ಪ್ರಧಾನ ಸುದ್ದಿ

ತನಿಖೆಯ ಧೂಳಿನಿಂದ ಎದ್ದ ಗಣಿಗಾರಿಕೆ

ತನಿಖೆಯ ಧೂಳಿನಿಂದ ಎದ್ದ ಗಣಿಗಾರಿಕೆ
Published On :

ಕನ್ನಡಪ್ರಭ ವಾರ್ತೆ ಬಳ್ಳಾರಿ ಸೆ. 22-
ಒಂದೆಡೆ ಸಿಬಿಐ ಗಣಿಗಾರಿಕೆ ಅಕ್ರಮಕ್ಕೆ ಕಾರಣರಾದವರನ್ನು ಕಾನೂನಾತ್ಮಕವಾಗಿ ವಿಚಾರಣೆ ನಡೆಸಿ, ಶಿಕ್ಷಿಸಲು ಕ್ರಮ ಕೈಗೊಳ್ಳುತ್ತಿದ್ದರೆ, ಮತ್ತೊಂದೆಡೆ ಗಣಿಗಾರಿಕೆಯಿಂದ ಭವಿಷ್ಯದಲ್ಲಿ ಪರಿಸರಕ್ಕೆ ಆಗುವ ಹಾನಿಯನ್ನು ತಡೆಯಲು ಪುನಶ್ಚೇತನ ಮತ್ತು ಪುನರ್ ನಿರ್ಮಾಣ(ಆರ್ ಆ್ಯಂಡ್ ಆರ್) ಪೂರ್ತಿಗೊಳಿಸಿದ ಒಟ್ಟು 14 ಕಂಪನಿಗಳು ಗಣಿಗಾರಿಕೆಯನ್ನು ಆರಂಭಿಸಿವೆ!
ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಶುರು ಮಾಡಿರುವ 14 ಕಂಪನಿಗಳ ಪೈಕಿ 2 ಗಣಿಗಳು ಕೇಂದ್ರ ಸರ್ಕಾರದ ಎನ್‌ಎಂಡಿಸಿಗೆ ಸೇರಿದ್ದಾಗಿವೆ. ಈಗ ಆರಂಭವಾಗಿರುವ ಗಣಿ ಕಂಪನಿಗಳಿಗೆ ವರ್ಷಕ್ಕೆ ಇಂತಿಷ್ಟೇ ಗಣಿಗಾರಿಕೆ ಮಾಡಬೇಕೆಂದು ಸೂಚನೆ ಇದೆ. ಹಾಗಾಗಿ, ಎನ್‌ಎಂಡಿಸಿಯ ಎರಡೂ ಗಣಿ ಕಂಪನಿಗಳಿಗೆ ವರ್ಷಕ್ಕೆ 12 ದಶಲಕ್ಷ ಟನ್ ಅದಿರು ಉತ್ಪಾದಿಸಲು ಅವಕಾಶವಿದ್ದರೆ, ಉಳಿದ 12 ಕಂಪನಿಗಳು ವರ್ಷಕ್ಕೆ 6 ದಶಲಕ್ಷ ಟನ್ ಅದಿರು ಉತ್ಪಾದಿಸಬಹುದು.
ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ 'ಎ' ಮತ್ತು 'ಬಿ' ವರ್ಗದ ಗಣಿಗಾರಿಕೆಯ ಪ್ರದೇಶದಲ್ಲಿ 160.33 ಕೋಟಿ ವೆಚ್ಚದಲ್ಲಿ ಪರಿಸರದ ಆರ್ ಆ್ಯಂಡ್ ಆರ್ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯ ಪೂರ್ಣಗೊಳ್ಳದ ಹೊರತು ಗಣಿಗಾರಿಕೆಗೆ ಅವಕಾಶವಿಲ್ಲ ಎಂಬ ನೀತಿಯ ಹಿನ್ನೆಲೆಯಲ್ಲಿ ಆಯ್ದ 'ಎ' ಮತ್ತು 'ಬಿ' ವರ್ಗದ ಗಣಿಗಾರಿಕೆ ಪ್ರದೇಶದಲ್ಲಿ ಸರ್ಜರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ.
ಸಾವಿರಾರು ಕೋಟಿ ರುಪಾಯಿ ಲಾಭ ಗಳಿಸಿದ ಗಣಿ ಕಂಪನಿಗಳು ಪರಿಸರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಉನ್ನತಾಧಿಕಾರ ಸಂಸ್ಥೆ (ಸಿಇಸಿ)ಯ ಐಸಿಎಫ್‌ಆರ್‌ಇಯ ಮೂಲಕ ಗಣಿ ಪ್ರದೇಶದ ಆರ್ ಆ್ಯಂಡ್ ಆರ್ ಸಿದ್ಧಪಡಿಸಿ, ಪರಿಸರವನ್ನು ರಕ್ಷಿಸಲು ಆಯ್ದ ಗಣಿ ಕಂಪನಿಗಳಿಗೆ ಸೂಚಿಸಲಾಗಿದೆ.
ಗಣಿಗಾರಿಕೆ ಆರಂಭಿಸಿರುವ ಕಂಪನಿಗಳು: ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಎನ್‌ಎಂಡಿಸಿ (ಎಂ.ಎಲ್. ನಂ.2396), ಎನ್‌ಡಿಎಂಸಿ (1111), ಎಂಎಂಎಲ್, ಸ್ಮಯೋರ್ (2580), ಸ್ಮಯೋರ್ (2581), ವೆಸ್ಕೋ, ನದೀಮ್ ಮಿನರಲ್ಸ್, ಎಂಎಸ್‌ಪಿಎಲ್, ಪಿ. ಬಾಲಸುಬ್ಬಾಶೆಟ್ಟಿ, ಹನುಮಂತರಾವ್, ಬಿಕೆಜಿ, ಆರ್‌ಎಂಎಂಎಲ್ (2593), ಗವಿಸಿದ್ಧೇಶ್ವರ ಸೇರಿದಂತೆ ಇತರೆ ಗಣಿ ಕಂಪನಿಗಳು ಈಗಾಗಲೇ ಆರ್ ಆ್ಯಂಡ್ ಆರ್ ಯೋಜನೆ ಪೂರ್ಣಗೊಳಿಸಿ (ಎನ್‌ಎಂಡಿಸಿ ಬಿಟ್ಟಂತೆ) ಗಣಿಗಾರಿಕೆ ನಡೆಸುತ್ತಿವೆ. ಗಣಿ ಕಂಪನಿಗಳೇ ಸ್ವಂತ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು. ಐಸಿಎಫ್‌ಆರ್‌ಇ ಹಾಗೂ ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ಯಾವ ಕಂಪನಿಗಳು?
ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಎನ್‌ಎಂಡಿಸಿ (ಎಂ.ಎಲ್. ನಂ.2396), ಎನ್‌ಡಿಎಂಸಿ (1111), ಎಂಎಂಎಲ್, ಸ್ಮಯೋರ್ (2580), ಸ್ಮಯೋರ್ (2581), ವೆಸ್ಕೋ, ನದೀಮ್ ಮಿನರಲ್ಸ್, ಎಂಎಸ್‌ಪಿಎಲ್, ಪಿ. ಬಾಲಸುಬ್ಬಾಶೆಟ್ಟಿ, ಹನುಮಂತರಾವ್, ಬಿಕೆಜಿ, ಆರ್‌ಎಂಎಂಎಲ್ (2593), ಗವಿಸಿದ್ಧೇಶ್ವರ ಸೇರಿದಂತೆ ಇತರೆ ಗಣಿ ಕಂಪನಿಗಳು ಈಗಾಗಲೇ ಆರ್ ಆ್ಯಂಡ್ ಆರ್ ಯೋಜನೆ ಪೂರ್ಣಗೊಳಿಸಿ (ಎನ್‌ಎಂಡಿಸಿ ಬಿಟ್ಟಂತೆ) ಗಣಿಗಾರಿಕೆ ನಡೆಸುತ್ತಿವೆ. ಗಣಿ ಕಂಪನಿಗಳೇ ಸ್ವಂತ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು. ಐಸಿಎಫ್‌ಆರ್‌ಇ ಹಾಗೂ ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.