ಜೆಡಿಎಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು

ಭ್ರಷ್ಟಾಚಾರ ನಿರ್ಮೂಲನೆಗೆ ಸಮಗ್ರ ಲೋಕಪಾಲ ಕಾಯಿದೆ ಜತೆಗೆ ಕ್ರಮ. ಸಾರ್ವಜನಿಕ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿತಕ್ಕೆ ಒತ್ತು.
ಸರ್ಕಾರದ ವ್ಯವಹಾರದಲ್ಲಿ ಪೂರ್ಣ ಪಾರದರ್ಶಕತೆ. ಆರು ತಿಂಗಳಲ್ಲಿ ಭ್ರಷ್ಟಾಚಾರ ಕೇಸು ತೀರ್ಮಾನಕ್ಕೆ ಕೋರ್ಟ್ ಸಂಖ್ಯೆ ಹೆಚ್ಚಳ.
ಕೈಗಾರಿಕೆ, ವಾಣಿಜ್ಯ ರಂಗಕ್ಕೆ ಸರಿಸಮನಾಗಿ ಕೃಷಿಕರನ್ನು ನೋಡುವುದು. ನಾಶವಾದ ಬೆಳೆಗೆ ಸರಿಸಮನಾದ ಪರಿಹಾರಕ್ಕೆ ಕೃಷಿ ನೀತಿ ಜಾರಿ.
ನದಿಗಳು ರಾಷ್ಟ್ರದ ಆಸ್ತಿ ಎಂದು ಘೋಷಣೆ. ನದಿಗಳ ನೀರನ್ನು ಗರಿಷ್ಠ ಉಪಯೋಗಿಸಲು ರಾಷ್ಟ್ರದ ನದಿಗಳ ಜೋಡಣೆ.
ಕಾವೇರಿ, ಕೃಷ್ಣಾನದಿ ನೀರು ಹಂಚಿಕೆಯ ವಿವಾದ ಇತ್ಯರ್ಥ ಸೇರಿದಂತೆ ಎಲ್ಲ ನದಿಗಳಿಗೆ ಅನ್ವಯವಾಗುವ ನೀತಿ ಜಾರಿ.
ಯುವಕರಿಗೆ ಕೈಗಾರಿಕೆಗಳಲ್ಲಿ ಪ್ರೋತ್ಸಾಹ, ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ 6 ತಿಂಗಳಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಕೋರ್ಟ್.
ಭಯೋತ್ಪಾದನೆ ನೆಪದಲ್ಲಿ ಸಾಕ್ಷ್ಯಾಧಾರಗಳಿಲ್ಲದೆ ಯಾವ ಯುವಕರನ್ನೂ ಬಂಧನ ಮಾಡದಂತೆ ತ್ವರಿತ ನ್ಯಾಯಾಲಯದಲ್ಲಿ ತೀರ್ಮಾನ.
ಜಾತ್ಯತೀತ ಜನತಾದಳ ಲೋಕಸಭೆ ಚುನಾವಣೆಗಾಗಿ ಬಿಡುಗಡೆ ಮಾಡಿರುವ 'ನಮ್ಮ ಸಂಕಲ್ಪ' ಚುನಾವಣೆ ಪ್ರಣಾಳಿಕೆಯಲ್ಲಿರುವ ಮುಖ್ಯಾಂಶಗಳು. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


