3 ಪುಸ್ತಕಗಳ ಬಿಡುಗಡೆ
ಆಕೃತಿ ಸಂಸ್ಥೆ ಇದೇ ಜೂನ್ 1 ರಂದು ಸಂಜೆ 5ಕ್ಕೆ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುತ್ತಿದೆ. ಎಸ್. ದಿವಾಕರ್ ಅವರ 'ರೂಪರೂಪಗಳನ್ನು ದಾಟಿ', 'ಹಾರಿಕೊಂಡು ಹೋದವನು' ಹಾಗೂ 'ಈ ಊರಿನಲ್ಲಿ ಕಳ್ಳರೇ ಇಲ್ಲ' ಈ ಮೂರು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗಲಿವೆ. ಡಾ. ಚಂದ್ರಶೇಖರ ಕಂಬಾರ, ಡಾ. ಸಿ. ಎನ್. ರಾಮಚಂದ್ರನ್ ಮತ್ತು ಓ. ಎಲ್. ನಾಗಭೂಷಣ ಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು. ಸಂಪರ್ಕಸಿ: 9886694580.
ಭರವಸೆಗಾಗಿ ನಡೆ
ಸ್ಪೈಡರ್ ಲಾಜಿಕ್ ಇಂಡಿಯಾ ಮತ್ತು ರೈಟ್ ಟು ಲಿವ್ ಸಂಸ್ಥೆಗಳು ಜತೆಗೂಡಿ 'ಭರವಸೆಗಾಗಿ ನಡೆ' (ವಾಕ್ ಫಾರ್ ಹೋಪ್) ಎಂಬ ವಿಶೇಷ ಕಾರ್ಯಕ್ರಮವೊಂದನ್ನು ಆಕ್ಸಿಯೋನೆಟ್ ಬಿಸಿನೆಸ್ ಸೊಲ್ಯುಷನ್ಸ್ ಐಟಿ ಸಂಸ್ಥೆ ಸಹಯೋಗದೊಂದಿಗೆ ಇದೇ ಮೇ 31ರಂದು ಹಮ್ಮಿಕೊಂಡಿವೆ.
ಹಣಕಾಸಿನ ಮುಗ್ಗಟ್ಟಿನಿಂದಾಗಿ ಹಲವು ಬಡಕುಟುಂಬಗಳು ಅಗತ್ಯ ಆರೋಗ್ಯ ಸೇವೆ ಪಡೆಯಲಾರದೆ ಸಂಕಷ್ಟದಲ್ಲಿದ್ದಾರೆ. ಇಂಥವರಿಗೆ ನೆರವಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಗಿರೀಶ್ ರಾಮಚಂದ್ರ. ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಸಂಸ್ಥೆಗಾಗಿ ದೇಣಿಗೆ ಸಂಗ್ರಹಿಸುವುದು ಕಾರ್ಯಕ್ರಮದ ಉದ್ದೇಶ. ದೇಣಿಗೆ ಆದಾಯ ತೆರಿಗೆ ವಿನಾಯಿತಿಗೊಳಪಡುತ್ತದೆ. ಮೇ 31ರಂದು ಬೆಳಗ್ಗೆ 8.30ಕ್ಕೆ ಜಯನಗರದ 8ನೇ ಬ್ಲಾಕಿನಲ್ಲಿರುವ (ಸಂಗಮ್ ಸರ್ಕಲ್ ಬಳಿ) ಸ್ಪೈಡರ್ ಲಾಜಿಕ್ ಸಂಸ್ಥೆಯ ಕಚೇರಿಯಿಂದ 'ಭರವಸೆಗಾಗಿ ನಡೆ'ಪ್ರಾರಂಭವಾಗಲಿದೆ. ಒಟ್ಟು 5 ಕಿ.ಮೀ ನಡಿಗೆ. 8 ಗಂಟೆಗೆ ನೋಂದಣಿ ಪ್ರಾರಂಭವಾಗಲಿದೆ. ನೋಂದಣಿ ಶುಲ್ಕ ರೂ. 300/- ಮತ್ತು ರೂ. 500/-(ಟೀ ಶರ್ಟ್ನೊಂದಿಗೆ). ವಿವರಗಳಿಗೆ: 9972657179,www.walk-for-hope.blogspot.in; www.facebook. com/ spiderlogicindia.
ಚಿರಕುಮಾರ ಸಭಾ ನಾಟಕ
ರಂಗಶಂಕರದಲ್ಲಿ ಮೇ, 31 ರಂದು ಸಮಷ್ಟಿ ಸಭಾ ಅವರಿಂದ 'ಚಿರಕುಮಾರ ಸಭಾ' ನಾಟಕವಿದೆ. ರವೀಂದ್ರನಾಥ್ ಟ್ಯಾಗೋರ್ ಅವರ ಮೂಲ ನಾಟಕವನ್ನು ಕನ್ನಡಕ್ಕೆ ತಂದವರು ಬಿ. ಪುಟ್ಟಸ್ವಾಮಯ್ಯ, ಎಲ್. ಬಡಿಗೇರ್ ನಿರ್ದೇಶನ. ವಿವರಗಳಿಗೆ: 9845163380 ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

