ಪ್ರಧಾನ ಸುದ್ದಿ

1764 ಉಪನ್ಯಾಸಕರು ರೆಡಿ, ಆದೇಶ ನೀಡದ ಸರ್ಕಾರ

Published On :

ಚಾಮರಾಜನಗರ: ಈ ಶೈಕ್ಷಣಿಕ ವರ್ಷದಿಂದಲೇ ಉಪನ್ಯಾಸಕರ ನೇಮಕವಾಗುತ್ತದೆ ಎಂಬ ವಿಶ್ವಾಸದಿಂದ ಹಳ್ಳಿಗಾಡಿನ ಮಕ್ಕಳು ಹೊಸದಾಗಿ ತೆರೆದಿರುವ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜುಗಳಿಗೆ ದಾಖಲಾಗಿದ್ದಾರೆ. ಕಾಲೇಜು ಆರಂಭವಾಗಿ ವಾರವೆರಡಾದರೂ ಇನೂ ಕಲಾ ವಿಭಾಗದಲ್ಲಿಯೇ ಕುಳಿತು ಪಾಠ ಕೇಳುವ ಅನಿವಾರ್ಯತೆ ಇವರಿಗೆ!
ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳು ಹೊಸ ಕನಸುಗಳೊಂದಿಗೆ ವಿಜ್ಞಾನ ವಿಷಯವನು ಆರಿಸಿಕೊಂಡು, ಕಾಲೇಜು ಸೇರಿದ್ದಾರೆ. ಆದರೆ, ಪಾಠ ಮಾಡಲು ಉಪನ್ಯಾಸಕರೇ ಇಲ್ಲದೇ ಆರಂಭದಲ್ಲಿಯೇ ಆತಂಕ ಎದುರಿಸುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿಯೇ ಮುಂದುವರಿಯಬೇಕೆ? ಅಥವಾ ಕಲಾ ವಿಭಾಗಕ್ಕೆ ವರ್ಗಾವಣೆ ಮಾಡಿಸಿಕೊಂಡರೆ ಒಳ್ಳೆಯದಾ ಎಂಬ ಜಿಜ್ಞಾಸೆಯಲ್ಲಿಯೇ ಮುಳುಗಿದ್ದಾರೆ.

ಪರೀಕ್ಷೆ ನಡೆದು ವರ್ಷವಾಯ್ತು: ಸರ್ಕಾರ 2010-11ನೇ ಶೈಕ್ಷಣಿಕ ವರ್ಷದಲ್ಲಿಯೇ ರಾಜ್ಯಾದ್ಯಂತ 355 ವಿಜ್ಞಾನ ಮತ್ತು 182 ವಾಣಿಜ್ಯ ಪದವಿ ಪೂರ್ವ ಕಾಲೇಜುಗಳನು ಆರಂಭಿಸಲಾಗಿದೆ. ಒಟ್ಟು ಖಾಲಿಯಿರುವ ಹುದ್ದೆಗಳಿಗೆ 1764 ಪದವಿಪೂರ್ವ ಕಾಲೇಜು ಉಪನ್ಯಾಸಕರನು ನೇಮಿಸಿಕೊಳ್ಳಲು ಸರ್ಕಾರ 2012ರ ಜೂನ್‌ನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಆದರೆ, ಇನೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿಯೂ ಹೊಸದಾಗಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ತೆರೆದಿರುವ ಕಾಲೇಜುಗಳು ಸೇರಿದಂತೆ ಖಾಲಿ ಇರುವ ಸ್ಧಳಗಳಿಗೆ ಸರ್ಕಾರ ಉಪನ್ಯಾಸಕರನು ನಿಯೋಜಿಸಿಲ್ಲ. ಕಳೆದ ಮೇ 25ರಂದೇ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯೋಜಿಸಿದೆ. ಆದರೆ, ಇದಾಗಿ ತಿಂಗಳಾದರೂ ಇನೂ ಸರ್ಕಾರ ಆದೇಶ ನೀಡಿಲ್ಲ.

ಮೂಲ ಸೌಕರ್ಯ ಕೊರತೆ: ಸರ್ಕಾರ 2010-11ರಲ್ಲೇ ಹಾಲಿ ಇರುವ ಕಲಾ ಕಾಲೇಜ್‌ಗಳಲ್ಲಿಯೇ 355 ವಿಜ್ಞಾನ ಮತ್ತು 182 ಕಡೆ ವಾಣಿಜ್ಯ ಪದವಿ ಪೂರ್ವ ಕಾಲೇಜು ತೆರೆಯಲು ಮಂಜೂರಾತಿ ನೀಡಿತ್ತು. ಇದಾಗಿ 4ನೇ ಶೈಕ್ಷಣಿಕ ವರ್ಷ ಬಂದರೂ ಇನೂ ಹೊಸದಾಗಿ ಮಂಜೂರಾತಿ ನೀಡಿದ ಕಾಲೇಜುಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಲ್ಲ.
ಈ ಬಾರಿ ಹೊಸ ಕಾಲೇಜುಗಳಿಗೆ ಉಪನ್ಯಾಸಕರನು ನೇಮಿಸಿಕೊಳ್ಳಲಾಗಿದೆ ಎಂದು ಬಹುತೇಕ ಕಾಲೇಜುಗಳಿಗೆ ವಿದ್ಯಾರ್ಥಿಗಳನು ದಾಖಲಿಸಿಕೊಳ್ಳಲಾಗಿದೆ. ಆದರೆ, ಕಾಲೇಜುಗಳಲ್ಲಿ ಕೊಠಡಿಗಳಿಲ್ಲ. ವಿಜ್ಞಾನ ವಿಷಯ ಬೋಧಿಸಲು ಪ್ರಯೋಗಾಲಯಗಳೂ ಇಲ್ಲ. ಎಲ್ಲಕ್ಕಿಂತ ಮುಖ್ಯಕ್ಕಾಗಿ ಬೋಧಿಸುವ ಉಪನ್ಯಾಸಕರನೂ ನೇಮಿಸಿಕೊಂಡರೂ, ಆದೇಶ ನೀಡಿಲ್ಲ. ಆದರೆ, ಸದ್ಯದಲ್ಲಿಯೇ ಎಲ್ಲ ಸಮಸ್ಯೆಗಳೂ ಬಗೆಹರಿಯಲಿವೆ ಎನುತ್ತಾರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು.

ಉಪನ್ಯಾಸಕರ ನೇಮಕಾತಿ ನಡೆದಿದ್ದು, ಈಗಾಗಲೇ ಕೌನ್ಸೆಲಿಂಗ್ ಮುಗಿದು ಸ್ಥಳ ನಿಯೋಜಿಸಲಾಗಿದೆ. ಸದ್ಯದಲ್ಲಿಯೇ ಇಲಾಖೆ ಆದೇಶ ನೀಡಲಿದ್ದು, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಹೊಸ ವಿಜ್ಞಾನ ಕಾಲೇಜುಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಭಾಷಾ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
- ಸಿದ್ದದೇವರು, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಚಾಮರಾಜನಗರ

ಪದವಿ ಪೂರ್ವ ಶಿಕ್ಷಣ ಇಲಾಖೆ 1764 ಉಪನ್ಯಾಸಕರ ನೇಮಕಾತಿ ಪ್ರಕಿಯೆ ಮುಗಿಸಿದ್ದು, ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯೋಜಿಸಿ ತಿಂಗಳಾಗಿದೆ. ಕೌನ್ಸೆಲಿಂಗ್ ದಿನವೇ ಆದೇಶ ಪತ್ರ ನೀಡಬೇಕಿತ್ತು. ಆದರೆ. ಇದುವರಗೂ ಆದೇಶ ಬಂದಿಲ್ಲ.
- ಕೆ.ಎಸ್. ನಾಗರಾಜ, ಆಯ್ಕೆಯಾದ ಉಪನ್ಯಾಸಕ

- ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.