ಬ್ರೆಡ್ ಜಾಮ್ ತಿನ್ಬಾರ್ದಂತೆ
ಐಸ್ಕ್ರೀಂ ಕೋಲ್ಡಂತೆ
ಕುರುಕು ತಿಂದ್ರೆ ಆ್ಯಸಿಡಿಟಿ
ಅಂತಾನೆ ಇರ್ತಾಳೆ
ಇವ್ಳಿಗ್ ಹೇಳೋರ್ಯಾರು?
ಅಲ್ಲಿ ಇಲ್ಲಿ ಆಡ್ಬಾರ್ದು
ಟಿ.ವಿ. ಹೆಚ್ಚು ನೋಡ್ಬಾರ್ದು
ರ್ಯಾಂಕ್ ಬಂದ್ರೆ ಜಾಣ
ತಪ್ಪಿಸಿಕೊಂಡ್ರೆ ಕೋಣ
ಅಂತಾನೆ ಇರ್ತಾಳೆ
ಇವ್ಳಿಗ್ ಹೇಳೋರ್ಯಾರು?
ಹೇಳಿದ್ದೆಲ್ಲ ಕೇಳ್ಬೇಕು
ಪ್ರಶ್ನೆ ಮಾಡೋದ್ ಬಿಡ್ಬೇಕು
ಯಾರ್ಯಾರಿಗೋ ಹೆದ್ರಿಹೆದ್ರಿ
ತಗ್ಗಿಬಗ್ಗಿ ನಡೀಬೇಕು
ಅಂತಾನೆ ಇರ್ತಾಳೆ
ಇವ್ಳಿಗ್ ಹೇಳೋರ್ಯಾರು
ಅಮ್ಮನೇನಾ ಇವ್ಳು!?
- ವಿಜಯಶ್ರೀ ಹಾಲಾಡಿ