ಅಂಬರೀಷ್ ಅಪಾರ್ಥ ನಿವಾರಿಸಿದ ಎಸ್ಎಂಕೆ

ಬೆಂಗಳೂರು: ತಮ್ಮ ಹೇಳಿಕೆಯಿಂದ ಮುನಿಸಿಕೊಂಡಿರುವ ವಸತಿ ಸಚಿವ ಅಂಬರೀಶ್ ಅವರಿಗೆ ಕರೆ ಮಾಡಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ 'ಅಪಾರ್ಥ ನಿವಾರಣೆ' ಮಾಡಿದ್ದಾರೆ. 'ಶ್ರೀರಂಗಪಟ್ಟಣದ ಪ್ರಚಾರ ಸಂದರ್ಭದಲ್ಲಿ ವ್ಯಕ್ತವಾದ ಮಾತು ನಿಮ್ಮನ್ನು ಗುರಿಯಾಗಿಸಿಕೊಂಡಿದ್ದಲ್ಲ. ಇಬ್ಬರು ಒಟ್ಟಾಗಿ ಪಕ್ಷದ ಗೆಲುವಿಗೆ ಪ್ರಯತ್ನಿಸೋಣ' ಎಂದು ಕೃಷ್ಣ ಹೇಳಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ತಪ್ಪಿಸಿದವರು ತಲೆತಗ್ಗಿಸಬೇಕು ಎಂದು ಪರೋಕ್ಷವಾಗಿ ಅಂಬರೀಶ್ಗೆ ಕೃಷ್ಣ ಟಾಂಗ್ ನೀಡಿದ್ದರು. ಇದು ಅಂಬರೀಶ್ ಅವರ ಮುನಿಸಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬರೀಶ್ಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿರುವ ಕೃಷ್ಣ 'ತಾವು ಭಾಷಣ ಮಾಡುವ ಸಂದರ್ಭದಲ್ಲಿ ವ್ಯಕ್ತವಾದ ಮಾತುಗಳು ನಿಮ್ಮನ್ನು ಗುರಿಯಾಗಿಸಿಕೊಂಡು ಹೇಳಿದ್ದಲ್ಲ. ನಿಮ್ಮ ವಿರುದ್ಧ ಮಾತನಾಡುವ ಯಾವುದೇ ಉದ್ದೇಶ ನನಗಿಲ್ಲ. ಇಬ್ಬರು ಒಟ್ಟಾಗಿ ಪಕ್ಷದ ಗೆಲುವಿಗೆ ಪ್ರಯತ್ನ ನಡೆಸೋಣ' ಎಂದು ಸಮಾಧಾನ ಪಡಿಸಿದ್ದಾರೆ. 'ನನ್ನ ಮಾತಿನಂದ ನಿಮಗೇನಾದರೂ ಬೇಸರವಾಗಿದ್ದರೆ ಖೇದ ವ್ಯಕ್ತಪಡಿಸಿತ್ತೇನೆ' ಎಂದು ಹೇಳಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಅಂಬರೀಶ್, ನಿಮ್ಮ ಎಲ್ಲ ಮಾತುಗಳು ನನಗೆ ಆಶೀರ್ವಾದ. ನಾನು ನಿಮ್ಮ ವಿರುದ್ಧ ಅನ್ಯತಾ ಭಾವಿಸಿಲ್ಲ. ಮಂಡ್ಯದಲ್ಲಿ ರಮ್ಯ ಗೆಲುವಿಗೆ ಶ್ರಮಿಸೋಣ. ಚಿಕ್ಕಪುಟ್ಟ ವಿಚಾರಗಳನ್ನು ದೀರ್ಘಕಾಲ ಬೆಳೆಸುವ ಸ್ವಭಾವ ನನ್ನದ್ದಲ್ಲ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ. ಈ ಮೂಲಕ ಮತದಾನಕ್ಕೆ ಕೆಲ ಗಂಟೆ ಇರುವಾಗ ಮಂಡ್ಯದಲ್ಲಿ ಟಿಸಿಲೊಡೆದಿದ್ದ ಕಾಂಗ್ರೆಸ್ ದಿಗ್ಗಜರ ಮುನಿಸು ಆಕ್ಷಣವೇ ಶಮನಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


