ಪ್ರಧಾನ ಸುದ್ದಿ

ಬಾಬುಲಾಲ್ ಮನೆ ವಾಟರ್‌ ಟ್ಯಾಂಕ್ ಸರ್ಚ್

ಬಾಬುಲಾಲ್ ಮನೆ ವಾಟರ್‌ ಟ್ಯಾಂಕ್ ಸರ್ಚ್
ಬಾಬುಲಾಲ್ ಮನೆ ಮೇಲಿನ ನೀರಿನ ಟ್ಯಾಂಕಿನಲ್ಲಿ ಹಣವಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸಿದರು.
Published On :

ಬಳ್ಳಾರಿ: ಬಾಬುಲಾಲ್ ಪರುಶುರಾಮ್ ಪುರಿ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ, ಕೇಂದ್ರ ಕಸ್ಟಮ್ಸ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ಭಾನುವಾರವೂ ದಾಳಿ ಮಾಡಿದ್ದು, ಹಣ ಬಚ್ಚಿಟ್ಟಿರುವ ಶಂಕೆ ಮೇರೆಗೆ ವಾಟರ್‌ಟ್ಯಾಂಕ್ ಅನ್ನೂ ಶೋಧಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಏನೂ ಸಿಗಲಿಲ್ಲ ಎಂದು ಹೇಳಲಾಗಿದೆ.
ದಾಳಿ ವೇಳೆ ರು. 34.24 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರಗಳು, ಬ್ಯಾಂಕ್ ಪಾಸ್ ಪುಸ್ತಕ, ಜಮೀನು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಭಾನುವಾರ ಮಧ್ಯಾಹ್ನ 12.30ಕ್ಕೆ ಆದಾಯ ತೆರಿಗೆ, ಕೇಂದ್ರದ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆಗೆ ತೆರಳಿದಾಗ, ಬಾಬುಲಾಲ್ ಅವಕಾಶ ನಿರಾಕರಿಸಿ ಸರ್ಚ್ ವಾರೆಂಟ್ ಕೇಳಿದರು. ಬಳ್ಳಾರಿ ಉಪವಿಭಾಗಾಧಿಕಾರಿ ಅನಿರುದ್ಧ ಶ್ರಾವಣ್ ಸರ್ಚ್ ವಾರಂಟ್‌ನೊಂದಿಗೆ ತೆರಳಿ ಪರಿಶೀಲನೆ ಕಾರ್ಯ ಆರಂಭಿಸಿದರು.
ನೀರಿನ ಟ್ಯಾಂಕ್‌ನಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಹಣ ಸಂಗ್ರಹಿಸಿಡುತ್ತಾರೆಂಬ ಮಾಹಿತಿ ಮೇರೆಗೆ ಪೊಲೀಸರು ಏಣಿ ಇಟ್ಟು ಟ್ಯಾಂಕ್ ಪರಿಶೀಲಿಸಿದರು. ಅಲ್ಲಿ ಹಣ ಸಿಗಲಿಲ್ಲ. ಆದರೆ, ಸುದರ್ಶನ ಲಾಡ್ಜ್ ಸಮೀಪದ ಅವರ ಕಚೇರಿ ಪರಿಶೀಲಿಸುತ್ತಿದ್ದಾಗ ರು. 34 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರಗಳು ಪತ್ತೆಯಾಗಿವೆ. ಸಾಲದ ಒಪ್ಪಂದ ಪತ್ರಗಳು, ಹಲವು ಬ್ಯಾಂಕಿನ ಪಾಸ್, ಚೆಕ್ ಬುಕ್‌ಗಳು, ಅದಿರು ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳು, ಬಳ್ಳಾರಿ ನಗರ, ಗ್ರಾಮೀಣ, ಸಂಡೂರು ಸುತ್ತ ಅಪಾರ ಆಸ್ತಿ ಇರುವ ದಾಖಲೆಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.