ಶುಂಠಿ ಪೆಪ್ಪರಮಿಂಟು
ಜುಮ್ ಜುಮ್
ಅನ್ನುವುದುಂಟು!
ಶುಂಠಿ ಪೆಪ್ಪರಮಿಂಟು
ತಿನ್ನಲು ರುಚಿಯಾಗುಂಟು.
ಬಿಸ್ಕತ್ ಪೆಪ್ಪರಮಿಂಟು
ಪೇಟೇಲಿ ತುಂಬಾವುಂಟು!
ಪೆಪ್ಪರಮಿಂಟನು ಈಗ
'ಕ್ಯಾಂಡಿ' ಎನ್ನುವುದುಂಟು.
ರುಚಿ ರುಚಿ
ಪೆಪ್ಪರಮಿಂಟು
ಬಣ್ಣದ ಪೆಪ್ಪರಮಿಂಟು
ಮಕ್ಕಳ ಸಿಹಿಯಾ ನಂಟು
ತಿನ್ನಲು ಪೆಪ್ಪರಮಿಂಟು
ಹಲ್ ಹುಳುಕಾಗುವುದುಂಟು!
= ವಿ. ಪ್ರಾಣೇಶ್‌ರಾವ್