಯ ಜರುಗದಂತೆ ಗಮನವಿರಿಸಬೇಕು. ರಜೆಯಲ್ಲೂ ಓದಿನ ಬಗ್ಗೆ ತಿಳಿಹೇಳಬೇಕು. ಅದರೆ ಅದು ಉಪದೇಶದಂತೆ ಇರಬಾರದು. ಶಾಲೆ ಪ್ರಾರಂಭವಾದ ಮೇಲೆ ಕೂಡ ಒಮ್ಮೆಲೇ ಹೊರೆ ಹೊರಿಸದೇ ನಿಧಾನವಾಗಿ ಓದಿನ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವುದೇ ಸರಿ.
- ಪ್ರಾಣೇಶ್ ಎಸ್, ಬೆಂಗಳೂರು

ಪ್ರತಿ ಹೆಜ್ಜೆಯಲ್ಲೂ ಹದ್ದುಬಸ್ತು ಬೇಕಾ?
ಮಕ್ಕಳಿಗೆ ಆಟ, ತಿರುಗಾಟ, ವಿನೋದ, ಪ್ರವಾಸಗಳೆಂದರೆ ಎಷ್ಟು ಇಷ್ಟವೋ ಅಷ್ಟೆ ಕಂಪ್ಯೂಟರ್ ಗೇಮ್ಸ್, ಪೋಗೋ ಚಾನೆಲ್, ಕಾರ್ಟೂನ್ ಚಾನೆಲ್‌ಗಳೆಂದರೆ ದಿನವಿಡೀ ಕಾಲಕಳೆಯಲು ತಯಾರಾಗೇ ಇದ್ದರೂ ಶಾಲಾ ದಿನಗಳಲ್ಲಿ ಹೋಂ ವರ್ಕ್, ಪ್ರಾಜೆಕ್ಟ್‌ಗಳ ಮಧ್ಯೆ ಇವೆಲ್ಲ ಸಾಧ್ಯವಾಗಿರುವುದಿಲ್ಲ. ಹಾಗಾಗಿ ದಸರಾ, ಬೇಸಿಗೆ ರಜೆಗಳಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಈ ರಜೆಯಲ್ಲೂ ಅಜ್ಜಿ-ತಾತದಿಂದರು ಟಿ.ವಿ. ರಿಮೋಟ್ ಅನ್ನು ಮಕ್ಕಳ ಕೈಗೆ ಕೊಡರು. ಅಷ್ಟೂ ಸಾಲದು ಎಂದು ಶಿಬಿರಗಳಿಗೆ ಸೇರಿಸಿ ಸ್ವಾತಂತ್ರ್ಯ ಕಸಿದುಕೊಳ್ಳುವುದು ಸರಿಯೇ? ಪ್ರತಿ ಹೆಜ್ಜೆಯನ್ನೂ ಹದ್ದುಬಸ್ತಿನಲ್ಲಿಡುವುದು ಒಳ್ಳೆಯದಲ್ಲ. ರಜೆಯ ಮಜವನ್ನು ಅನುಭವಿಸಲು ಬಿಟ್ಟು ಶಾಲೆಯ ಆರಂಭದ ನಂತರ ಅವರನ್ನು ಹಿಡಿತಕ್ಕೆ ತರುವುದೇ ಒಳಿತು.


- ಪ್ರಸನ್ನ, ಚೊಳ್ಳೇನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.