ಉತ್ತರ ಅಮೆರಿಕದ ರಾಷ್ಟ್ರ. ಕೆನಡಾ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, 10 ಪ್ರಾಂತ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿವೆ. ಬಹುಪಕ್ಷೀಯ ಸಂಸದೀಯ ವ್ಯವಸ್ಥೆ ಇದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲಿ ಒಂದು. ಅತಿಹೆಚ್ಚು ತಲಾ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಒಂಬತ್ತನೇಯದು.
ಭಾಷೆ: ಇಂಗ್ಲಿಷ್ ಮತ್ತು ಫ್ರೆಂಚ್
ರಾಜಧಾನಿ: ಒಟ್ಟಾವ
ಜನಸಂಖ್ಯೆ: 3,34,76,688 (2011)
ವಿಸ್ತೀರ್ಣ: 99,84,670 ಚ.ಕಿ.ಮೀ
ಕರೆನ್ಸಿ: ಕೆನಡಿಯನ್ ಡಾಲರ್