ಬಂಕ್‌ನಲ್ಲಿ ಸಿಗಲಿದೆ 5 ಕೆ.ಜಿ. ಸಿಲಿಂಡರ್!

ನವದೆಹಲಿ: ಶೀಘ್ರದಲ್ಲೇ ಐದು ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ಗಳು ಮಾರುಕಟ್ಟೆಗೆ ಬರಲಿವೆ. ಈ ಸಿಲಿಂಡರ್‌ಗಳ ದರ 360ರಿಂದ 380ಗಳಷ್ಟಿರಬಹುದು. ಅಂದರೆ, ಈ ಸಿಲಿಂಡರ್‌ಗಳಿಗೆ ಸರ್ಕಾರದ ಸಬ್ಸಿಡಿ ಇರುವುದಿಲ್ಲ. ಎಲ್‌ಪಿಜಿ ಮಾರುಕಟ್ಟೆ ದರವನ್ನೇ ನಿಗದಿ ಮಾಡಲಾಗುತ್ತದೆ. ಈ ಸಿಲಿಂಡರ್‌ಗಳನ್ನು ಪೆಟ್ರೋಲ್ ಬಂಕ್‌ಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಮಾರಾಟ ಕೇಂದ್ರಗಳಲ್ಲಿ (ಪೆಟ್ರೋಲ್ ಬಂಕ್) ಐದು ಕೆ.ಜಿ. ಸಿಲಿಂಡರ್‌ಗಳನ್ನು ವಿತರಿಸಲು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಒಪ್ಪಿಗೆ ನೀಡಿದ್ದಾರೆ. ಎಲ್‌ಪಿಜಿಯನ್ನು ಮುಕ್ತವಾಗಿ ಮಾರುಕಟ್ಟೆ ಮಾಡಲು ಮತ್ತು ತಾತ್ಕಾಲಿಕ ಸಂಪರ್ಕ ಪಡೆಯುವವರಿಗೆ ಅನುಕೂಲ ಒದಗಿಸಲು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆರಂಭದಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಸಿಲಿಂಡರ್ ಖರೀದಿಸುವವರು ಆರಂಭದಲ್ಲಿ ಡೊಮೆಸ್ಟಿಕ್ ಪ್ರೆಷರ್ ರೆಗ್ಯುಲೆಟರ್ ಕೊಳ್ಳಬಹುದು ಇಲ್ಲವೇ ಬರೀ ಸಿಲಿಂಡರ್ ಖರೀದಿಸಬಹುದು. ಗ್ರಾಹಕರಿಗೆ ಅನುಕೂಲ ಒದಗಿಸಲು ಸಿಲಿಂಡರ್ ಮಾರಾಟ ಮಾಡುವ ಪೆಟ್ರೋಲ್ ಪಂಪ್‌ಗಳು ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ತೆರೆದಿರುತ್ತವೆ. ಆರಂಭದಲ್ಲಿ ಐದು ಕೆ.ಜಿ. ಸಿಲಿಂಡರ್ ಖರೀದಿಸಲು ಗ್ರಾಹಕರು ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಮತದಾರರ ಚೀಟಿ, ಡಿಎಲ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಎಂಪ್ಲಾಯಿ ಐಡಿ, ಪಾಸ್‌ಪೋರ್ಟ್ ಸೇರಿದಂತೆ ಯಾವುದಾದರೂ ನಿಗದಿತ ಗುರುತಿನ ಚೀಟಿಯನ್ನು ಒದಗಿಸಬೇಕು.
ಗ್ರಾಹಕರು ಮೊದಲು ಖರೀದಿಸುವ ವೇಳೆ ಸಿಲಿಂಡರ್ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಗ್ರಾಹಕರು ಬಯಸಿದರೆ ವಿಮೆಯನ್ನು ಇಳಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


