ಮೋದಿ ಛೂಬಾಣ
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಿದೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡಗಳಲ್ಲಿ ಬಿಜೆಪಿಗೇ ಲಾಭವಾಗಲಿದೆ.

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂಬ ಬಿಜೆಪಿ ಘೋಷಣೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಿದೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡಗಳಲ್ಲಿ ಬಿಜೆಪಿಗೇ ಲಾಭವಾಗಲಿದೆ.
ಮಧ್ಯಪ್ರದೇಶ, ಛತ್ತೀಸ್ಗಡಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ರಾಜಸ್ಥಾನದಲ್ಲಿ ಕೈಯ್ಯನ್ನು ಎಳೆದು ಹಾಕಿ ಬಿಜೆಪಿ ಅಧಿಕಾರಕ್ಕೇರಲಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ಮುಂದುವರಿಸುವ ಕಾಂಗ್ರೆಸ್ನ ಕನಸಿಗೆ ಮತ್ತು ಗದ್ದುಗೆ ಏರುವ ಬಿಜೆಪಿ ಗುರಿಗೆ ತಡೆಯಾಗಲಿದೆ. ಆದರೆ ಬಿಜೆಪಿಗೆ ಹೆಚ್ಚು ಸ್ಥಾನ ಲಭಿಸಲಿದೆ ಎಂದು ಇಂಡಿಯಾ ಟಿವಿ-ಸಿ ವೋಟರ್ ಮತ್ತು ಟೈಮ್ಸ್ ನೌ ಹಾಗೂ ಹೆಡ್ಲೈನ್ಸ್ ಟುಡೇ, ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಗಳಿಂದ ಬಹಿರಂಗವಾಗಿದೆ.
ಒಂದು ವೇಳೆ ಈ ಸಮೀಕ್ಷೆ ನಿಜವಾದಲ್ಲಿ 2014ರ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಬೇಕು ಎಂಬ ಬಿಜೆಪಿ ಕನಸಿಗೆ ಮತ್ತಷ್ಟು ಬಲ ಬರಲಿದೆ. ಮಾತ್ರವಲ್ಲ ದೆಹಲಿ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆಯಲಿದೆ.
ದೆಹಲಿಯಲ್ಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಾಮಾಜಿಕ ಹೋರಾಟಗಾರ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಯ ಮತಗಳನ್ನು ಕಬಳಿಸಲಿದೆ. ಸಮೀಕ್ಷೆ ಪ್ರಕಾರ ಬಿಜೆಪಿ 30, ಕಾಂಗ್ರೆಸ್ 29, ಆಮ್ ಆದ್ಮಿ ಪಕ್ಷ 7, ಬಿಎಸ್ಪಿ 2 ಮತ್ತು ಇತರರು 2 ಸ್ಥಾನ ಪಡೆಯಲಿದ್ದಾರೆ. ಕಾಂಗ್ರೆಸ್ಗೆ ಸಮಾಧಾನ ತರುವ ಒಂದೇ ಒಂದು ವಿಚಾರವೆಂದರೆ ಮುಖ್ಯಮಂತ್ರಿಯಾಗಿ ಶೀಲಾ ದೀಕ್ಷಿತ್ ಅವರೇ ಇರಲಿ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಅಧಿಕಾರಕ್ಕೆ: ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ. 200 ಸ್ಥಾನಗಳ ಪೈಕಿ ಬಿಜೆಪಿ 118 ಸ್ಥಾನಗಳನ್ನು ಪಡೆಯಲಿದೆ. ಇತರರು 15 ಸ್ಥಾನಗಳನ್ನು ಪಡೆಯಲಿದ್ದಾರೆ. ರಾಜಸ್ಥಾನದಲ್ಲಿ ನಡೆದ ಸಮೀಕ್ಷೆ ಪ್ರಕಾರ ವಸುಂಧರಾರಾಜೆ ಮುಖ್ಯಮಂತ್ರಿಯಾಗಲಿ ಎಂದು ಮತದಾರರು ಅಭಿಪ್ರಾಯ ದಾಖಲಿಸಿದ್ದಾರೆ.
ಮಧ್ಯಪ್ರದೇಶ- ಛತ್ತೀಸ್ಗಡ: ಬಿಜೆಪಿಗೆ ಅತ್ಯಂತ ಸಂತಸ ತರುವ ವಿಚಾರ ಈ 2 ರಾಜ್ಯಗಳಿಂದಲೇ ಬರಲಿದೆ. ಅಂದರೆ ಬಿಜೆಪಿ ಈ ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸ್ಗಡ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಹ್ಯಾಟ್ರಿಕ್ ಸಾಧಿಸಲಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆ
ಟೈಮ್ಸ್ ನೌ, ಇಂಡಿಯಾ ಟಿವಿ, ಸಿ-ವೋಟರ್
ದೆಹಲಿ ಮಧ್ಯಪ್ರದೇಶ ರಾಜಸ್ಥಾನ ಛತ್ತೀಸ್ಗಡ
ಕಾಂಗ್ರೆಸ್ 29 80 64 40
ಬಿಜೆಪಿ 30 130 118 47
ಎಎಪಿ 07 -- -- --
ಬಿಎಸ್ಪಿ 04 05 03 02
ಇತರೆ 02 11 15 01
ಒಟ್ಟು 90 230 200 90
ಹೆಡ್ಲೈನ್ಸ್ ಟುಡೇ, ಸಿ-ವೋಟರ್
ಕಾಂಗ್ರೆಸ್ 28 84 76 47
ಬಿಜೆಪಿ 28 130 97 40
ಎಎಪಿ 09 -- -- --
ಒಟ್ಟು 90 230 200 90
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


