ಯೋಧನ ಮೃತ ದೇಹ ಗುರುತಿಗೆ ರಕ್ತ ಸಂಗ್ರಹ
ಕನ್ನಡಪ್ರಭ ವಾರ್ತೆ , ಗದಗ , ಜು. 1
ಉತ್ತರಾಖಂಡ ನೆರೆ ಸಂತ್ರಸ್ತರ ನೆರವಿಗೆ ತೆರಳಿ ಜೀವ ತೆತ್ತ ನವಲಗುಂದ ತಾಲೂಕಿನ ಜಗಾಪುರ ಗ್ರಾಮದ ಬಸವರಾಜ ಯರಗಟ್ಟಿ ಪಾರ್ಥಿವ ಶರೀರದ ಗುರುತು ಹಿಡಿಯಲು ಹಿರಿಯ ಅಧಿಕಾರಿಗಳು ಮೃತ ಯೋಧನ ತಾಯಿಯ ರಕ್ತದ ಮಾದರಿ ಸಂಗ್ರಹಿಸಿಕೊಂಡಿದ್ದಾರೆ.
ಸೋಮವಾರ ಜಗಾಪುರ ಗ್ರಾಮಕ್ಕೆ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹಿರಿಯ ಅಧಿಕಾರಿಗಳು ಯೋಧನ ಮೃತ ದೇಹದ ನಿಖರ ಪತ್ತೆ ಮಾಡುವ ನಿಟ್ಟಿನಲ್ಲಿ ಡಿಎನ್ಎ ಪರೀಕ್ಷೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಸವರಾಜ ಅವರ ತಾಯಿಯ ರಕ್ತದ ಮಾದರಿ ಪಡೆದುಕೊಂಡಿದ್ದಾರೆ.
ಈ ರಕ್ತದ ಮಾದರಿಯನ್ನು ಹೈದರಾಬಾದ್ನಲ್ಲಿರುವ ಸಿಡಿಎಫ್ಡಿ ಲ್ಯಾಬ್ಗೆ ರವಾನಿಸಿ ನಂತರ ಡಿಎನ್ಎ ನಿಖರತೆ ಲಭ್ಯವಾಗಲಿದೆ. ಬುಧವಾರದ ವೇಳೆಗೆ ಯೋಧನ ಶವ ಗ್ರಾಮಕ್ಕೆ ತಲುಪುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಕಮಾಂಡರ್ ಎಸ್.ಕೆ.ದಾಠಿಘರ ತಿಳಿಸಿದ್ದಾರೆ.
ಆಸ್ಪತ್ರೆ ಸೇರಿದ ಕುಟುಂಬ ಸದಸ್ಯರು: ಐದು ದಿನಗಳಾದರೂ ಯೋಧ ಬಸವರಾಜ ಪಾರ್ಥಿವ ಶರೀರ ಬಾರದೇ ಕಂಗೆಟ್ಟಿರುವ ಕುಟುಂಬ ಸದಸ್ಯರು ಆಹಾರ ಸೇವಿಸದೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಬಸವರಾಜ ಅವರ ತಂದೆ-ತಾಯಿ, ಪತ್ನಿ ಮತ್ತು ಸಹೋದರಿಯರು ಆಹಾರ ಸೇವಿಸದೇ ತೀವ್ರವಾಗಿ ಅಸ್ವಸ್ಥರಾಗಿದ್ದು ಇವರೆಲ್ಲರನ್ನೂ ಜಗಾಪೂರದ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಯೋಧನ ತಂದೆ ತುಳಸಪ್ಪ ಮೂತ್ರ ವಿಸರ್ಜನೆಯ ತೊಂದರೆಯಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಎಸ್.ಜಿ.ವಸ್ತ್ರದ ತಿಳಿಸಿದ್ದಾರೆ.
ಸೇನೆಯ ಯೋಧರು ನಡೆಸಿದ ಕಾರ್ಯಾಚರಣೆ ವೇಳೆಯಲ್ಲಿ 9 ಶವಗಳು ಒಂದೇ ಸ್ಥಳದಲ್ಲಿ ದೊರೆತಿದ್ದರಿಂದ ಹಿರಿಯ ಅಧಿಕಾರಿಗಳು ಡಿಎನ್ಎ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮೃತ ಯೋಧ ಬಸವರಾಜನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರುವಲ್ಲಿ ವಿಳಂಬವಾಗಿದೆ.
- ಡಾ.ಎಸ್.ಡಿ.ಶರಣಪ್ಪ ಎಸ್ಪಿ ಗದಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

