ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಚಿತ್ರ ಬಿಡಿಸೋದು ಎಷ್ಟು ಕಷ್ಟ ಅಲ್ವಾ? ಹಾಗಂತ ನಾವು ಅಂದುಕೊಂಡಿದ್ದೀವಿ ಅಷ್ಟೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 15-20 ಅಂಕಗಳ ಪ್ರಶ್ನೆಗಳು ಚಿತ್ರಗಳಿಗಾಗಿಯೇ ಮೀಸಲು. ನಿಜ ಏನಂದ್ರೆ ವಿಜ್ಞಾನ ಚಿತ್ರಗಳನ್ನು ಬಿಡಿಸೋದು ತೀರಾ ಸರಳ. ಇಂತಹ ಸುಲಭ ವಿಧಾನಗಳನ್ನು ತಿಳಿಸಿಕೊಡುವ ಪ್ರಯತ್ನ 'ಚಿತ್ರ ವಿಜ್ಞಾನ.'
ಪ್ರೌಢಶಾಲಾ ಶಿಕ್ಷಕರಾಗಿರುವ ವ್ಯಂಗ್ಯ ಚಿತ್ರಕಾರ ಸತೀಶ್ ಯಲ್ಲಾಪುರ ಈ ಕೃತಿಯನ್ನು ರಚಿಸಿದ್ದಾರೆ. ಎ.ಸಿ ಡೈನೆಮೊ, ಬೆಳಕಿನ ಬಲ್ಬ್, ಮೂತ್ರ ಜನಕಾಂಗ, ಹೃಹಯ, ಹೂವು ಸೇರಿದಂತೆ 14 ಚಿತ್ರಗಳ ಬಗ್ಗೆ ಶಾಲೆಯಲ್ಲಿ ಪಾಠ ಮಾಡುವ ಹಾಗೆಯೇ ಹಂತಹಂತವಾಗಿ ವಿವರಣೆ ನೀಡಿದ್ದಾರೆ. ಪೆನ್ಸಿಲ್, ಎರೇಸರ್ ಬಳಕೆ ಬಗ್ಗೆಯೂ ಟಿಪ್ಸ್‌ಗಳನ್ನು ನೀಡಿದ್ದಾರೆ. ಹೊನ್ನಾವರ ತಾಲ್ಲೂಕು ಕೆರೆಕೋಣದ ಬಂಡಾಯ ಪ್ರಕಾಶನ (ಮೊ: 9481451639) ಇದನ್ನು ಪ್ರಕಟಿಸಿದೆ. 60 ಪುಟ. ಬೆಲೆ ರು. 50. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಪುಸ್ತಕ.