ಪ್ರಧಾನ ಸುದ್ದಿ

ಮೋದಿಗೆ ಜನರದ್ದಲ್ಲ ಕುರ್ಚಿಯದ್ದೇ ಚಿಂತೆ

ಮೋದಿಗೆ ಜನರದ್ದಲ್ಲ ಕುರ್ಚಿಯದ್ದೇ ಚಿಂತೆ
Published On :

ವಲ್ಸಾದ್(ಗುಜರಾತ್): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗಿ ಬಿದ್ದಿದ್ದಾರೆ. ಸೋನಿಯಾ ಗಾಂಧಿ ಅವರು ಗುಜರಾತ್‌ನಲ್ಲಿ ಪ್ರಚಾರ ನಡೆಸಿದರೆ, ರಾಹುಲ್ ಉತ್ತರ ಪ್ರದೇಶದಲ್ಲಿ ನಡೆಸಿದ ರ್ಯಾಲಿಯಲ್ಲಿ ಮೋದಿಯನ್ನು ತರಾಟೆಗೆ ತೆಗೆದುಕೊಂಡರು.

ಸೋನಿಯಾ ಹೇಳಿದ್ದು
-    ಅವರಿಗೆ(ಮೋದಿ) ಜನರ ಬಗ್ಗೆ ಕಾಳಜಿಯೇ ಇಲ್ಲ. ಪ್ರಧಾನಿ ಕುರ್ಚಿ ಬಿಟ್ಟು ಮತ್ತಿನ್ಯಾವುದರ ಕುರಿತೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ.
-   ಮೋದಿ ಪ್ರಧಾನಿಯಾದರೆ ದೇಶವನ್ನು ಸ್ವರ್ಗವಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ. ಆದರೆ, ದಿನನಿತ್ಯದ ಬದುಕಿನಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಮಾತನಾಡುವುದೇ ಇಲ್ಲ.
-    ಗುಜರಾತ್‌ನಲ್ಲಿ 11ಕ್ಕಿಂತ ಹೆಚ್ಚು ಸಂಪಾದಿಸುವವರನ್ನು ಬಡವರಾಗಿ ಪರಿಗಣಿಸಿಯೇ ಇಲ್ಲ. ಹಾಗಿದ್ದರೆ ಗುಜರಾತ್ ಸ್ವರ್ಗವೇ?
-    ಗುಜರಾತ್ ರಾಜ್ಯದ ಸಾಲ 1.75 ಲಕ್ಷ ಕೋಟಿ ತಲುಪಿದೆ. ಅನೇಕ ಹಳ್ಳಿಗಳಲ್ಲಿ ಇನ್ನೂ ಕುಡಿಯುವ ನೀರಿಲ್ಲ. ಐದಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಎರಡರಲ್ಲಿ ಒಂದು ಮಗು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದೆ. ಶಾಲೆ ತೊರೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.

ಕದ್ದಾಲಿಕೆ: ಮತ್ತೆ ಕುಟುಕಿದ ರಾಹುಲ್
-  ಮೋದಿ ತನ್ನನ್ನು ದೇಶದ ಕಾವಲುಗಾರನನ್ನಾಗಿ ನೇಮಿಸಿ, ದೇಶದ ಕೀಲಿ ಕೈ ತಮ್ಮ ಕೈಗೆ ನೀಡಿ ಎನ್ನುತ್ತಾರೆ. ಒಂದು ವೇಳೆ ಅವರ ಕೈಗೇನಾದರೂ ಕೀಲಿಕೈ ನೀಡಿದರೆ ಅವರು ಮತ್ತೆ ಅದಾನಿಯಂಥ ಉದ್ಯಮಿಗಳ ಬೆನ್ನಹಿಂದೆ ನಿಂತುಬಿಡುತ್ತಾರೆ.
-ಮಹಿಳೆಯ ಫೋನ್ ಕದ್ದಾಲಿಸುವ ಬಿಜೆಪಿಗೆ ಮಹಿಳೆಯರ ಬಗ್ಗೆ ಕಾಳಜಿಯೇ ಇಲ್ಲ. ಆದರೆ, ಕಾಂಗ್ರೆಸ್ ಮಹಿಳೆಯರನ್ನು ಗೌರವಿಸುತ್ತದೆ, ಅವರ ಸಬಲೀಕರಣದಲ್ಲಿ ನಂಬಿಕೆ ಇಟ್ಟಿದೆ.
-    ಯುಪಿಎ ಸರ್ಕಾರವೇನಾದರೂ ಅಧಿಕಾರಕ್ಕೆ ಬಂದರೆ ಎಲ್ಲ ಬಡವರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುತ್ತದೆ. ಎಲ್ಲ ಹಿರಿಯರಿಗೆ ಪಿಂಚಣಿ ಸಿಗುವಂತೆ ನೋಡಿಕೊಳ್ಳಲಾಗುತ್ತದೆ.
-  ಬಡ ರೈತನ ಮಗ ಬಡವನಾಗಿಯೇ ಉಳಿಯಬೇಕೆಂದು ಬಿಜೆಪಿ ಬಯಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.