ದಾವೂದ್ಗೆ ಮೋದಿ ಹತ್ಯೆ ಸುಪಾರಿ?

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಲುವಾಗಿ ಪಾಕಿಸ್ತಾನದ ಐಎಸ್ಐ ಮತ್ತು ಸೌದಿ ಅರೇಬಿಯಾದ ಉಗ್ರ ಸಂಘಟನೆಗಳು ಭಾರಿ ಪ್ರಮಾಣದ ಸಂಚು ರೂಪಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಪಟನಾ ಸ್ಫೋಟದಲ್ಲಿ ಇಂಡಿಯನ್ ಮುಜಾಹಿದೀನ್ನ ಸಂಚು ವಿಫಲವಾದ ಮೇಲೆ ಐಎಸ್ಐ, ಭೂಗತ ದೊರೆ ದಾವೂದ್ ಇಬ್ರಾಹಿಂ ಮೊರೆ ಹೋಗಿದೆ ಎಂದು ಗುಪ್ತಚರ ಇಲಾಖೆಯ ನೋಟ್ವೊಂದು ಹೇಳಿದೆ. ಈ ಸ್ಫೋಟವಾದ ನಂತರ ಐಎಸ್ಐ ಅಧಿಕಾರಿಗಳು ದಾವೂದ್ ಇಬ್ರಾಹಿಂ ಜೊತೆ ಮಾತುಕತೆ ನಡೆಸಿದ್ದು ಭಾರತದಲ್ಲಿ ಮತ್ತೆ ಕಾರ್ಯಾಚರಣೆ ಶುರುಮಾಡುವಂತೆ ಸೂಚನೆ ನೀಡಿವೆ ಎಂದು ತಿಳಿದುಬಂದಿದೆ.
ಕೇವಲ ಪಾಕಿಸ್ತಾನದ ಭಯೋತ್ಪಾದನೆ ಸಂಘಟನೆಗಳಷ್ಟೇ ಅಲ್ಲ, ಸೌದಿ ಅರೇಬಿಯಾದ ಕೆಲ ಸಂಘಟನೆಗಳೂ ಕೂಡ ಮೋದಿ ಅವರ ಹತ್ಯೆಗಾಗಿ ಸಂಚು ರೂಪಿಸುತ್ತಿವೆ. ಇವೆಲ್ಲವೂ ಒಟ್ಟಾಗಿ ಸೇರಿ ಮೋದಿ ಅವರ ಹತ್ಯೆಗಾಗಿ ಭಾರಿ ಪ್ರಮಾಣದಲ್ಲೇ ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಈ ಮಾಹಿತಿಯನ್ನು ಭಯೋತ್ಪಾದಕ ಶಹೀದ್ ಅಲಿಯಾಸ್ ಬಿಲಾಲ್ ಎಂಬಾತನಿಂದ ಕಲೆಹಾಕಿವೆ. ಆತ ನರೇಂದ್ರ ಮೋದಿ ಅವರ ಹತ್ಯೆಗಾಗಿ ಈ ಸಂಘಟನೆಗಳು ಯಾವ ರೀತಿಯಲ್ಲಿ ಸಂಚು ರೂಪಿಸುತ್ತಿವೆ ಎಂದು ಬಹಿರಂಗಮಾಡಿದ್ದಾನೆ ಎನ್ನಲಾಗಿದೆ.
ಅವರ ಯೋಜನೆ ಏನು?
ನರೇಂದ್ರ ಮೋದಿ ಅವರಿಗೆ ಭಾರಿ ಪ್ರಮಾಣದ ಭದ್ರತೆ ಇರುವುದರಿಂದ ಸಾಮಾನ್ಯ ಜನರಿಗೆ ಅವರ ಬಳಿ ಹೋಗಲು ಕಷ್ಟ. ಭದ್ರತಾ ಅಧಿಕಾರಿಗಳನ್ನೇ ದಂಗೆ ಏಳುವಂತೆ ಮಾಡಿ ಅವರ ಹತ್ಯೆ ಮಾಡಿದರೆ ಹೇಗೆ ಎಂಬ ಕುಯುಕ್ತಿ ಅವರದ್ದು. ಇದಕ್ಕಾಗಿ ಲಷ್ಕರ್ ಎ ತೊಯ್ಬಾ ಸಂಘಟನೆ ಹತ್ಯೆಗೆ ನೆರವಾಗುವವರನ್ನು ನೇಮಕ ಮಾಡಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ ಎನ್ನಲಾಗಿದೆ. ಅಲ್ಲದೆ ಮೋದಿ ಹತ್ಯೆಗಾಗಿ ನೇರವಾಗಿ ದಾಳಿ ನಡೆಸುವ ಬದಲಾಗಿ ಸುಸೈಡ್ ಅಟ್ಯಾಕ್ ಮಾಡುವುದು. ಆತ್ಮಹತ್ಯಾ ದಾಳಿಗಾಗಿ ಶಹೀನ್ ಪಡೆಯೊಂದನ್ನೂ ಕಟ್ಟಲಾಗಿದೆ ಎನ್ನಲಾಗಿದೆ. ಇದಷ್ಟೇ ಅಲ್ಲ ನಿಷೇಧಿತ ಸಂಘಟನೆ ಸಿಮಿ ಕೂಡ ಇವರಿಗೆ ಸಹಾಯ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ಸಂಘಟನೆ ಎಲ್ಇಟಿ, ಹುಜಿ ಮತ್ತು ಜೆಇಎಂ ಸಂಘಟನೆಗಳ ಜೊತೆ ಸಂಪರ್ಕದಲ್ಲಿದೆ ಎನ್ನಲಾಗಿದೆ. ಭಯೋತ್ಪಾದಕರ ಜೊತೆ ಮೋದಿ ಅವರ ಮೇಲೆ ನಕ್ಸಲೀಯರು ಕೂಡ ಗುರಿ ಇಟ್ಟಿದ್ದಾರೆ ಎಂದೂ ಗುಪ್ತಚರ ದಳ ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


