ದಸರಾ ಮುಗಿದರೂ ನಿಗದಿಯಾಗದ ಕಬ್ಬಿನ ದರ!
ಕ.ಪ್ರ.ವಾರ್ತೆ ಬೆಳಗಾವಿ ಅ. 20-
ಕಬ್ಬಿಗೆ ದರ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಮುಸುಕಿನ ಗುದ್ದಾಟ ಈ ಬಾರಿಯೂ ಕಬ್ಬು ನುರಿಸುವ ಹಂಗಾಮು ಆರಂಭಕ್ಕೆ ಅಡ್ಡಿಯಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಅವರು ದಸರಾ ಮುಗಿದ ಬಳಿಕ ಕಬ್ಬಿಗೆ ದರ ನಿಗದಿ ಪಡಿಸಲಾಗುವುದು ಎಂದು ಘೋಷಿಸಿದ್ದರು. ಈಗ ದಸರಾ ಮುಗಿದು 5 ದಿನ ಕಳೆದರೂ ಸರ್ಕಾರದಿಂದ ಯಾವುದೇ ಕ್ರಮ ಇಲ್ಲ.
ಪ್ರತಿ ಟನ್ ಕಬ್ಬಿಗೆ ರೂ.3500 ದರ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ರೈತರ ಹೋರಾಟ ತೀವ್ರಗೊಳ್ಳುತ್ತಿದೆ. ಮುಧೋಳದಲ್ಲಿ ಶುಕ್ರವಾರ ರೈತರು ರೊಚ್ಚಿಗೆದ್ದು ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಚೇರಿ ಮೇಲೆ ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದರೂ ಅಲ್ಲಿಗೆ ಸಕ್ಕರೆ ಸಚಿವರು ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿಲ್ಲ ಎಂಬುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಕಬ್ಬು ನುರಿಸುತ್ತಿರುವ 57 ಕಾರ್ಖಾನೆಗಳ ಪೈಕಿ ಬೆಳಗಾಮಿಂುಲ್ಲಿ 22, ಬಾಗಲಕೋಟೆಂುಲ್ಲಿ 9, ಬಿಜಾಪುರದಲ್ಲಿ 5 ಕಾರ್ಖಾನೆಗಳಿವೆ. ಈ ಮೂರೂ ಜಿಲ್ಲೆಗಳ ಬಹುತೇಕ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದ ಅಕ್ಟೋಬರ್ 20ರ ಹೊತ್ತಿಗೆ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಿದ್ದವು. ಆದರೆ, ಈ ಬಾರಿ ಇನ್ನೂ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಆರಂಭಿಸಿಲ್ಲ. ಸಕಾಲಕ್ಕೆ ಕಾರ್ಖಾನೆಗಳು ಆರಂಭವಾಗದಿದ್ದರೆ ಕಬ್ಬು ಒಣಗಿ ಇಳುವರಿ ಕಳೆದುಕೊಳ್ಳುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ಮಂಡಳಿ ಹಲ್ಲು ಕಿತ್ತ ಹಾವು!
ಕಳೆದ ವರ್ಷ ವಿಧಾನಸಭೆ ಚುನಾವಣೆ ಮುಂದಿದ್ದ ಕಾರಣ ರೈತರ ಮೂಗಿಗೆ ತುಪ್ಪ ಒರೆಸುವಂತೆ ಕಬ್ಬು ನಿಂುಂತ್ರಣ ಮಂಡಳಿಂು ವಿಧೇಂುಕವನ್ನು ಬಿಜೆಪಿ ಸರ್ಕಾರ ಬೆಳಗಾಮಿಂುಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿತೇ ಹೊರತು ರೈತರಿಗೆ ಂೋಗ್ಯ ದರ ಕೊಡಿಸುವಲ್ಲಿ ಯಶಸ್ವಿಯಾಗಲಿಲ್ಲ. ನಂತರ ರಚನೆಂಾಗಿರುವ ಕಬ್ಬು ನಿಂುಂತ್ರಣ ಮಂಡಳಿಂುಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲಿಕರು, ರಾಜಕಾರಣಿಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದರಿಂದ ಅದು ಹಲ್ಲು ಕಿತ್ತ ಹಾವಿನಂತಿದೆ. ರೈತ ಮುಖಂಡರಿಗೆ, ಕಬ್ಬು ಸಂಶೋಧನೆಂುಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಈ ಮಂಡಳಿಂುಲ್ಲಿ ಅಧಿಕಾರ ನೀಡಿಲ್ಲ. ಆದಕ್ಕಾಗಿ ಇದು ರೈತರನ್ನು ವಂಚಿಸುವ ತಂತ್ರವಾಗಿದೆ. ಶಾಸಕ ಸಿದ್ದು ನ್ಯಾಮಗೌಡರ ಕಾರ್ಖಾನೆ ರೈತರ ಹೋರಾಟಕ್ಕೆ ಬೆಲೆ ಕೊಡದೇ ಕಬ್ಬು ನುರಿಸುವುದನ್ನು ಆರಂಭಿಸಿದೆ. ಕಾರಣ, ಸರ್ಕಾರ ಶುಗರ್ ಲಾಬಿಗೆ ಮತ್ತೆ ಮಣಿಂುಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಬಾರಿಯ 'ತಂತ್ರ'ಕ್ಕೆ ಶರಣು
ಕಳೆದ ವರ್ಷದಂತೆಯೇ ಈ ವರ್ಷವೂ ಕಬ್ಬಿನ ದರ ಘೋಷಣೆ ಮಾಡದೆಯೇ ಕಾರ್ಖಾನೆಗಳನ್ನು ಆರಂಭಿಸುವ ತಂತ್ರಗಾರಿಕೆ ಒಳಗಿಂದೊಳಗೆ ನಡೆಯುತ್ತಿದೆ. ಬೇರೆ ಕಾರ್ಖಾನೆಯವರು ಎಷ್ಟು ನೀಡುತ್ತಾರೋ ಅಷ್ಟೇ ದರವನ್ನು ನಾವು ನೀಡುತ್ತೇವೆ ಎಂಬ ಚಾಲಾಕಿತನವನ್ನು ಈ ವರ್ಷವೂ ಅನುಸರಿಸಲು ಕಾರ್ಖಾನೆಗಳು ಮುಂದಾಗಿವೆ.
ಕಳೆದ ವರ್ಷ ರೈತರ ಕಬ್ಬು ದರ ನಿಗದಿ ವಿಷಯದಲ್ಲಿ ವಿವಾದಕ್ಕೆ ಒಳಗಾಗಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ ಅವರು, ಈ ಬಾರಿ ಬಾಗಲಕೋಟೆ ಜಿಲ್ಲೆಂುಲ್ಲಿ ಂಾವ ಕಾರ್ಖಾನೆ ಅತಿ ಹೆಚ್ಚು ದರ ನೀಡುವುದೋ ತಾವು ಕೂಡ ಅಷ್ಟೇ ದರ ನೀಡುವುದಾಗಿ ಹೇಳಿಕೆ ನೀಡಿ ಸುಮ್ಮನಿದ್ದಾರೆ. ಕಳೆದ ವರ್ಷ 2200, 2300, 2400 ಎಂದು ದರ ಘೋಷಣೆ ಮಾಡುತ್ತ ಸಕ್ಕರೆ ಹಂಗಾಮು ಆರಂಭಿಸಿದ್ದ ಕಾರ್ಖಾನೆಗಳ ಪೈಕಿ, ಉತ್ತರ ಕರ್ನಾಟಕದ ಂಾವ ಕಾರ್ಖಾನೆಂೂ ರೈತರು ಕೇಳಿದ ಟನ್ಗೆ ಮೂರು ಸಾವಿರ ದರ ನೀಡಲಿಲ್ಲ. ಇನ್ನೊಂದೆಡೆ ರೈತರ ತೋಟಗಳಲ್ಲಿ ಈಗಾಗಲೇ ಬೆಳೆದು ನಿಂತಿರುವ ಕಬ್ಬು ಕಟಾವ್ ಮಾಡದ ಹೊರತು ಮುಂದಿನ ಬೆಳೆಗೆ ಅವಕಾಶ ಇಲ್ಲ. ಅದಕ್ಕಾಗಿ ಅನಿಮಾಂರ್ುವಾಗಿ ರೈತರು ಕಬ್ಬನ್ನು ಕಾರ್ಖಾನೆಗೆ ಸಾಗಿಸುವಂತಪ ಪರಿಸ್ಥಿತಿಂುನ್ನು ನಿರ್ಮಾಣವಾಗಲಿದೆ.
- ರಾಯಣ್ಣ ಆರ್.ಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

