ರಕ್ತ ದಾನ ಮಾಡ್ಬೇಕು, ಮಾರಾಟ ಅಲ್ಲ

Updated on: 

ಪುಟಾಣಿಗಳೆ,  ಮೊನ್ನೆಮೊನ್ನೆ ಅಂದರೆ ಜೂನ್ 14ರಂದು ವಿಶ್ವ ರಕ್ತದಾನ ದಿನವನ್ನು ಆಚರಿಸಿದ್ದೇವೆ. ಕರ್ನಾಟಕದಲ್ಲಿ ಆರೋಗ್ಯ ಸಚಿವರೂ ಸೇರಿದಂತೆ ಹಲವು ಸೆಲೆಬ್ರಿಟಿಗಳು ರಕ್ತದಾನ ಮಾಡಿದರು. ನಿಮಗೆ ರಕ್ತದಾನ ದಿನದ ಹಿನ್ನೆಲೆ ಗೊತ್ತಾ?
ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನ ದಿನ ಆಚರಣೆ ಶುರು ಮಾಡಿದ್ದು 2014ರಲ್ಲಿ. ಅಗತ್ಯ ಇರುವವರಿಗೆ ಸಕಾಲದಲ್ಲಿ ರಕ್ಕ ಸಿಗದೇ ಎಷ್ಟೋ ಜನ ಸಾಯುತ್ತಾರೆ. ಅಂದರೆ ನಾವು ದಾನ ಮಾಡುವ ರಕ್ತ ಎಷ್ಟೋ ಜೀವಗಳನ್ನು ಉಳಿಸುತ್ತದೆ ಅಲ್ವಾ? ಎಷ್ಟೋ ರಾಷ್ಟ್ರಗಳಲ್ಲಿ ಹಣಕ್ಕಾಗಿ ರಕ್ತ ಮಾಡುವವರಿದ್ದಾರೆ. ರಕ್ತ ಕೊಡುವ ಮೂಲಕ ನಾವು ಪ್ರಾಣಗಳನ್ನು ಉಳಿಸಬಹುದು ಎನ್ನುವ ಕಲ್ಪನೆ ಇಲ್ಲದಿರುವುದೇ ಅದಕ್ಕೆ ಕಾರಣ. ಜಗತ್ತಿನ ಎಲ್ಲ ರಾಷ್ಟ್ರಗಳೂ ರಕ್ತವನ್ನು ದಾನಿಗಳಿಂದಲೇ ಸಂಗ್ರಹಿಸುವಂತಾಗಬೇಕು ಎನ್ನುವ ಆಶಯದಿಂದ ವಿಶ್ವಸಂಸ್ಥೆ ಈ ದಿನದ ಆಚರಣೆ ಶುರು ಮಾಡಿತು. ಇವತ್ತು 62 ರಾಷ್ಟ್ರಗಳಲ್ಲಿ ಸಂಪೂರ್ಣ ದಾನಿಗಳಿಂದಲೇ ರಕ್ತ ಸಂಗ್ರಹಿಸಲಾಗುತ್ತದೆ. ರಕ್ತ ಕೊಟ್ಟು ಹಣ ಪಡೆಯುವ ವ್ಯವಸ್ಥೆ ಅಲ್ಲಿಲ್ಲ. ಇನ್ನು 40 ದೇಶಗಳಲ್ಲಿ ರಕ್ತದಾನದ ಬಗ್ಗೆ ನಿಧಾನವಾಗಿ ಅರಿವು ಮೂಡುತ್ತಿದೆ. ನೂರಕ್ಕೂ ಅಧಿಕ ದೇಶಗಳಲ್ಲಿ ರಕ್ತದಾನದ ಮಹತ್ವವೇ ಗೊತ್ತಿಲ್ಲ. 2020ರ ಹೊತ್ತಿಗೆ ಎಲ್ಲ ದೇಶಗಳಲ್ಲಿಯೂ ರಕ್ತ ದಾನಿಗಳು ಸೃಷ್ಟಿಯಾಗಬೇಕು, ರಕ್ತವನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಸ್ಥಿತಿ ಇರದಂತೆ ಮಾಡಬೇಕು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆ ಗುರಿ. ಒಬ್ಬ ಆರೋಗ್ಯವಂತ ವ್ಯಕ್ತಿ ಜೀವನದಲ್ಲಿ ಎಷ್ಟು ಸಲ ಬೇಕಾದರೂ ರಕ್ತದಾನ ಮಾಡಬಹುದು. ಒಮ್ಮೆ 200ರಿಂದ 550 ಮಿ.ಲೀ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸಂಗ್ರಹಿಸಿ, ಸಂಸ್ಕರಿಸಿ, ಸುರಕ್ಷಿತವಾಗಿಟ್ಟು ಅಗತ್ಯ ಇರುವವರಿಗೆ ನೀಡಲಾಗುತ್ತದೆ. ಇಂಥ ಬ್ಯಾಗ್‌ಗಳಲ್ಲಿ ಸೋಡಿಯಂ ಸೈಟ್ರೇಟ್, ಪಾಸ್ಫೇಟ್, ಡೆಕ್ಸ್‌ಟೋರ್ಸ್ ಮೊದಲಾದ ರಾಸಾಯನಿಕಗಳಿರುತ್ತವೆ. ರಕ್ತದಾನ ಮಾಡಿದ 10-15 ನಿಮಿಷಗಳಲ್ಲಿ ಮನೆಗೆ ಮರಳಬಹುದು. ಅಂದಹಾಗೆ ಅದೇ ಗುಂಪಿನ ರಕ್ತವನ್ನು ಬೇರೊಬ್ಬ ವ್ಯಕ್ತಿಗೆ ನೀಡಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ವಿಜ್ಞಾನಿ ಡಾ.ಜೀನ್ ಬ್ಯಾಪ್ಟಿಸ್ಟ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com