ಸತ್ತ ವ್ಯಕ್ತಿಗೆ ಮರುಜೀವ!
ನ್ಯೂಯಾರ್ಕ್: ಸತ್ತ ವ್ಯಕ್ತಿಗೆ ಮರಳಿ ಜೀವ ನೀಡಲು ಸಾಧ್ಯವಿದೆಯೇ? ಹೌದು. ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ವ್ಯಕ್ತಿಯೊಬ್ಬ ಉಸಿರಾಟ ನಿಲ್ಲಿಸಿದ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಿದರೆ ಆತ ಮತ್ತೆ ಪ್ರಜ್ಞೆಗೆ ಬರುವಂತೆ ಮಾಡಲು ಸಾಧ್ಯವಿದೆ ಎನ್ನುತ್ತಾರೆ ಅಮೆರಿಕದ ತುರ್ತು ಚಿಕಿತ್ಸಾ ಘಟಕದ ವೈದ್ಯ, ಹೃದಯರೋಗ ತಜ್ಞ ಡಾ. ಸ್ಯಾಮ್ಪರ್ನಿಯಾ. ಪರ್ನಿಯಾ ಅವರು ತಮ್ಮ ಪುಸ್ತಕ 'ಇರೇಸಿಂಗ್ ಡೆತ್' ಕೃತಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಉಸಿರಾಟ ನಿಲ್ಲಿಸಿದ ವ್ಯಕ್ತಿಯೊಬ್ಬನಿಗೆ ಮರುಜೀವ ನೀಡುವಷ್ಟು ವೈದ್ಯಕೀಯ ಕ್ಷೇತ್ರ ಬೆಳವಣಿಗೆ ಸಾಧಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಉಸಿರಾಟ ನಿಲ್ಲಿಸಿದ ಒಂದು, ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಿದರೆ ಆತನಿಗೆ ಮರುಜೀವ ನೀಡಲು ಸಾಧ್ಯವಿದೆ. ಆದರೆ, ಭವಿಷ್ಯದಲ್ಲಿ ಈ ಕಾಲಾವಧಿ ಇನ್ನಷ್ಟು ವಿಸ್ತರಿಸಬಹುದು ಎಂದು ಡಾ. ಪರ್ನಿಯಾ ಅವರು ಜರ್ಮನಿಯ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಹುತೇಕರಿಗೆ ಮರುಜೀವ!
ಉಸಿರಾಟ ನಿಲ್ಲಿಸಿದ ಎಲ್ಲಾ ವ್ಯಕ್ತಿಗಳ ಜೀವ ಉಳಿಸುವುದು ಅಸಾಧ್ಯ. ಯಾಕೆಂದರೆ ಹೃದಯಾಘಾತಕ್ಕೆ ಅನೇಕ ಕಾರಣಗಳಿರುತ್ತವೆ. ಗಂಭೀರ ಕ್ಯಾನ್ಸರ್ಗೆ ತುತ್ತಾಗಿರುವ ರೋಗಿಗಳ ಹೃದಯಬಡಿತಕ್ಕೆ ಮತ್ತೆ ಚಾಲನೆ ನೀಡಬಹುದು. ಆದರೆ, ಅದು ಮತ್ತೆ ಮತ್ತೆ ಕೈಕೊಡುತ್ತಲೇ ಇರುತ್ತದೆ. ಹಾಗಾಗಿ ಇಂಥ ರೋಗಿಗಳ ಜೀವ ಉಳಿಸುವುದು ಕಷ್ಟ. ಆದರೆ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಬಳಸಿಕೊಂಡು ಬಹುತೇಕರಿಗೆ ಪುನರ್ಜನ್ಮ ನೀಡುವುದು ಸಾಧ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

