1. ಯಾವ ಸಂಖ್ಯೆಯು ತನ್ನ ಮೂರರಷ್ಟಕ್ಕೆ ಸಮ..?
2. ಯಾವ ಸಂಖ್ಯೆಯನ್ನು 3ರಿಂದ ಭಾಗಿಸಿದರೂ, ಅದರಿಂದ 3ರನ್ನು ಕಳೆದರೂ ಉತ್ತರ ಅಷ್ಟೇ ಬರುತ್ತದೆ?
3. ಮೂರು ಸಂಖ್ಯೆಗಳಿವೆ. ಅವುಗಳನ್ನು ಕೂಡಿಸಿದರೂ, ಗುಣಿಸಿದರೂ ಉತ್ತರ ಒಂದೇ ಬರುತ್ತದೆ. ಅವು ಯಾವವು?
4. 5 ಲಕ್ಷ, 50 ಸಾವಿರದಲ್ಲಿ ಎಷ್ಟು ನೂರುಗಳಿವೆ?
5. ಬೆಳಗಿನ ಹೊತ್ತು 4 ಕಾಲಲ್ಲಿ, ಮಧ್ಯಾಹ್ನ 2 ಕಾಲಲ್ಲಿ, ಸಾಯಂಕಾಲ 3 ಕಾಲಲ್ಲಿ ನಡೆಯುವ ಪ್ರಾಣಿ ಯಾವುದು?
6. ಮಹಡಿ ಮನೆಯಲ್ಲಿ ನಾನು ಎರಡು ಬಾರಿ ಬರುವೆ. ಅರಮನೆಯಲ್ಲಿ ಒಂದು ಬಾರಿ ಬರುವೆ. ಆದರೆ ಬಂಗಲೆಯಲ್ಲಿ ನಾನು ಬರುವುದೇ ಇಲ್ಲ. ನಾನಾರು?
7. ಬಿಲಿಯನ್ ಎಂದರೆ ಎಷ್ಟು?
8. 'ಲೀಲಾವತಿ' ಸಂಸ್ಕೃತ ಭಾಷೆಯ ಈ ಗಣಿತ ಗ್ರಂಥದ ಕರ್ತೃ ಯಾರು?
9. ಒಂದರಿಂದ 50ರವರೆಗಿನ ಹಾಗೂ ಒಂದ ರಿಂದ 100ವರೆಗಿನ ಸಂಖ್ಯೆಗಳ ಮೊತ್ತವೆಷ್ಟು?
10. ಎರಡು ಅಂಕಿಗಳ ಮೊತ್ತ ಅವುಗಳ ವ್ಯತ್ಯಾಸಕ್ಕಿಂತ 10 ಹೆಚ್ಚು. ಆ ಎರಡು ಅಂಕಿಗಳು ಯಾವವು?
- ಕೃಷ್ಣಾ ಎಸ್. ಕುಲಕರ್ಣಿ
ಉತ್ತರಗಳು:
1) ಸೊನ್ನೆ (0)
2) 4 ಅಥವಾ 9/2
3) 1,2,3
4) 5500
5) ಮನುಷ್ಯ (ಬಾಲ್ಯ, ಯೌವ್ವನ, ಮುಪ್ಪು)
6) 'ಮ' ಅಕ್ಷರ
7) ಹತ್ತರ ಘಾತ 12(1012)
8) ಭಾಸ್ಕರಾಚಾರ್ಯ
9) 1275 ಹಾಗೂ 5050
10) 10 ಹಾಗೂ 5